ಬೆಂಗಳೂರು: ಟೋಕಿಯೊ ಒಲಿಂಪಿಕ್ಸ್ 2020ರ ವಿಡಿಯೊಗಳನ್ನು ಸಾಮಾಜಿಕ ತಾಣಗಳಲ್ಲಿ ಪ್ರಸಾರ ಮಾಡುವುದಕ್ಕೆ ಮತ್ತು ಹಂಚಿಕೊಳ್ಳುವುದಕ್ಕೆ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ನಿರ್ಬಂಧ ಹೇರಿದೆ.
ಅಥ್ಲೀಟ್‌ಗಳು ಕೂಡ ಒಲಿಂಪಿಕ್ಸ್ ಸ್ಥಳದಿಂದ ವಿಡಿಯೊಗಳನ್ನು ಸಾಮಾಜಿಕ ತಾಣಗಳಲ್ಲಿ ಲೈವ್ ಇಲ್ಲವೇ ವಿಡಿಯೊ ಪೋಸ್ಟ್ ಮಾಡುವುದಕ್ಕೆ ಐಒಸಿ ನಿರ್ಬಂಧವಿದೆ.
ಒಲಿಂಪಿಕ್ಸ್ ನೇರಪ್ರಸಾರ ಮತ್ತು ವಿಡಿಯೊ ಪ್ರಸಾರದ ಹಕ್ಕು ಹೊಂದಿರುವ ಬ್ರಾಡ್‌ಕಾಸ್ಟ್ ಕಂಪನಿಗಳ ಹಕ್ಕು ರಕ್ಷಣೆಯ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಐಒಸಿ ಗುರುವಾರ ಹೇಳಿದೆ.
ಎರಡು ಚಿನ್ನದ ಪದಕ ಪಡೆದಿರುವ ಜಮೈಕಾದ ಅಥ್ಲೀಟ್ ಎಲೆನ್ ಥಾಂಪ್ಸನ್ ಹೆರಾ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಒಲಿಂಪಿಕ್ಸ್ ವಿಡಿಯೊ ಒಂದನ್ನು ಹಂಚಿಕೊಂಡಿದ್ದರು. ಅದಾದ ಬೆನ್ನಲ್ಲೇ, ಒಲಿಂಪಿಕ್ಸ್ ಬ್ರಾಡ್‌ಕಾಸ್ಟ್ ಹಕ್ಕುಗಳನ್ನು ಮೀರಿರುವ ಆರೋಪದಲ್ಲಿ ಅವರ ಇನ್‌ಸ್ಟಾಗ್ರಾಂ ಖಾತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಒಲಿಂಪಿಕ್ಸ್ ಕ್ಷಣಗಳ ಫೋಟೊಗಳನ್ನು ಹಂಚಿಕೊಳ್ಳಲು ಐಒಸಿ ಯಾವುದೇ ನಿರ್ಬಂಧ ವಿಧಿಸಿಲ್ಲ. ಆದರೆ ಒಲಿಂಪಿಕ್ಸ್ ವಿಡಿಯೊಗಳ ಪ್ರಸಾರದ ಹಕ್ಕು ಬ್ರಾಡ್‌ಕಾಸ್ಟ್ ಕಂಪನಿಗಳದ್ದಾಗಿರುತ್ತದೆ ಎಂದು ಐಒಸಿ ವಕ್ತಾರ ಮಾರ್ಕ್ಸ್ ಆ್ಯಡಮ್ಸ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.