ADVERTISEMENT

ಐಎಸ್‌ಎಸ್‌ಎಫ್ ವಿಶ್ವಕಪ್‌: ಶೂಟಿಂಗ್‌ನಲ್ಲಿ ಬೆಳ್ಳಿ ಗೆದ್ದ ಸೋನಮ್

ಪಿಟಿಐ
Published 29 ಜನವರಿ 2024, 5:52 IST
Last Updated 29 ಜನವರಿ 2024, 5:52 IST
Venugopala K.
   Venugopala K.

ಕೈರೊ: ಇಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ (ಐಎಸ್‌ಎಸ್‌ಎಫ್) ವಿಶ್ವಕಪ್‌ನ ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಭಾರತದ ಆಟಗಾರ್ತಿ ಸೋನಮ್ ಮಸ್ಕರ್ ಬೆಳ್ಳಿ ಪದಕವನ್ನು ಜಯಿಸಿದ್ದಾರೆ.

ಭಾನುವಾರ ತಡರಾತ್ರಿ ಈಜಿಪ್ಟ್ ಇಂಟರ್‌ನ್ಯಾಶನಲ್ ಒಲಿಂಪಿಕ್ ಸಿಟಿ ಶೂಟಿಂಗ್ ರೇಂಜ್‌ನಲ್ಲಿ ನಡೆದ ಎಂಟು ಮಹಿಳೆಯರ ಫೈನಲ್‌ನಲ್ಲಿ ಚೊಚ್ಚಲ ವಿಶ್ವಕಪ್ ಆಡಿದ ಸೋನಮ್ 252.1 ಅಂಕಗಳನ್ನು ಗಳಿಸಿದರು. ಜರ್ಮನಿಯ ಅನ್ನಾ ಜಾನ್ಸೆನ್‌ಗಿಂತ ಕೇವಲ 0.9 ಅಂಕಗಳಿಂದ ಹಿನ್ನಡೆ ಅನುಭವಿಸಿದರು. ಪೋಲೆಂಡ್‌ನ ಅನೆಟಾ ಸ್ಟಾಂಕಿವಿಚ್ ಕಂಚಿನ ಪದಕ ಪಡೆದರು.

ಇದಕ್ಕೂ ಮೊದಲು, ಪುರುಷರ ವಿಭಾಗದಲ್ಲಿ ದಿವ್ಯಾಂಶ್ ಸಿಂಗ್ ಪನ್ವಾರ್ ಫೈನಲ್‌ನಲ್ಲಿ ವಿಶ್ವ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದರು.

ADVERTISEMENT

ಮೂರು ದಿನಗಳ ಸ್ಪರ್ಧೆಯ ನಂತರ ಭಾರತವು ಎರಡು ಚಿನ್ನ ಮತ್ತು ಮೂರು ಬೆಳ್ಳಿ ಪದಕಗಳೊಂದಿಗೆ ವಿಶ್ವಕಪ್ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಭಾರತೀಯರಾದ ಸೋನಮ್ ಮತ್ತು ನ್ಯಾನ್ಸಿ ಕ್ರಮವಾಗಿ 632.7 ಮತ್ತು 633.1 ಸ್ಕೋರ್ ಮೂಲಕ ಅರ್ಹತಾ ಸುತ್ತಿನಲ್ಲಿ ಕ್ರಮವಾಗಿ ಐದು ಮತ್ತು ನಾಲ್ಕನೇ ಸ್ಥಾನಗಳನ್ನು ಪಡೆದು ಫೈನಲ್‌ಗೆ ತಲುಪಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.