ಮೂಡುಬಿದಿರೆ (ದಕ್ಷಿಣ ಕನ್ನಡ): ತಮ್ಮದೇ ಸಂಸ್ಥೆಯ ಪ್ರತಿಸ್ಪರ್ಧಿಗಳ ಸವಾಲು ಮೀರಿದ ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸಸ್‌ನ ಶ್ರವಣ್ ಗಿರಿ ಮತ್ತು ಭೂಮಿಕಾ ಅವರು ಇಲ್ಲಿನ ಸ್ವರಾಜ್ಯ ಮೈದಾನದ ಟ್ರ್ಯಾಕ್‌ನಲ್ಲಿ ಮಿಂಚು ಹರಿಸಿದರು.
ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ಆಶ್ರಯದಲ್ಲಿ ಮಂಗಳವಾರ ಆರಂಭಗೊಂಡ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಅಥ್ಲೆಟಿಕ್ ಕೂಟದಲ್ಲಿ ಶ್ರವಣ್ ಮತ್ತು ಭೂಮಿಕಾ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ 100 ಮೀಟರ್ಸ್ ಓಟದ ಚಿನ್ನ ಗೆದ್ದುಕೊಂಡರು. ಶ್ರವಣ್ ಕೂಟ ದಾಖಲೆಯನ್ನೂ ಬರೆದರು.
ಮೊದಲ ದಿನ ಒಟ್ಟು 5 ಕೂಟ ದಾಖಲೆಗಳನ್ನು ಸ್ಥಾಪಿಸಿದ ಆಳ್ವಾಸ್ ಸಂಸ್ಥೆಯ ವಿದ್ಯಾರ್ಥಿಗಳು 13 ಪಾಯಿಂಟ್‌ಗಳೊಂದಿಗೆ ಪಾರಮ್ಯ ಮೆರೆದಿದ್ದಾರೆ. ಉಡುಪಿಯ ಎಸ್‌ಡಿಎಂ ಆಯುರ್ವೇದ ಕಾಲೇಜು 10 ಪಾಯಿಂಟ್ಸ್ ಕಲೆ ಹಾಕಿ ದ್ವಿತೀಯ ಸ್ಥಾನದಲ್ಲಿದೆ. 400 ಮೀ ಹರ್ಡಲ್ಸ್‌ನ ಪುರುಷ ಮತ್ತು ಮಹಿಳಾ ವಿಭಾಗದ ಅಥ್ಲೀಟ್ಸ್ ದಾಖಲೆ ಬರೆದರು.
ಮೊದಲ ದಿನದ ಫಲಿತಾಂಶಗಳು:
ಪುರುಷರು: 100 ಮೀ ಓಟ: ಶ್ರವಣ್ ಗಿರಿ (ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸಸ್)–1, ಸೂರ್ಯ ಪಿ (ಆಳ್ವಾಸ್)–2, ಅಕ್ಷ್ ಬೆನೆಡಿಕ್ಟ್ (ಶ್ರೀಗಂಗೋತ್ರಿ ಕಾಲೇಜ್ ಆಫ್ ನರ್ಸಿಂಗ್)–3. ಕಾಲ: 10.9 ಸೆ. ಕೂಟ ದಾಖಲೆ: ಹಿಂದಿನ ದಾಖಲೆ 11.2 ಸೆ, ಅನಿಲ್ ಕುಮಾರ್, ಜೆಜೆಎಂಸಿ ದಾವಣಗೆರೆ, 2001); 400 ಮೀ: ಕಾರ್ತಿಕ್ (ಆಳ್ವಾಸ್)-1, ಸದನ್ (ಆಳ್ವಾಸ್)–2, ಅಂಕಿತ್ ಬಿ.ಶೆಟ್ಟಿ (ಎಸ್‌ಡಿಎಂ, ಧಾರವಾಡ)–3. ಕಾಲ: 53.4 ಸೆ; 5000 ಮೀ: ಪ್ರಣವ್ ಜಗದೀಶ್ (ಲಕ್ಷ್ಮಿ ಸ್ಮಾರಕ ಫಿಜಿಯೊಥೆರಪಿ ಕಾಲೇಜು, ಮಂಗಳೂರು)–1, ಥಾಮಸ್ ಪೌಲ್ (ಸೇಂಟ್ ಆ್ಯನ್ಸ್ ಕಾಲೇಜ್ ಆಫ್ ನರ್ಸಿಂಗ್, ಮೂಲ್ಕಿ)–2, ಚಂದನ್ ಎಸ್ (ಆಳ್ವಾಸ್)–3. ಕಾಲ: 18 ನಿಮಿಷ 57.6ಸೆ; 400 ಮೀ. ಹರ್ಡಲ್ಸ್: ಕಾರ್ತಿಕ್ (ಆಳ್ವಾಸ್)–1, ಸದನ್ (ಆಳ್ವಾಸ್)–2, ಅಂಕಿತ್ ಶೆಟ್ಟಿ (ಎಸ್‌ಡಿಎಂ ಧಾರವಾಡ). ಕಾಲ: 53.4 ಸೆ. (ಕೂಟ ದಾಖಲೆ: ಹಿಂದಿನ ದಾಖಲೆ: ಅರ್ಜುನ್ ಜಾಯ್, ಸಿಟಿ ಕಾಲೇಜ್ ಮಂಗಳೂರು 1ನಿ.66ಸೆ, 2007); ಹೈಜಂಪ್ ಮನು (ಆಳ್ವಾಸ್)–1, ಕಾರ್ತಿಕ್ (ಆಳ್ವಾಸ್)–2, ಜೋಯಲ್ ಕೆ.