ADVERTISEMENT

Paris Olympics | ಸ್ವದೇಶಕ್ಕೆ ಮರಳಿದ ಹಾಕಿ ತಂಡದ ಆಟಗಾರರಿಗೆ ಅದ್ದೂರಿ ಸ್ವಾಗತ

ಪಿಟಿಐ
Published 10 ಆಗಸ್ಟ್ 2024, 9:48 IST
Last Updated 10 ಆಗಸ್ಟ್ 2024, 9:48 IST
<div class="paragraphs"><p>ಸ್ವದೇಶಕ್ಕೆ ಮರಳಿದ ಭಾರತೀಯ ಹಾಕಿ ತಂಡದ ಆಟಗಾರರು</p></div>

ಸ್ವದೇಶಕ್ಕೆ ಮರಳಿದ ಭಾರತೀಯ ಹಾಕಿ ತಂಡದ ಆಟಗಾರರು

   

(ಪಿಟಿಐ ಚಿತ್ರ)

ನವದೆಹಲಿ: ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದು ತವರಿಗೆ ಮರಳಿರುವ ಭಾರತ ಪುರುಷರ ಹಾಕಿ ತಂಡಕ್ಕೆ ರಾಷ್ಟ್ರ ರಾಜಧಾನಿಯಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು.

ADVERTISEMENT

ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರ ಪೋಸ್ಟರ್ ಹಿಡಿದು ಜೈಕಾರ ಕೂಗಿದರು.

ನಾಯಕ ಹರ್ಮನ್‌ಪ್ರೀತ್ ಸಿಂಗ್ ಸೇರಿದಂತೆ ಆಟಗಾರರಿಗೆ ಅಧಿಕಾರಿಗಳು ಹೂಮಾಲೆ ಹಾಕಿ ಬರಮಾಡಿಕೊಂಡರು. ವಿಶೇಷ ಡೋಲು ಮೇಳವನ್ನು ಏರ್ಪಡಿಸಲಾಯಿತು.

ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಪುರುಷರ ಹಾಕಿ ತಂಡವು ಸತತ ಎರಡನೇ ಬಾರಿಗೆ ಕಂಚಿನ ಪದಕ ಗೆದ್ದು ಸಾಧನೆ ಮಾಡಿದೆ. ಪ್ಲೇ-ಆಫ್ ಪಂದ್ಯದಲ್ಲಿ ಸ್ಪೇಸ್ ತಂಡವನ್ನು 2-1ರ ಗೋಲುಗಳಿಂದ ಮಣಿಸಿ ಕಂಚಿನ ಪದಕ ಜಯಿಸಿತ್ತು.

ಶ್ರೀಜೇಶ್ ಧ್ವಜಧಾರಿ...

ಅಧಿಕೃತ ಮೂಲಗಳ ಪ್ರಕಾರ ತಂಡದ ಕೆಲವು ಆಟಗಾರರು ಪ್ಯಾರಿಸ್‌ನಲ್ಲಿ ಉಳಿದುಕೊಂಡಿದ್ದಾರೆ. ವೃತ್ತಿಜೀವನದ ಕೊನೆಯ ಪಂದ್ಯ ಆಡಿರುವ ಪಿ.ಆರ್. ಶ್ರೀಜೇಶ್ ಅವರಿಗೆ ಸಮಾರೋಪದಲ್ಲಿ ಧ್ವಜಧಾರಿಯ ಗೌರವ ನೀಡಲಾಗಿದೆ. ಅಮಿತ್ ರೋಹಿತ್ ದಾಸ್, ರಾಜ್ ಕುಮಾರ್ ಪಾಲ್, ಅಭಿಷೇಕ್, ಸುಖ್‌ಜೀತ್ ಸಿಂಗ್ ಮತ್ತು ಸಂಜಯ್ ಕೂಡ ಪ್ಯಾರಿಸ್ ನಗರಿಯಲ್ಲಿದ್ದಾರೆ.

ಮಹತ್ತರ ಸಾಧನೆ: ನಾಯಕ ಹರ್ಮನ್‌ಪ್ರೀತ್

'ನಮಗೆ ಉತ್ತಮ ಬೆಂಬಲ ದೊರಕಿತು. ಎಲ್ಲ ಬೇಡಿಕೆಗಳನ್ನು ಪೂರೈಸಲಾಗಿದೆ. ಪದಕ ಗೆದ್ದಿರುವುದು ಸಂತಸ ತಂದಿದ್ದು, ಹೆಮ್ಮೆಯ ವಿಚಾರ' ಎಂದು ನಾಯಕ ಹರ್ಮನ್‌ಪ್ರೀತ್ ಸಿಂಗ್ ಹೇಳಿದ್ದಾರೆ.

'ಇದೊಂದು ಮಹತ್ತರ ಸಾಧನೆ. ಹಾಕಿ ಮೇಲೆ ನೀವು ತೋರಿದ ಪ್ರೀತಿಯಿಂದಾಗಿ ನಮ್ಮ ಮೇಲಿನ ಜವಾಬ್ದಾರಿ ಇಮ್ಮಡಿಗೊಂಡಿದೆ. ಮುಂದಿನ ಟೂರ್ನಿಗಳಲ್ಲೂ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸಲಿದ್ದೇವೆ' ಎಂದು ಹೇಳಿದ್ದಾರೆ.

ಮೇಜರ್ ಧ್ಯಾನ್‌ಚಂದ್‌ಗೆ ಗೌರವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.