ಹಾಂಗ್‌ಕಾಂಗ್: ವಿಶ್ವದ ಅಗ್ರ ಕ್ರಮಾಂಕದ ಆಟಗಾರ ಜಪಾನ್‌ನ ಕೆಂಟೊ ಮೊಮೊಟಾ ಅವರು ಹಾಂಗ್‌ಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಅವರ ಈಅನಿರೀಕ್ಷಿತ ನಡೆಯಿಂದಾಗಿ ಭಾರತದ ಕಿದಂಬಿ ಶ್ರೀಕಾಂತ್ ಅವರಿಗೆ ಎರಡನೇ ಸುತ್ತು ಪ್ರವೇಶಿಸುವ ಅವಕಾಶ ಲಭಿಸಿದೆ.
ಮೊಮೊಟಾ ಹಾಗೂ ಶ್ರೀಕಾಂತ್ ನಡುವೆ ಬುಧವಾರ ಮೊದಲ ಸುತ್ತಿನ ಸಿಂಗಲ್ಸ್ ಹಣಾಹಣಿ ನಡೆಯಬೇಕಿತ್ತು. ಹೋದ ವಾರ ಚೀನಾ ಓಪನ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಮೊಮೊಟಾ, ಈ ಟೂರ್ನಿಯಿಂದ ಹಿಂದೆ ಸರಿಯಲು ಕಾರಣ ಏನೆಂದು ತಿಳಿದುಬಂದಿಲ್ಲ.
ಮೊಮೊಟಾ ಹಾಗೂ ಶ್ರೀಕಾಂತ್ ಈವರೆಗೆ 15 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದಾರೆ. 12 ಬಾರಿ ಜಪಾನ್ ಆಟಗಾರ ಗೆಲುವಿನ ನಗೆ ಬೀರಿದ್ದಾರೆ. ಶ್ರೀಕಾಂತ್ ಮುಂದಿನ ಪಂದ್ಯದಲ್ಲಿ ತಮ್ಮದೇ ದೇಶದ ಸೌರಭ್ ವರ್ಮಾ ಅಥವಾ ಫ್ರಾನ್ಸ್‌ನ ಬ್ರೈಸ್ ಲೆವೆರ್ಡೆಜ್ ಅವರನ್ನು ಎದುರಿಸಲಿರುವರು. ಇಲ್ಲಿ ಗೆದ್ದರೆ ಅವರು ಕ್ವಾರ್ಟರ್‌ಫೈನಲ್ ಪ್ರವೇಶಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.