ಬಾಸೆಲ್: ಭಾರತದ ಪಿ.ವಿ ಸಿಂಧು ಅವರು ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಎರಡನೇ ಸುತ್ತು ಪ್ರವೇಶಿಸಿದ್ದಾರೆ. ಬುಧವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಅವರು ಡೆನ್ಮಾರ್ಕ್‌ನ ಲೆನೆ ಹೊಜ್ಮಾರ್ಕ್ ಎದುರು 21-14, 21-12ರಲ್ಲಿ ಜಯ ಗಳಿಸಿದರು.
ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಎನ್.ಸಿಕ್ಕಿ ರೆಡ್ಡಿ ಸ್ಥಳೀಯ ಜೋಡಿ ಅಲೀನ್ ಮುಲ್ಲರ್ ಮತ್ತು ಜೆಂಜಿರಾ ಸ್ಟೇಡಲ್‌ಮ್ಯಾನ್ ಎದುರು 21-15, 21-16ರಲ್ಲಿ ಗೆದ್ದರು. ಪುರುಷರ ಡಬಲ್ಸ್ ವಿಭಾಗದಲ್ಲಿ ಎಂ.ಆರ್.ಅರ್ಜುನ್ ಮತ್ತು ಧ್ರುವ ಕಪಿಲ19-21 13-21ರಲ್ಲಿ ಇಂಡೊನೇಷ್ಯಾದ ಫಜರ್ ಅಲ್ಫಿಯನ್ ಮತ್ತು ಮುಹಮ್ಮದ್ ರಿಯಾನ್‌ಗೆ ಮಣಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.