ADVERTISEMENT

ಮ್ಯೂನಿಚ್ ವಿಶ್ವಕಪ್: ಸರಬ್ಜೋತ್‌ ಸಿಂಗ್‌ಗೆ ಚಿನ್ನ 

​ಪ್ರಜಾವಾಣಿ ವಾರ್ತೆ
Published 6 ಜೂನ್ 2024, 16:27 IST
Last Updated 6 ಜೂನ್ 2024, 16:27 IST
ಸರಬ್ಜೋತ್ ಸಿಂಗ್
ಸರಬ್ಜೋತ್ ಸಿಂಗ್   

ಮ್ಯೂನಿಚ್: ಭಾರತದ ಸರಬ್ಜೋತ್‌ ಸಿಂಗ್‌ ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವಕಪ್‌ ಪುರುಷರ 10 ಮೀಟರ್‌ ಏರ್‌ಪಿಸ್ತೂಲ್‌ ಸ್ಪರ್ಧೆಯಲ್ಲಿ ಚಿನ್ನ ಗೆದ್ದರು. ಹಾಲಿ ವಿಶ್ವ ಚಾಂಪಿಯನ್ ಮತ್ತು ನಾಲ್ಕು ಬಾರಿ ಒಲಿಂಪಿಯನ್ ಸ್ಪರ್ಧಿಸಿರುವ ಈ ಸ್ಪರ್ಧೆಯಲ್ಲಿ ಸಿಂಗ್ ಉತ್ತಮ ಸಾಧನೆ ಮಾಡಿದ್ದಾರೆ. 

ಎಂಟು ಸ್ಪರ್ಧಿಗಳ ಫೈನಲ್‌ನಲ್ಲಿ 22 ವರ್ಷದ ಭಾರತದ ಸ್ಪರ್ಧಿ 242.7 ಅಂಕಗಳನ್ನು ಗಳಿಸಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಚೀನಾದ ಬು ಶುವೈಹಾಂಗ್ ಅವರನ್ನು 0.2 ಅಂಕಗಳಿಂದ ಹಿಂದಿಕ್ಕಿದರು. ಜರ್ಮನಿಯ ರಾಬಿನ್ ವಾಲ್ಟರ್‌ ಅವರು ಕಂಚಿನ ಪದಕ ಗೆದ್ದರು. 

ಸರಬ್ಜೋತ್ ಬುಧವಾರ 588 ಅಂಕಗಳನ್ನು ಗಳಿಸಿ ನಿರ್ಣಾಯಕ ಪಂದ್ಯಕ್ಕೆ ಅರ್ಹತೆ ಪಡೆದಿದ್ದರು. ಫೈನಲ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್ ಚೀನಾದ ಬೊವೆನ್ ಜಾಂಗ್ ಮತ್ತು ನಾಲ್ಕು ಬಾರಿ ಒಲಿಂಪಿಯನ್ ಟರ್ಕಿಯ ಯೂಸುಫ್ ಡಿಕೆಕ್, ಬು ಮತ್ತು ವಾಲ್ಟರ್ ಇದ್ದರು.

ADVERTISEMENT

ಹೋದ ವರ್ಷ ಸರಬ್ಜೋತ್ ಅವರು ಭೋಪಾಲ್‌ನಲ್ಲಿ ಚಿನ್ನದ ಸಾಧನೆ ಮಾಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.