ADVERTISEMENT

ಸೀನಿಯರ್ ಮಿಶ್ರ ನೆಟ್‌ಬಾಲ್ ಚಾಂಪಿಯನ್‌ಷಿಪ್‌: ಕರ್ನಾಟಕ ತಂಡ ಸೆಮಿಗೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2024, 16:21 IST
Last Updated 3 ಅಕ್ಟೋಬರ್ 2024, 16:21 IST
ಕ್ವಾರ್ಟರ್‌ ಫೈನಲ್‌ನಲ್ಲಿ ಕರ್ನಾಟಕ ಮತ್ತು ದೆಹಲಿ ತಂಡದ ಆಟಗಾರರ ಮಧ್ಯೆ ಚೆಂಡಿಗಾಗಿ ಪೈಪೋಟಿ
ಕ್ವಾರ್ಟರ್‌ ಫೈನಲ್‌ನಲ್ಲಿ ಕರ್ನಾಟಕ ಮತ್ತು ದೆಹಲಿ ತಂಡದ ಆಟಗಾರರ ಮಧ್ಯೆ ಚೆಂಡಿಗಾಗಿ ಪೈಪೋಟಿ   

ಬೆಂಗಳೂರು: ಸಾಂಘಿಕ ಪ್ರದರ್ಶನ ನೀಡಿದ ಕರ್ನಾಟಕ ತಂಡವು ಇಲ್ಲಿ ನಡೆಯುತ್ತಿರುವ ಸೀನಿಯರ್ ಮಿಶ್ರ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ಫೈನಲ್‌ನಲ್ಲಿ 39–19ರಿಂದ ದೆಹಲಿ ತಂಡವನ್ನು ಸುಲಭವಾಗಿ ಮಣಿಸಿ ನಾಲ್ಕರ ಘಟ್ಟಕ್ಕೆ ಲಗ್ಗೆ ಹಾಕಿತು.

ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಕೂಟದ ಮೂರನೇ ದಿನವಾದ ಗುರುವಾರ 16ರ ಘಟ್ಟದ ಪಂದ್ಯದಲ್ಲಿ ಕರ್ನಾಟಕ ತಂಡವು 19–5ರಿಂದ ರಾಜಸ್ಥಾನವನ್ನು ತಂಡವನ್ನು ಸೋಲಿಸಿತ್ತು.

ಇತರ ಕ್ವಾರ್ಟರ್‌ ಫೈನಲ್‌ನಲ್ಲಿ ಉತ್ತರಖಂಡ 26–17ರಿಂದ ಅಸ್ಸಾಂ ತಂಡವನ್ನು; ಛತ್ತೀಸ್‌ಗಢ 36–22ರಿಂದ ತೆಲಂಗಾಣ ತಂಡವನ್ನು; ಹರಿಯಾಣ 20–17ರಿಂದ ಪುದುಚೇರಿ ತಂಡವನ್ನು ಮಣಿಸಿ ಸೆಮಿಫೈನಲ್‌ ಪ್ರವೇಶಿಸಿದವು.

ADVERTISEMENT

ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಉತ್ತರಖಂಡ 11–09ರಿಂದ ಆಂಧ್ರಪ್ರದೇಶ ತಂಡವನ್ನು; ಛತ್ತೀಸ್‌ಗಢ 17–9ರಿಂದ ತಮಿಳುನಾಡು ತಂಡವನ್ನು; ಪುದುಚೇರಿ 17–15ರಿಂದ ಮಧ್ಯಪ್ರದೇಶ ತಂಡವನ್ನು; ಹರಿಯಾಣ 13–8ರಿಂದ ಬಿಹಾರ ತಂಡವನ್ನು; ದೆಹಲಿ 15–9ರಿಂದ ಗೋವಾ ತಂಡವನ್ನು; ತೆಲಂಗಾಣ 21–12ರಿಂದ ಉತ್ತರ ಪ್ರದೇಶ ತಂಡವನ್ನು; ಅಸ್ಸಾಂ 17–11ರಿಂದ ಜಮ್ಮು ಕಾಶ್ಮೀರ ತಂಡವನ್ನು ಮಣಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.