ಸನ್ನಿ (ಸದರ್ನ್ ಕಾಲೇಜ್, ಬೆಂಗಳೂರು)–3. ಎತ್ತರ: 1.86 ಮೀ. ಕೂಟ ದಾಖಲೆ: ಹಿಂದಿನ ದಾಖಲೆ: 1.80 ಮೀ, ರಾಘವೇಂದ್ರ, ಸಿಎಚ್‌ಎಂಎಸ್, ಚಿತ್ರದುರ್ಗ, 2003; ಶಾಟ್‌ಪಟ್: ರಾಕೇಶ್ (ಆಳ್ವಾಸ್)–1, ಕರಣ್ ರಾಜೇಶ್ (ಎಸ್‌ಡಿಎಂ ಹಾಸನ)–2, ರತನೇಶ್ ಆರ್ (ಶಾಂತಾ ಗ್ರೂಪ್ ನಂದನಗನಹಳ್ಳಿ)–3. ದೂರ: 11.12ಮೀ; ಜಾವೆಲಿನ್ ಥ್ರೋ: ರಾಕೇಶ್ (ಆಳ್ವಾಸ್)–1, ರಾಜೇಶ್ (ಮಂಡ್ಯ ವೈದ್ಯಕೀಯ ಕಾಲೇಜು)–2, ದಿನಕರನ್ (ಆಳ್ವಾಸ್)–3. ದೂರ: 50.89 ಮೀ (ಕೂಟ ದಾಖಲೆ: ಹಿಂದಿನ ದಾಖಲೆ: ಅರುಣ್ ತೇಜಸ್, ಎಸ್‌ಡಿಎಂ ಉಜಿರೆ, 46.56 ಮೀ, 2014).
ಮಹಿಳೆಯರು: 100ಮೀ: ಭೂಮಿಕಾ (ಆಳ್ವಾಸ್)–1, ದುರ್ಗಾ (ಆಳ್ವಾಸ್)–2, ಲಕ್ಷ್ಮಿ ವೈಷ್ಣವಿ (ಆಳ್ವಾಸ್)–3; ಕಾಲ: 13.2 ಸೆ; 400 ಮೀ ಹರ್ಡಲ್ಸ್: ವಿಸ್ಮಯ (ಆಳ್ವಾಸ್)–1, ಎವ್ಲಿನ್ ಜಾಯ್ (ಅಥೆನಾ ಕಾಲೇಜ್, ಮಂಗಳೂರು)–2, ಸೂಸನ್ ಅಲಿಯಾಸ್ (ಅಥೆನಾ)–3. ಕಾಲ: 1ನಿ 08 ಸೆ. (ಕೂಟ ದಾಖಲೆ: ಹಿಂದಿನ ದಾಖಲೆ: 1ನಿ 18.88ಸೆ, ಖ್ಯಾತಿ ಎಸ್.ವಿ, ಬಿಎಂಸಿ ಮಂಗಳೂರು, 2008); 5000 ಮೀ: ದಿವ್ಯಾ ಎಸ್ (ಜೆಎಸ್‍ಎಸ್, ಚಾಮರಾಜನಗರ)–1, ಸಾವಿತ್ರಿ ಎಸ್ ಮೇಟಿ (ಶ್ರೀ ಇನ್‌ಸ್ಟಿಟ್ಯೂಟ್, ಬಾಗಲಕೋಟೆ)–2, ಹರ್ಷಶ್ರೀ ಡಿ.ಎಸ್ (ರಾಜೀವ್ ಇನ್‌ಸ್ಟಿಟ್ಯೂಟ್, ಹಾಸನ). ಕಾಲ: 29 ನಿ 35.4 ಸೆ; ಜಾವೆಲಿನ್ ಥ್ರೋ: ಅರುಣಾ ವಿ.ಎಸ್ (ವಿದ್ಯೋದಯ, ಬೆಂಗಳೂರು)–1, ಮಾಧುರಿ ಕೆ (ಫಾದರ್ ಮುಲ್ಲರ್, ಮಂಗಳೂರು)–2, ಮೇಘನಾ ಜಿ (ಎಸ್‌ಡಿಎಂ, ಉಡುಪಿ)–3; ದೂರ: 24.95 ಮೀ; ಹೈಜಂಪ್: ರಕ್ಷಾ (ಇಂದಿರಾ ನರ್ಸಿಂಗ್ ಕಾಲೇಜ್, ಮಂಗಳೂರು)–1, ಸೀಮಾ (ಸಂಜೀವಿನಿ, ಹುಬ್ಬಳ್ಳಿ)–2, ಡಾಲಿಯಾ ಸಿಸಿ (ಸೇಂಟ್ ಆ್ಯನ್ಸ್, ಮೂಲ್ಕಿ)–3. ಎತ್ತರ: 1.24ಮೀ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.