ADVERTISEMENT

ಅಂಧರ ವಿಶ್ವ ಚೆಸ್‌: ಶ್ರೇಯಾಂಕಿತರ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2024, 16:08 IST
Last Updated 28 ಸೆಪ್ಟೆಂಬರ್ 2024, 16:08 IST
<div class="paragraphs"><p>ಮಿಶಾಲ್ ರೇಸಿಸ್‌ (ಬಲಗಡೆ) ಎದುರು ಭಾರತದ ಅಶ್ವಿನ್ ರಾಜೇಶ್ </p></div>

ಮಿಶಾಲ್ ರೇಸಿಸ್‌ (ಬಲಗಡೆ) ಎದುರು ಭಾರತದ ಅಶ್ವಿನ್ ರಾಜೇಶ್

   

ಪ್ರಜಾವಾಣಿ ಚಿತ್ರ

ಬೆಂಗಳೂರು: ಶ್ರೇಯಾಂಕ ಆಟಗಾರರು, ಶನಿವಾರ ಇಲ್ಲಿ ಆರಂಭವಾದ ಅಂಧರ ಮತ್ತು ದೃಷ್ಟಿದೋಷವುಳ್ಳವರ ವಿಶ್ವ ಜೂನಿಯರ್‌ ಮತ್ತು ಮಹಿಳಾ ಚಾಪಿಯನ್‌ಷಿಪ್‌ನಲ್ಲಿ ನಿರೀಕ್ಷೆಯಂತೆ ಜಯಗಳಿಸಿದರು.

ADVERTISEMENT

ಜೂನಿಯರ್ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ರೇಸಿಸ್‌ ಮೈಕೆಲ್ (ಪೋಲೆಂಡ್‌), ಭಾರತ ಅಶ್ವಿನ್ ರಾಜೇಶ್‌ ಅವರನ್ನು ಮಣಿಸಿದರು. ಎರಡನೇ ಬೋರ್ಡ್‌ನಲ್ಲಿ ಸಾಲೊಮನ್ ಜೂಲಿಯಾ (ಪೋಲೆಂಡ್‌), ಭಾರತದ ಸ್ಯಾಮ್ ಪೆನಿಯಲ್ ಮೇಲೆ ಜಯಗಳಿಸಿದರು. ಈ ವಿಭಾಗದಲ್ಲಿ ಕಣದಲ್ಲಿರುವ ಏಕೈಕ ಮಹಿಳಾ ಸ್ಪರ್ಧಿಯಾಗಿರುವ ಜೂಲಿಯಾ ಆರಂಭದ ಹಂತದಲ್ಲೇ ಮೇಲುಗೈ ಸಾಧಿಸಿ 17ನೇ ನಡೆಯಲ್ಲಿ ಗೆಲುವು ಖಚಿತಪಡಿಸಿಕೊಂಡರು.

ಮಹಿಳೆಯರ ವಿಭಾಗದಲ್ಲೂ ಹಾಲಿ ಚಾಂಪಿಯನ್ ಮತ್ತು ಅಗ್ರ ಶ್ರೇಯಾಂಕದ ಆಟಗಾರ್ತಿ ಸಿಲ್ಟ್‌ಝೋವಾ ಲುಬೊವ್‌ ಮೊದಲ ಪಂದ್ಯ ಗೆದ್ದರು.

ಎರಡು ವಿಭಾಗಗಳಲ್ಲಿ ಒಟ್ಟು 32 ಮಂದಿ ಭಾಗವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.