ADVERTISEMENT

ದಕ್ಷಿಣ ಏಷ್ಯಾ ಕ್ರೀಡಾಕೂಟ: ನಾಲ್ಕು ಪದಕ ಗೆದ್ದ ಭಾರತದ ಅಥ್ಲೀಟ್‌ಗಳು

ಏಜೆನ್ಸೀಸ್
Published 3 ಡಿಸೆಂಬರ್ 2019, 12:45 IST
Last Updated 3 ಡಿಸೆಂಬರ್ 2019, 12:45 IST
   

ಕಠ್ಮಂಡು: ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿರುವ ಭಾರತದ ಅಥ್ಲೀಟ್‌ಗಳು ನಾಲ್ಕು ಪದಕಗಳನ್ನು ಗೆದ್ದುಕೊಂಡಿದ್ದಾರೆ. ಇಲ್ಲಿನ ದಶರಥ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ1500 ಮೀಟರ್‌ ಓಟದಸ್ಪರ್ಧೆಯಲ್ಲಿ ಒಂದು ಚಿನ್ನ, ಎರಡು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಭಾರತದ ಅಥ್ಲೀಟ್‌ಗಳಿಗೆ ಒಲಿಯಿತು.

ಪುರುಷರ ವಿಭಾಗದಲ್ಲಿ ಅಜಯ್‌ಕುಮಾರ್‌ ಸಾರೊ 1500 ಮೀಟರ್‌ ಓಟವನ್ನು 3 ನಿಮಿಷ 54.18 ಸೆಕೆಂಡುಗಳಲ್ಲಿ ಮುಗಿಸಿ ಚಿನ್ನಕ್ಕೆ ಕೊರಳೊಡ್ಡಿದರು. 3 ನಿಮಿಷ 57.18 ಸೆಕೆಂಡ್‌ಗಳಲ್ಲಿ ಓಟ ಪೂರೈಸಿದಅಜೀತ್‌ ಕುಮಾರ್‌ಗೆಬೆಳ್ಳಿ ದಕ್ಕಿತು. ಕಂಚಿನ ಪದಕವು ನೇಪಾಳದ ತಂಕಾ ಕರ್ಕಿ ಪಾಲಾಯಿತು.

ಮಹಿಳೆಯರ 1500 ಮೀ. ಓಟದಲ್ಲಿ ಭಾರತದ ಚಂದಾ ಬೆಳ್ಳಿ ಗೆದ್ದರು. ಅವರು4 ನಿಮಿಷ 34.51 ಸೆಕೆಂಡುಗಲ್ಲಿ ಗುರಿ ತಲುಪಿದರು. 4 ನಿಮಿಷ 35.46 ಸೆಕೆಂಡುಗಳಲ್ಲಿ ಓಡಿದ ಚಿತ್ರಾ ಪಾಲಕೀಜ್‌ಗೆ ಕಂಚು ಲಭಿಸಿತು. ಈ ವಿಭಾಗದಲ್ಲಿ ಚಿನ್ನದ ಪದಕವನ್ನು ಶ್ರೀಲಂಕಾದ ಉದಾ ಕುಬುರಲಾ ಕಬಳಿಸಿದರು. ಅವರು4 ನಿಮಿಷ 34.34 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.