ADVERTISEMENT

ದಕ್ಷಿಣ ವಲಯ ಈಜು ಚಾಂಪಿಯನ್‌ಷಿಪ್‌: ಕರ್ನಾಟಕದ ನೀನಾಗೆ ಎರಡು ಚಿನ್ನ

ಕರ್ನಾಟಕದ ಸ್ಪರ್ಧಿಗಳ ಪ್ರಾಬಲ್ಯ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2018, 20:00 IST
Last Updated 28 ಡಿಸೆಂಬರ್ 2018, 20:00 IST
200 ಮೀ.ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಚಿನ್ನದ ಪದಕ ಜಯಿಸಿದ ರಚನಾ ಎಸ್‌.ಆರ್‌.ರಾವ್‌
200 ಮೀ.ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಚಿನ್ನದ ಪದಕ ಜಯಿಸಿದ ರಚನಾ ಎಸ್‌.ಆರ್‌.ರಾವ್‌   

ವಿಜಯವಾಡ: ಕರ್ನಾಟಕದ ನೀನಾ ವೆಂಕಟೇಶ್‌, ಇಲ್ಲಿ ನಡೆಯುತ್ತಿರುವ ದಕ್ಷಿಣ ವಲಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.

ಬಾಲಕಿಯರ ಗುಂಪು–2ರ 200 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌ನಲ್ಲಿ ನೀನಾ ಎರಡು ನಿಮಿಷ 33.52 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಚಿನ್ನಕ್ಕೆ ಮುತ್ತಿಕ್ಕಿದರು.

50 ಮೀಟರ್ಸ್‌ ಬಟರ್‌ಫ್ಲೈ ವಿಭಾಗದಲ್ಲಿ ಅವರು 29.99 ಸೆಕೆಂಡುಗಳಲ್ಲಿ ಗುರಿ ತಲುಪಿ ಮೊದಲಿಗರಾದರು.

ADVERTISEMENT

ಬಾಲಕರ ಗುಂಪು–1ರ 200 ಮೀಟರ್ಸ್‌ ಬಟರ್‌ಫ್ಲೈ ವಿಭಾಗದಲ್ಲಿ ಸಂಜಯ್‌ ಎರಡು ನಿಮಿಷ 12.40 ಸೆಕೆಂಡುಗಳಲ್ಲಿ ನಿಗದಿತ ದೂರ ಕ್ರಮಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

ಮೋಹಿತ್‌ ವೆಂಕಟೇಶ್‌, ಅನೀಶ್‌ ಎಸ್‌.ಗೌಡ, ವಿದಿತ್‌ ಎಸ್‌.ಶಂಕರ್‌, ಆರ್‌.ನವನೀತ್‌ ಗೌಡ, ವಿಹಿತಾ ನಯನ, ಸುನೈನಾ ಮಂಜುನಾಥ್‌ ಮತ್ತು ಆರ್‌.ಹರ್ಷಾ, ಕಾರ್ತಿಕೇಯನ್‌ ನಾಯರ್‌, ರಿಷಿಕಾ ಯು.ಮಂಗಳೆ, ಕಲ್ಪ್‌ ಎಸ್‌.ಬೊಹ್ರಾ, ರಚನಾ ಎಸ್‌.ಆರ್‌.ರಾವ್‌ ಅವರೂ ಚಿನ್ನದ ಪದಕಗಳನ್ನು ಗೆದ್ದರು.

ಫಲಿತಾಂಶಗಳು: ಬಾಲಕರು, ಗುಂಪು–1, 800 ಮೀಟರ್ಸ್‌ ಫ್ರೀಸ್ಟೈಲ್‌: ಮೋಹಿತ್‌ ವೆಂಕಟೇಶ್‌ (9ನಿಮಿಷ 10.51 ಸೆಕೆಂಡು)–1, ದೀಪ್‌ ವೆಂಕಟೇಶ್‌ ಗಿಲ್ಡಾ (9:20.13ಸೆ.)–2 (ಇಬ್ಬರೂ ಕರ್ನಾಟಕ), ಚಲ್ಲಗಣಿ ಅಭಿಲಾಶ್‌ (ತೆಲಂಗಾಣ; 9:30.39ಸೆ.)–3.

