ADVERTISEMENT

ಗಾಲ್ಫ್‌: ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಶುಭಂಕರ್‌, ಗಗನ್‌ಜೀತ್

ಪಿಟಿಐ
Published 18 ಜೂನ್ 2024, 16:06 IST
Last Updated 18 ಜೂನ್ 2024, 16:06 IST
<div class="paragraphs"><p>ಗಾಲ್ಫ್‌</p></div>

ಗಾಲ್ಫ್‌

   

ನವದೆಹಲಿ: ಪುರುಷರ ವಿಭಾಗದಲ್ಲಿ ಭಾರತ ಅಗ್ರಮಾನ್ಯ ಗಾಲ್ಫರ್ ಶುಭಂಕರ್ ಶರ್ಮಾ ಮತ್ತು ಗಗನ್‌ಜೀತ್‌ ಭುಲ್ಲರ್ ಅವರು ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಆರ್ಹತೆ ಪಡೆದಿದ್ದಾರೆ. ಸೇಂಟ್‌ ಕ್ವಾಂಟ ಆನ್‌ ನಿವಿಲಿನ್‌ನ ಪ್ರತಿಷ್ಠಿತ ಗಾಲ್ಫ್‌ ನ್ಯಾಷನಲ್ ಕೋರ್ಸ್‌ನಲ್ಲಿ ಸ್ಪರ್ಧೆಗಳು ನಡೆಯಲಿವೆ.

ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ 60 ಪುರುಷರ ಮತ್ತು ಮಹಿಳಾ ಸ್ಪರ್ಧಿಗಳ ಪಟ್ಟಿಯನ್ನು ಅಂತರರಾಷ್ಟ್ರೀಯ ಗಾಲ್ಫ್ ಫೆಡರೇಷನ್‌ ಬಿಡುಗಡೆ ಮಾಡಿದೆ. ಒಲಿಂಪಿಕ್ಸ್‌ ಗಾಲ್ಫ್‌ ಟೂರ್ನಿ ಆಗಸ್ಟ್‌ 1 ರಿಂದ 4ರವರೆಗೆ ನಡೆಯಲಿದೆ.

ADVERTISEMENT

27 ವರ್ಷ ವಯಸ್ಸಿನ ಶರ್ಮಾ ಮತ್ತು 36 ವರ್ಷ ವಯಸ್ಸಿನ ಭುಲ್ಲರ್ ಅವರಿಗೆ ಇದು ಮೊದಲ ಒಲಿಂಪಿಕ್ಸ್‌ ಆಗಿದೆ. ಒಲಿಂಪಿಕ್‌ 48ನೇ ರ‍್ಯಾಂಕ್‌ನೊಡನೆ ಶರ್ಮಾ ಅರ್ಹತೆ ಪಡೆದರೆ, ಭುಲ್ಲರ್‌ 54ನೇ ರ್‍ಯಾಂಕ್‌ನೊಡನೆ ಅವಕಾಶ ಪಡೆದರು.

ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಮಹಿಳಾ ವಿಭಾಗದ ಅಂತಿಮ ಪಟ್ಟಿ ಜೂನ್‌ 24ರಂದು ಪ್ರಕಟವಾಗಲಿದ್ದು, ಅದಿತಿ ಅಶೋಕ್ (24ನೇ) ಮತ್ತು ದೀಕ್ಷಾ ದಾಗರ್ (40ನೇ) ಅವರು ಅರ್ಹತೆ ಪಡೆಯುವ ಸಾಧ್ಯತೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.