ADVERTISEMENT

13ನೇ ಏಷ್ಯನ್‌ ನೆಟ್‌ಬಾಲ್‌ ಮಹಿಳೆಯರ ಟೂರ್ನಿ: ಸಿಂಗಪುರ ತಂಡ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 16:01 IST
Last Updated 27 ಅಕ್ಟೋಬರ್ 2024, 16:01 IST
ಏಷ್ಯನ್‌ ನೆಟ್‌ಬಾಲ್‌ ಮಹಿಳಾ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ಗೆದ್ದ ಸಿಂಗಪುರ ತಂಡ
ಏಷ್ಯನ್‌ ನೆಟ್‌ಬಾಲ್‌ ಮಹಿಳಾ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ಗೆದ್ದ ಸಿಂಗಪುರ ತಂಡ   

ಬೆಂಗಳೂರು: ಸಾಂಘಿಕ ಪ್ರದರ್ಶನ ನೀಡಿದ ಸಿಂಗಪುರ ತಂಡವು ಭಾನುವಾರ ಮುಕ್ತಾಯಗೊಂಡ 13ನೇ ಏಷ್ಯನ್‌ ನೆಟ್‌ಬಾಲ್‌ ಮಹಿಳೆಯರ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಇಲ್ಲಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನ ರೋಚಕ ಹಣಾಹಣಿಯಲ್ಲಿ ಸಿಂಗಪುರ ತಂಡವು 67–64ರಿಂದ ಆರು ಬಾರಿಯ ಚಾಂಪಿಯನ್‌ ಶ್ರೀಲಂಕಾ ತಂಡವನ್ನು ಮಣಿಸಿತು.

ನಿಗದಿತ ಅವಧಿಯ ನಾಲ್ಕನೇ ಕ್ವಾರ್ಟರ್‌ ಅಂತ್ಯಕ್ಕೆ ಉಭಯ ತಂಡಗಳ ಸ್ಕೋರ್‌ 52–52ರಿಂದ ಸಮಬಲಗೊಂಡಿತ್ತು. ನಂತರ ಹೆಚ್ಚುವರಿ ಸಮಯದಲ್ಲಿ ಸಿಂಗಪುರ ತಂಡವು ಪ್ರಾಬಲ್ಯ ಮೆರೆಯಿತು.

ADVERTISEMENT

ಇದಕ್ಕೂ ಮೊದಲು ಮಲೇಷ್ಯಾ ತಂಡವು 67–48ರಿಂದ ಹಾಂಗ್‌ಕಾಂಗ್‌ ತಂಡವನ್ನು ಮಣಿಸಿ ಮೂರನೇ ಸ್ಥಾನ ಪಡೆಯಿತು. ಹಾಂಗ್‌ಕಾಂಗ್‌ ತಂಡ ನಾಲ್ಕನೇ ಸ್ಥಾನ ಗಳಿಸಿತು. ನಂತರ ಕ್ರಮವಾಗಿ ಥಾಯ್ಲೆಂಡ್‌ (ಐದನೇ), ಫಿಲಿಪೀನ್ಸ್‌ (ಆರನೇ), ಬ್ರೂನಿ (ಏಳನೇ), ಮಾಲ್ಡೀವ್ಸ್‌ (ಎಂಟನೇ), ಭಾರತ (ಒಂಬತ್ತನೇ), ಚೀನಾ ತೈಪೆ (10ನೇ), ಜಪಾನ್‌ (11ನೇ), ಬಹರೇನ್‌ (12ನೇ), ಸೌದಿ ಅರೇಬಿಯಾ (13ನೇ), ಇರಾಕ್‌ (14ನೇ) ಸ್ಥಾನ ಪಡೆದವು.

ಬಹುಮಾನ ವಿತರಣಾ ಸಮಾರಂಭದಲ್ಲಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಕರ್ನಾಟಕ ಒಲಿಂಪಿಕ್‌ ಸಂಸ್ಥೆ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಕೆ.ಗೋವಿಂದರಾಜ್‌,  ಏಷ್ಯಾ ನೆಟ್‌ಬಾಲ್‌ ಅಧ್ಯಕ್ಷೆ ವಿಜಯಲಕ್ಷ್ಮಿ, ಸಿಇಒ ಸೈರಸ್,  ಭಾರತ ನೆಟ್‌ಬಾಲ್‌ ಫೆಡರೇಷನ್‌ ಅಧ್ಯಕ್ಷ ಸುಮನ್‌ ಕೌಶಿಕ್‌, ರಾಷ್ಟ್ರೀಯ ನೆಟ್‌ಬಾಲ್ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹರಿಓಂ ಕೌಶಿಕ್‌, ಭಾರತ ನೆಟ್‌ಬಾಲ್‌ ಫೆಡರೇಷನ್‌ ಉಪಾಧ್ಯಕ್ಷರಾದ ಅಮಿತ್ ಅರೋರಾ, ಅಶೋಕ್ ಕುಮಾರ್, ಗಿರೀಶ್ ಸಿ, ಮೀನಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.