ADVERTISEMENT

ಬ್ಯಾಡ್ಮಿಂಟನ್ | ಅಗ್ರ ಕ್ರಮಾಂಕಕ್ಕೆ ಮರಳಿದ ಸಾತ್ವಿಕ್–ಚಿರಾಗ್

ಪಿಟಿಐ
Published 23 ಜನವರಿ 2024, 20:00 IST
Last Updated 23 ಜನವರಿ 2024, 20:00 IST
<div class="paragraphs"><p>ಚಿರಾಗ್‌ ಶೆಟ್ಟಿ ಮತ್ತು ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ</p></div>

ಚಿರಾಗ್‌ ಶೆಟ್ಟಿ ಮತ್ತು ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ

   

ನವದೆಹಲಿ: ಕಳೆದ ಎರಡು ವಾರಗಳ ಅವಧಿಯಲ್ಲಿ ಅಮೋಘ ಪ್ರದರ್ಶನ ನೀಡಿರುವ ಭಾರತದ ಡಬಲ್ಸ್‌ ಜೋಡಿ ಸಾತ್ವಿಕ್‌ ಸಾಯಿರಾಜ್ ರಣಕಿರೆಡ್ಡಿ–ಚಿರಾಗ್‌ ಶೆಟ್ಟಿ ಅವರು ಮಂಗಳವಾರ ಪ್ರಕಟವಾದ ವಿಶ್ವ ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ರ‍್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನಕ್ಕೆ ಏರಿದ್ದಾರೆ.

ಮಲೇಷ್ಯಾ ಓಪನ್ ಸೂಪರ್‌ 1000 ಟೂರ್ನಿ ಮತ್ತು ಇಂಡಿಯನ್ ಓಪನ್ ಸೂಪರ್ 750 ಟೂರ್ನಿಯಲ್ಲಿ ಭಾರತದ ಆಟಗಾರರು ರನ್ನರ್ಸ್‌ ಅಪ್ ಸ್ಥಾನ ಪಡೆದಿದ್ದರು. ಇದರ ಬೆನ್ನಲ್ಲೇ ವಿಶ್ವ ಕ್ರಮಾಂಕದಲ್ಲಿ ಮರಳಿ ಅಗ್ರಸ್ಥಾನ ಪಡೆದು ಕೊಂಡಿದ್ದಾರೆ. ಕಳೆದ ವರ್ಷ ನಡೆದ ಹಾಂಗ್‌ಝೌ ಏಷ್ಯನ್‌ ಗೇಮ್ಸ್‌ನಲ್ಲಿ ಸ್ವರ್ಣ ಗೆದ್ದ ನಂತರ ಸಾತ್ವಿಕ್– ಚಿರಾಗ್‌ ವಿಶ್ವ ಕ್ರಮಾಂಕದಲ್ಲಿ ಅಗ್ರಸ್ಥಾನಕ್ಕೆ ಏರಿದ್ದರು.

ADVERTISEMENT

ಭಾರತದ ಆಟಗಾರರ ಪೈಕಿ ಎಚ್‌.ಎಸ್‌.ಪ್ರಣಯ್ ಎಂಟನೇ ಕ್ರಮಾಂಕ ಪಡೆದಿದ್ದಾರೆ. ಲಕ್ಷ್ಯ ಸೆನ್, ಕಿದಂಬಿ ಶ್ರೀಕಾಂತ್‌, ಪ್ರಿಯಾಂಶು ರಾಜಾವತ್ ಕ್ರಮವಾಗಿ 19, 25 ಮತ್ತು 30ನೇ ಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.