ಶೆನ್‌ಝೆನ್ (ಚೀನಾ): ಭಾರತದ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಅವರು ಚೀನಾ ಮಾಸ್ಟರ್ಸ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಎರಡನೇ ಶ್ರೇಯಾಂಕದ ಕಿಮ್ ಅಸ್ಟ್ರಪ್ ಮತ್ತು ಆಂಡರ್ಸ್ ಸ್ಕಾರಪ್ ರಾಸ್‌ಮುಸ್ಸೆನ್ ಅವರಿಗೆ ಆಘಾತ ನೀಡಿ ಸೆಮಿಫೈನಲ್ ಪ್ರವೇಶಿಸಿದರು.
ಪ್ಯಾರಿಸ್ ಒಲಿಂಪಿಕ್ಸ್ ಬಳಿಕ ಮೊದಲ ಬಾರಿ ಕಣಕ್ಕೆ ಇಳಿದಿರುವ ಭಾರತದ ಜೋಡಿಯು ಶುಕ್ರವಾರ ಪುರುಷರ ಡಬಲ್ಸ್‌ನ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ 21-16, 21-19ರಿಂದ ಡೆನ್ಮಾರ್ಕ್‌ನ ಆಟಗಾರರನ್ನು ಹಿಮ್ಮೆಟ್ಟಿಸಿತು.
ಕಳೆದ ಆವೃತ್ತಿಯಲ್ಲಿ ಫೈನಲ್ ತಲುಪಿದ್ದ ಭಾರತದ ಆಟಗಾರರು ನಾಲ್ಕರ ಘಟ್ಟದ ಹಣಾಹಣಿಯಲ್ಲಿ ದಕ್ಷಿಣ ಕೊರಿಯಾದ ಜಿನ್ ಯೋಂಗ್ ಮತ್ತು ಸಿಯೊ ಸೆಯುಂಗ್ ಜೇ ಅವರನ್ನು ಎದುರಿಸಲಿದ್ದಾರೆ.
ಪುರುಷರ ಸಿಂಗಲ್ಸ್‌ನಲ್ಲಿ ಕಣದಲ್ಲಿ ಉಳಿದಿದ್ದ ಭಾರತದ ಏಕೈಕ ಸ್ಪರ್ಧಿ ಲಕ್ಷ್ಯ ಸೇನ್ ಅವರೂ ಕ್ವಾರ್ಟರ್ ಫೈನಲ್‌ನಲ್ಲಿ ಹೊರಬಿದ್ದರು. ಅವರು 18–21, 15–21ರಿಂದ ಮೂರನೇ ಶ್ರೇಯಾಂಕದ ಆಂಡರ್ಸ್ ಆಂಟೊನ್‌ಸೆನ್ (ಡೆನ್ಮಾರ್ಕ್) ಅವರಿಗೆ ಮಣಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.