50 ಮೀ.ಬಟರ್‌ಫ್ಲೈ: ಎಂ.ವಾಸುರಾಮ್‌ (ಆಂಧ್ರಪ್ರದೇಶ; 27.11ಸೆ.)–1, ಸಿ.ಜೆ.ಸಂಜಯ್‌ (27.14ಸೆ.)–2, ಅಚ್ಯುತ್‌ ವಿ.ರಾಚುರ್‌ (27.60ಸೆ.)–3 (ಇಬ್ಬರೂ ಕರ್ನಾಟಕ).

200 ಮೀ.ಬ್ರೆಸ್ಟ್‌ಸ್ಟ್ರೋಕ್: ಎಂ.ಲೋಹಿತ್‌ (ಆಂಧ್ರಪ್ರದೇಶ; 2:25.76ಸೆ.)–1, ಎಂ.ಮಂಗಲ್‌ಸನಾ ಮೇಟಿ (2:31.61ಸೆ.)–2, ಲಿತೀಶ್‌ ಎಸ್‌.ಗೌಡ (2:36.54ಸೆ.)–3 (ಇಬ್ಬರೂ ಕರ್ನಾಟಕ).

4X100 ಮೀ. ಫ್ರೀಸ್ಟೈಲ್‌: ಕರ್ನಾಟಕ (3:50.12ಸೆ.)–1.

200 ಮೀ.ಬಟರ್‌ಫ್ಲೈ: ಸಿ.ಜೆ.ಸಂಜಯ್‌ (2:12.40ಸೆ.)–1, ಅಚ್ಯುತ್‌ ವಿ.ರಾಚುರ್‌ (2:20.09ಸೆ.)–3 (ಇಬ್ಬರೂ ಕರ್ನಾಟಕ).

200 ಮೀ.ಬ್ಯಾಕ್‌ಸ್ಟ್ರೋಕ್‌: ಬಿ.ಜತಿನ್‌ (2:21.30ಸೆ.)–1, ಶಿವಾನ್ಸ್‌ ಸಿಂಗ್‌ (2:21.57ಸೆ.)–2 (ಇಬ್ಬರೂ ಕರ್ನಾಟಕ).

200 ಮೀ.ಫ್ರೀಸ್ಟೈಲ್‌: ಮೋಹಿತ್‌ ವೆಂಕಟೇಶ್‌ (ಕರ್ನಾಟಕ; 2:03.24ಸೆ.)–1.

ಗುಂಪು–2: 800 ಮೀಟರ್ಸ್‌ ಫ್ರೀಸ್ಟೈಲ್‌: ಅನೀಶ್‌ ಎಸ್‌.ಗೌಡ (ಕರ್ನಾಟಕ; 9:00.34ಸೆ.)–1, ಕುರಿಯನ್‌ ದೋನಿ ಕುರಿಚೀಲ್‌ (ಕೇರಳ; 9:26.72ಸೆ.)–2, ಸರ್ವಪ‍ಲ್ಲಿ ಕೃಷ್ಣ ಪ್ರಣವ್‌ (ತಮಿಳುನಾಡು; 9:28.44ಸೆ.)–3.

50 ಮೀ.ಬಟರ್‌ಫ್ಲೈ: ಆರ್‌.ಹರ್ಷಾ (ಕರ್ನಾಟಕ; 28.10ಸೆ.)–1, ಸೂರ್ಯಾಂಶು ಬಾಷಾ (ತೆಲಂಗಾಣ; 28.37ಸೆ.)–2, ಸಮರ್ಥ್‌ ಸುಬ್ರಮಣ್ಯ (ಕರ್ನಾಟಕ; 28.50ಸೆ.)–3.

