ADVERTISEMENT

ಏಷ್ಯನ್‌ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಶಿವಗೆ ಬೆಳ್ಳಿ

ಪಿಟಿಐ
Published 12 ನವೆಂಬರ್ 2022, 19:31 IST
Last Updated 12 ನವೆಂಬರ್ 2022, 19:31 IST
ಶಿವ ಥಾಪಾ– ಪಿಟಿಐ ಚಿತ್ರ
ಶಿವ ಥಾಪಾ– ಪಿಟಿಐ ಚಿತ್ರ   

ನವದೆಹಲಿ: ಭಾರತದ ಶಿವ ಥಾಪಾ ಅವರು ಏಷ್ಯನ್‌ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಬೆಳ್ಳಿ ಪದಕ ಗಳಿಸಿದರು. ಚಾಂಪಿಯನ್‌ಷಿಪ್‌ ಇತಿಹಾಸದಲ್ಲಿ ಇದು ಅವರಿಗೆ ಒಟ್ಟಾರೆ ಆರನೇ ಪದಕ.

ಜೋರ್ಡಾನ್‌ನ ಅಮ್ಮಾನ್‌ನಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ 63 ಕೆಜಿ ವಿಭಾಗದ ಫೈನಲ್‌ ಬೌಟ್‌ನಲ್ಲಿ ಉಜ್ಬೆಕಿಸ್ತಾನದ ಅಬ್ದುಲ್ಲಾಯೆವ್ ರಸ್ಲಾನ್‌ ಎದುರು ಶಿವ ಸ್ಪರ್ಧಿಸಿದ್ದರು. ಆದರೆ ಬಲ ಮೊಣಕಾಲು ಗಾಯದಿಂದಾಗಿ ಭಾರತದ ಬಾಕ್ಸರ್‌ ಬೌಟ್‌ನ ನಡುವೆಯೇ ಹಿಂದೆ ಸರಿದರು.

2013ರ ಆವೃತ್ತಿಯಲ್ಲಿ ಚಿನ್ನ ಗೆದ್ದಿದ್ದ 28 ವರ್ಷದ ಶಿವ, 2017, 2021ರಲ್ಲಿ ಬೆಳ್ಳಿ ಮತ್ತು 2015, 2019ರಲ್ಲಿ ಕಂಚು ಜಯಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.