ಮೆಲ್ಬರ್ನ್ : ಭಾರತದ ಸೌರವ್ ಕೊಠಾರಿ ಅವರು ಇಲ್ಲಿ ನಡೆದ ಪೆಸಿಫಿಕ್ ಇಂಟರ್‌ನ್ಯಾಷನಲ್ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದರು. ಇದೇ ಟೂರ್ನಿಯ ಸ್ನೂಕರ್‌ನಲ್ಲೂ ಗೆಲುವು ಪಡೆದಿದ್ದ ಅವರು ಪ್ರಶಸ್ತಿ ‘ಡಬಲ್’ ಸಾಧನೆ ಮಾಡಿದರು.
ಶುಕ್ರವಾರ ನಡೆದ ಫೈನಲ್‌ನಲ್ಲಿ ಕೊಠಾರಿ, 1500-1321 ರಲ್ಲಿ ಇಂಗ್ಲೆಂಡ್‌ನ ರಾಬ್ ಹಾಲ್ ಅವರನ್ನು ಮಣಿಸಿದರು. ಈ ಟೂರ್ನಿಯಲ್ಲಿ ‘ಡಬಲ್’ ಸಾಧನೆ ಮಾಡಿದ ಎರಡನೇ ಸ್ಪರ್ಧಿ ಎಂಬ ಗೌರವ ಅವರಿಗೆ ಒಲಿಯಿತು. ಆಸ್ಟ್ರೇಲಿಯದ ಮ್ಯಾಥ್ಯೂ ಬೋಲ್ಟನ್ ಮಾತ್ರ ಈ ಸಾಧನೆ ಮಾಡಿದ್ದರು.
ಕೊಠಾರಿ ಅವರು ಸೆಮಿಫೈನಲ್‌ನಲ್ಲಿ 1200–1131 ರಲ್ಲಿ ಭಾರತದ ಧ್ರುವ್ ಸಿತ್ವಾಲ ವಿರುದ್ಧ ಗೆಲುವು ಪಡೆದಿದ್ದರೆ, ಹಾಲ್ 1204–122 ರಲ್ಲಿ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಸಿಂಗಪುರದ ಪೀಟರ್ ಗಿಲ್‌ಕ್ರಿಸ್ಟ್ ಅವರನ್ನು ಮಣಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.