ನವದೆಹಲಿ: ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದದ್ದು, ಜೀವನಕ್ಕೆ ಹೊಸ ತಿರುವು ನೀಡಿದೆ. ಕಳೆದ ವರ್ಷದ ಕಹಿಯನ್ನು ಮರೆಸಿದೆ ಎಂದು ಬಾಕ್ಸರ್ ಶಿವಥಾಪ ಹೇಳಿದ್ದಾರೆ.
ಆಕ್ರಮಣಕಾರಿಯಾಗಿ ಆಡುವುದು ನನಗಿಷ್ಟ. ರಿಂಗ್ ಒಳಗೆ ಇಳಿದಾಗ ಜಗತ್ತು, ಪ್ರಸಿದ್ಧಿ ಎಲ್ಲವನ್ನು ಮರೆತು ಆ ಕ್ಷಣದೊಂದಿಗೆ ಹೋರಾಡುತ್ತೇನೆ. ಹೀಗಾಗಿ ಈ ವರ್ಷ ನನಗೆ ಜಯ ಒಲಿದಿದೆ ಎಂದು ಹೇಳಿದ್ದಾರೆ.
ಮೊದಲ ಬೆಲ್ ಒಳಗೆ ಎದುರಾಳಿಯ ಮನಸ್ಸಿನ ಮೇಲೆ ಭಯ ಮೂಡಿಸುವುದೇ ನನ್ನ ಗುರಿ. ಧೈರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ನನ್ನ ಪ್ರಯತ್ನ ಮುಂದುವರಿಸುತ್ತೇನೆ. ಅಂತಿಮವಾಗಿ ಗೆಲ್ಲುವುದಷ್ಟೇ ನನಗೆ ಮುಖ್ಯ. ಮುಂಬರುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲೂ ಉತ್ತಮ ಸಾಧನೆ ತೋರುತ್ತೇನೆ ಎಂಬ ವಿಶ್ವಾಸವ್ಯಕ್ತಪಡಿಸಿದ್ದಾರೆ.
ಶಿವ ಥಾಪ ಏಷ್ಯನ್ ಬಾಕ್ಸಿಂಗ್‌ನಲ್ಲಿ ನಾಲ್ಕು ಪದಕ ಗಳಿಸಿದ ಮೊದಲ ಭಾರತೀಯ. 2013ರಲ್ಲಿ ಚಿನ್ನ, 2015 ಮತ್ತು 2017ರಲ್ಲಿ ಬೆಳ್ಳಿ, 2019ರಲ್ಲಿ ಕಂಚು ಗೆದ್ದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.