ADVERTISEMENT

ಸ್ನೂಕರ್‌: ಮಯಂಕ್‌ ಕಾರ್ತಿಕ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 14:04 IST
Last Updated 8 ಅಕ್ಟೋಬರ್ 2024, 14:04 IST
ಪ್ರಶಸ್ತಿಯೊಂದಿಗೆ ಮಯಂಕ್‌ ಕಾರ್ತಿಕ್‌
ಪ್ರಶಸ್ತಿಯೊಂದಿಗೆ ಮಯಂಕ್‌ ಕಾರ್ತಿಕ್‌   

ಬೆಂಗಳೂರು: ಮಯಂಕ್‌ ಕಾರ್ತಿಕ್‌ ಅವರು ಇಲ್ಲಿ ನಡೆದ ರಾಜ್ಯ ರ‍್ಯಾಂಕಿಂಗ್‌ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಟೂರ್ನಿಯ‌ಲ್ಲಿ ಜೂನಿಯರ್‌ ಬಾಲಕರ ಸ್ನೂಕರ್‌ ಪ್ರಶಸ್ತಿಯನ್ನು ಗೆದ್ದುಕೊಂಡರು.

ಕರ್ನಾಟಕ ರಾಜ್ಯ ಬಿಲಿಯರ್ಡ್ಸ್ ಸಂಸ್ಥೆಯಲ್ಲಿ ಮಂಗಳವಾರ ನಡೆದ ಸೆಮಿಫೈನಲ್‌ ಲೀಗ್‌ನ ಮೂರು ಸುತ್ತಿನಲ್ಲಿ ಮಯಂಕ್‌ ಅಮೋಘ ಜಯ ಸಾಧಿಸಿ ಅಗ್ರಸ್ಥಾನ ಪಡೆದರು.

ಜುಬಿನ್ ಜಹೀರ್ ಎರಡನೇ ಸ್ಥಾನ ಗಳಿಸಿದರು. ಆದಿತ್ಯ ವಿಜಯ್ ಚಾವ್ಲಾ ಮತ್ತು ಮೊಹಮ್ಮದ್ ಮುಸ್ತಫಾ ಕ್ರಮವಾಗಿ ನಂತರದ ಸ್ಥಾನ ಪಡೆದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.