ADVERTISEMENT

Malaysia Masters: ಸಿಂಧು ಸೆಮಿಫೈನಲ್‌ಗೆ ಲಗ್ಗೆ, ಅಶ್ಮಿತಾ ಹೋರಾಟ ಅಂತ್ಯ

ಪಿಟಿಐ
Published 24 ಮೇ 2024, 5:02 IST
Last Updated 24 ಮೇ 2024, 5:02 IST
<div class="paragraphs"><p>ಪಿ.ವಿ. ಸಿಂಧು</p></div>

ಪಿ.ವಿ. ಸಿಂಧು

   

(ಪಿಟಿಐ ಚಿತ್ರ)

ಕ್ವಾಲಾಲಂಪುರ: ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಪಿ.ವಿ. ಸಿಂಧು ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.

ADVERTISEMENT

ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ, ವಿಶ್ವ ರ‍್ಯಾಂಕಿಂಗ್‌ನಲ್ಲಿ 15ನೇ ಸ್ಥಾನದಲ್ಲಿರುವ ಸಿಂಧು ಅವರು 6ನೇ ರ‍್ಯಾಂಕ್‌ನ ಚೀನಾದ ಹಾನ್ ಯುವೆ ವಿರುದ್ಧ 21-13, 14-21, 21-12ರ ಕಠಿಣ ಹೋರಾಟದಲ್ಲಿ ಜಯ ಗಳಿಸಿದರು.

55 ನಿಮಿಷಗಳ ಜಿದ್ದಾಜಿದ್ದಿನ ಹೋರಾಟದ ಅಂತ್ಯದಲ್ಲಿ ಮಾಜಿ ವಿಶ್ವ ಚಾಂಪಿಯನ್ ಸಿಂಧು ಗೆಲುವಿನ ನಗೆ ಬೀರಿದ್ದಾರೆ.

ಕಳೆದ ತಿಂಗಳು ನಡೆದ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಹಾನ್ ಯುವೆ ವಿರುದ್ಧ ಸಿಂಧು ಪರಾಭವಗೊಂಡಿದ್ದರು. ಈಗ ಸೇಡು ತೀರಿಸಿಕೊಂಡಿದ್ದಾರೆ.

ಮತ್ತೊಂದೆಡೆ ಯುವ ಆಟಗಾರ್ತಿ ಅಶ್ಮಿತಾ ಚಾಲಿಹಾ ಹೋರಾಟ ಅಂತ್ಯಗೊಂಡಿತು. ಅಶ್ಮಿತಾ ಅವರು ಚೀನಾದ ಜಾಂಗ್ ಯಿ ಮಾನ್ ವಿರುದ್ಧ 10-21, 15-21ರ ಅಂತರದಲ್ಲಿ ಪರಾಭವಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.