ಕೌಲೂನ್: ಭಾರತದ ಪಿ.ವಿ. ಸಿಂಧು ಮತ್ತು ಸಮೀರ್ ವರ್ಮಾ ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.
ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್‌ನಲ್ಲಿ ಸಿಂಧು, 21–15, 13–21, 21–17 ರಿಂದ ಥಾಯ್ಲೆಂಡ್‌ನ ನಿಕಾನ್ ಜಿಂದಪಾಲ್ ಅವರನ್ನು ಮಣಿಸಿದರು. ಈ ಪಂದ್ಯವು ಒಂದು ಗಂಟೆ ನಡೆಯಿತು. ಇಲ್ಲಿಯವರೆಗೂ ಸಿಂಧು, ನಾಲ್ಕು ಬಾರಿ ಜಿಂದಪಾಲ್ ಅವರ ಎದುರು ಜಯಿಸಿದ್ದಾರೆ.
ಎರಡನೇ ಸುತ್ತಿನಲ್ಲಿಸಿಂಧು, ಕೊರಿಯಾದ ಸಂಗ್ ಜಿ ಯಾನ್ ಅವರನ್ನು ಎದುರಿಸಲಿದ್ದಾರೆ.
ಈ ಹಿಂದಿನ ಪಂದ್ಯವೊಂದರಲ್ಲಿ ಸಿಂಧು,8–5 ರಿಂದ ಸಂಗ್ ಜಿ ವಿರುದ್ಧ ಗೆದ್ದಿರುವ ದಾಖಲೆ ಇದ್ದು, ಇದರಿಂದಾಗಿ ಎರಡನೇ ಸುತ್ತಿನಲ್ಲಿ ಸಿಂಧು ಗೆಲ್ಲುವ ನಿರೀಕ್ಷೆ ಮೂಡಿದೆ.
ಪುರುಷರ ಸಿಂಗಲ್ಸ್‌ನಲ್ಲಿ ಸಮೀರ್, 21–17, 21–14 ರಿಂದ ಥಾಯ್ಲೆಂಡ್‌ನ ಸಪನಾಯು ಅವಿಹಿಂಗ್ ಸನೊನ್ ಅವರನ್ನು ಸೋಲಿಸಿದರು.
ಮುಂದಿನ ಸುತ್ತಿನಲ್ಲಿ ಚೀನಾದ ಚೆನ್ ಲಾಂಗ್ ಅವರನ್ನು ಎದುರಿಸಲಿದ್ದಾರೆ.
ಸಾಯಿ ಪ್ರಣೀತ್‌ಗೆ ಸೋಲು: ಭಾರತದ ಬಿ ಸಾಯಿ ಪ್ರಣೀತ್,21–16, 11–21, 15–21 ರಿಂದ ಥಾಯ್ಲೆಂಡ್‌ನ ಕೋಸಿತ್ ಫ್ಯಾಟ್‌ಪ್ರಭಾದ್ ಅವರ ಎದುರು ಸೋತರು.
ಉತ್ತಮವಾಗಿ ಆಟ ಶುರು ಮಾಡಿದ ಪ್ರಣೀತ್, ಎರಡನೇ ಗೇಮ್‌ನಿಂದ ಹಿನ್ನಡೆ ಅನುಭವಿಸಿದರು. 62 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ನಿರಾಶರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.