ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಭಾರತದ ಅಥ್ಲೀಟುಗಳ ಪಟ್ಟಿಯನ್ನು ವಿಶ್ವ ಅಥ್ಲೆಟಿಕ್ಸ್ (ವರ್ಲ್ಡ್ ಅಥ್ಲೆಟಿಕ್ಸ್) ಶುಕ್ರವಾರ ರಾತ್ರಿ ಪ್ರಕಟಿಸಿದ್ದು, ಇದರಲ್ಲಿ ಷಾಟ್‌ಪಟ್ ಸ್ಪರ್ಧಿ ಅಭಾ ಖತುವಾ ಅವರ ಹೆಸರು ಇಲ್ಲ. ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸಲು ಆಭಾ ಈಗ ಪೋಲೆಂಡ್‌ನಲ್ಲಿ ತರಬೇತಿಯಲ್ಲಿದ್ದಾರೆ.
ಆಭಾ ಅವರು ರ‍್ಯಾಂಕಿಂಗ್ ಮೂಲಕ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದು, ಪೋಲೆಂಡ್‌ನ ಸ್ಪಾಲಾದಲ್ಲಿ ತರಬೇತಿ ಪಡೆಯಲು ಇತರ ಅಥ್ಲೀಟುಗಳ ಜೊತೆ ಕಳೆದ ಗುರುವಾರ ಇಲ್ಲಿಂದ ತೆರಳಿದ್ದರು. ಅಥ್ಲೀಟುಗಳು ತರಬೇತಿ ನಂತರ ಹೊರಟು ಜುಲೈ 28ರಂದು ಪ್ಯಾರಿಸ್ ತಲುಪಲಿದ್ದಾರೆ.
ಪಟ್ಟಿಯಲ್ಲಿ ಆಭಾ ಹೆಸರು ನಾಪತ್ತೆಗೆ ಕಾರಣ ತಿಳಿದುಬಂದಿಲ್ಲ. ಪ್ಯಾರಿಸ್ ಕೂಟದಲ್ಲಿ ಭಾಗವಹಿಸಲು ಕಳುಹಿಸಿದ್ದ 30 ಅಥ್ಲೀಟುಗಳ ಪಟ್ಟಿಯಲ್ಲಿ 29 ಮಂದಿಯ ಹೆಸರುಗಳು ವಿಶ್ವ ಅಥ್ಲೆಟಿಕ್ಸ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಇವೆ. ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಮೂಲಕ ಭಾರತ ಅಥ್ಲೆಟಿಕ್ ಫೆಡರೇಷನ್ (ಎಎಫ್‌ಐ) ಅಥ್ಲೀಟುಗಳ 30 ಮಂದಿಯ ಹೆಸರುಗಳನ್ನು ಕಳಿಸಿತ್ತು.
ಈ ಬಗ್ಗೆ ಅಂತರರಾಷ್ಟ್ರೀಯ ಸಂಸ್ಥೆ ಸಂಪರ್ಕಕ್ಕೆ ಸಿಕ್ಕಿಲ್ಲ. ಎಎಫ್‌ಐ ಅಧಿಕಾರಿ ಕೂಡ ಪ್ರತಿಕ್ರಿಯೆ ನೀಡಿಲ್ಲ. ಹೆಸರು ಕೈಬಿಟ್ಟುಹೋಗಿರುವ ವಿಷಯವನ್ನು ವಿಶ್ವ ಅಥ್ಲೆಟಿಕ್ಸ್ ಗಮನಕ್ಕೆ ತರಲಾಗಿದೆ ಎಂದು ಇನ್ನೊಬ್ಬ ಅಧಿಕಾರಿ ತಿಳಿಸಿದರು. ಆಭಾ ಅವರೂ ವಾಟ್ಸ್ ಆ್ಯಪ್ ಕರೆ ಅಥವಾ ಸಂದೇಶಕ್ಕೆ ಪ್ರತಿಕ್ರಿಯಿಸಿಲ್ಲ.
ಕಳೆದ ಏಪ್ರಿಲ್‌ನಲ್ಲಿ ಆಭಾ ಅವರು ಭುವನೇಶ್ವರದಲ್ಲಿ ನಡೆದ ಫೆಡರೇಷನ್ ಕಪ್‌ನಲ್ಲಿ 18.41 ಮೀ ಥ್ರೊದೊಡನೆ ರಾಷ್ಟ್ರೀಯ ದಾಖಲೆ ಮುರಿದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.