ವಾಂತಾ (ಫಿನ್ಲೆಂಡ್): ಭಾರತದ ಅಗ್ರಮಾನ್ಯ ಆಟಗಾರ್ತಿ, ಎಂಟನೇ ಶ್ರೇಯಾಂಕದ ಪಿ.ವಿ.ಸಿಂಧು ಅವರು ಆರ್ಕಟಿಕ್ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಗುರುವಾರ 21–11, 21–10ರಲ್ಲಿ ಚೀನಾ ತೈಪೆಯ ವೆನ್ ಚಿ ಹ್ಸು ಅವರನ್ನು ಸೋಲಿಸಿ ಮಹಿಳಾ ಸಿಂಗಲ್ಸ್ ಕ್ವಾರ್ಟರ್‌ಫೈನಲ್ ತಲುಪಿದರು.
ಆದರೆ ಕಿದಂಬಿ ಶ್ರೀಕಾಂತ್ ಮತ್ತು ಕಿರಣ್ ಜಾರ್ಜ್ ಅವರು ಪುರುಷರ ಸಿಂಗಲ್ಸ್‌ನಲ್ಲಿ ಹೊರಬಿದ್ದರು. ಏಳನೇ ಶ್ರೇಯಾಂಕದ ಕಾಂತಾ ಸುನೆಯಾಮ (ಜಪಾನ್) ಅವರು 21–15, 21–12 ರಿಂದ ಶ್ರೀಕಾಂತ್ ಅವರನ್ನು ಹಿಮ್ಮೆಟ್ಟಿಸಿದರೆ, ನಾಲ್ಕನೇ ಶ್ರೇಯಾಂಕದ ಲು ಗುಯಾಂಗ್ ಝು (ಚೀನಾ) 21–10, 22–20 ರಿಂದ ಕಿರಣ್ ಜಾರ್ಜ್ ಅವರನ್ನು ಸೋಲಿಸಿದರು.
ಮಹಿಳಾ ಡಬಲ್ಸ್‌ನಲ್ಲಿ ತನಿಶಾ ಕ್ರಾಸ್ಟೊ– ಅಶ್ವಿನಿ ಪೊನ್ನಪ್ಪ ಜೋಡಿ 19–21, 19–21ರಲ್ಲಿ ಫ್ರಾನ್ಸ್‌ನ ಮಾರ್ಗೊಟ್ ಲ್ಯಾಂಬರ್ಟ್– ಆ್ಯನೆ ಟ್ರಾನ್ ಅವರಿಗೆ ಮಣಿಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.