200 ಮೀ.ಬ್ರೆಸ್ಟ್‌ಸ್ಟ್ರೋಕ್: ಕಲ್ಪ್‌ ಎಸ್‌.ಬೊಹ್ರಾ (2:34.85ಸೆ.)–1, ಆರ್‌.ಹರ್ಷಾ (2:38.68ಸೆ.)–2 (ಇಬ್ಬರೂ ಕರ್ನಾಟಕ).

4X100 ಮೀ. ಫ್ರೀಸ್ಟೈಲ್‌: ಕರ್ನಾಟಕ–1 (3:58.44ಸೆ.)–1.

200 ಮೀ.ಬಟರ್‌ಫ್ಲೈ: ಉತ್ಕರ್ಷ್‌ ಎಸ್‌.ಪಾಟೀಲ (2:21.55ಸೆ.)–1, ಆರ್‌.ಸಂಭವ್‌ (2:24.94ಸೆ.)–2 (ಇಬ್ಬರೂ ಕರ್ನಾಟಕ).

200 ಮೀ.ಬ್ಯಾಕ್‌ಸ್ಟ್ರೋಕ್‌: ಅಕ್ಷಯ್‌ ಆರ್‌.ಸೇಠ್‌ (2:23.86ಸೆ.)–2, ಉತ್ಕರ್ಷ್‌ ಎಸ್‌.ಪಾಟೀಲ (2:28.25ಸೆ.)–3 (ಇಬ್ಬರೂ ಕರ್ನಾಟಕ).

ಗುಂಪು–3

50 ಮೀ. ಬ್ರೆಸ್ಟ್‌ಸ್ಟ್ರೋಕ್‌: ವಿದಿತ್‌ ಎಸ್‌.ಶಂಕರ್‌ (35.04ಸೆ.)–1, ಇಂದ್ರ ಪ್ರಕಾಶ್‌ ಆರ್ಯ (36.15ಸೆ.)–2 (ಇಬ್ಬರೂ ಕರ್ನಾಟಕ), ಎಸ್‌.ಆಕಾಶ್‌ (ತಮಿಳುನಾಡು; 37.05ಸೆ.)–3.

100 ಮೀ.ಬಟರ್‌ಫ್ಲೈ: ಕಾರ್ತಿಕೇಯನ್‌ ನಾಯರ್‌ (1:11.48ಸೆ.)–1, ನೀಲೇಶ್‌ ದಾಸ್‌ (1:11.64ಸೆ.)–2 (ಇಬ್ಬರೂ ಕರ್ನಾಟಕ), ಸಂಜಯ್‌ ಕತಿರವನ್‌ (ತಮಿಳುನಾಡು; 1:12.56ಸೆ.)–3.

50 ಮೀ.ಬ್ಯಾಕ್‌ಸ್ಟ್ರೋಕ್‌: ಎಸ್‌.ವಿಶ್ವನಾಥನ್‌ (ಕರ್ನಾಟಕ; 34.67ಸೆ.)–3.

4X50 ಮೀ. ಮೆಡ್ಲೆ: ಕರ್ನಾಟಕ (2:11.93ಸೆ.)–1.

ಗುಂಪು–4: 50 ಮೀ. ಬ್ರೆಸ್ಟ್‌ಸ್ಟ್ರೋಕ್‌: ಆರ್‌.ನವನೀತ್‌ ಗೌಡ (41.76ಸೆ.)–1, ಇಶಾನ್ ಘಾಟ್ಕೆ (42.61ಸೆ.)–2 (ಇಬ್ಬರೂ ಕರ್ನಾಟಕ), ಎಸ್‌.ಶ್ರೀನಿವಾಸ್‌ (ತಮಿಳುನಾಡು; 43.05ಸೆ.)–3.

50 ಮೀ.ಫ್ರೀಸ್ಟೈಲ್‌: ರೇಣುಕಾಚಾರ್ಯ ಹಾದಿಮನಿ (ಕರ್ನಾಟಕ; 32.01ಸೆ.)–2.

4X50 ಮೀ. ಮೆಡ್ಲೆ: ಕರ್ನಾಟಕ (2:25.79ಸೆ.)–1.

ಬಾಲಕಿಯರು: ಗುಂಪು–1, 800 ಮೀಟರ್ಸ್‌ ಫ್ರೀಸ್ಟೈಲ್‌: ವಿ.ವರ್ಷಾ (ತಮಿಳುನಾಡು; 10:03.04ಸೆ.)–1, ಸಿದ್ಧಿ ಜಡೆ (ಕರ್ನಾಟಕ; 10:12.93ಸೆ.)–2, ಜಾಹ್ನವಿ ಗಿರೀಶ್‌ (ತಮಿಳುನಾಡು; 10:58.43ಸೆ.)–3.

50 ಮೀ.ಬಟರ್‌ಫ್ಲೈ: ಸುನೈನಾ ಮಂಜುನಾಥ್‌ (31.97ಸೆ.)–1, ಸಂಜನಾ ಶಾಂತಿ (32.32ಸೆ.)–2 (ಇಬ್ಬರೂ ಕರ್ನಾಟಕ), ಚೆನ್ನಾವೊಜುಲಾ ಕೃಷ್ಣ ಪ್ರಿಯಾ (ತೆಲಂಗಾಣ; 35.15ಸೆ.)–3.

4X100 ಮೀ. ಫ್ರೀಸ್ಟೈಲ್‌: ಕರ್ನಾಟಕ–1 (4:35.21ಸೆ.)–1.

200 ಮೀ.ಬಟರ್‌ಫ್ಲೈ: ಜಿ.ಸಾಚಿ (2:42.08ಸೆ.)–1, ವಿಭಾ ಅಪರ್ಣ ಭೋಂಸ್ಲೆ (2:49.03ಸೆ.)–2 (ಇಬ್ಬರೂ ಕರ್ನಾಟಕ).

200 ಮೀ.ಬ್ಯಾಕ್‌ಸ್ಟ್ರೋಕ್‌: ಭೂಮಿಕಾ ಆರ್‌.ಕೇಸರ್‌ಕರ್‌ (2:40.89ಸೆ.)–1, ವಿಭಾ ಅಪರ್ಣಾ ಭೋಂಸ್ಲೆ (2:49.07ಸೆ.)–3 (ಇಬ್ಬರೂ ಕರ್ನಾಟಕ).

200 ಮೀ.ಫ್ರೀಸ್ಟೈಲ್‌: ಆರ್‌.ಸಂಭವ್‌ (2:03.24ಸೆ.)–1, ಅನೀಶ್‌ ಎಸ್‌.ಗೌಡ (2:03.73ಸೆ.)–2 (ಇಬ್ಬರೂ ಕರ್ನಾಟಕ).

ಗುಂಪು–2

800 ಮೀ. ಫ್ರೀಸ್ಟೈಲ್‌: ಡಿ.ಎಸ್‌.ಶ್ರೇಣತಿ (ತಮಿಳುನಾಡು; 10:07.73ಸೆ.)–1, ದಿವ್ಯಾ ಘೋಷ್‌ (10:11.73ಸೆ.)–2, ಮೇಧಾ ವೆಂಕಟೇಶ್‌ (10:27.04ಸೆ.)–3 (ಇಬ್ಬರೂ ಕರ್ನಾಟಕ).

50 ಮೀ.ಬಟರ್‌ಫ್ಲೈ: ನೀನಾ ವೆಂಕಟೇಶ್‌ (29.99ಸೆ.)–1, ಬಿ.ಇಂಚರಾ (31.97ಸೆ.)–2 (ಇಬ್ಬರೂ ಕರ್ನಾಟಕ), ಕಾಲ್ವಾ ಸಂಜನಾ (ತೆಲಂಗಾಣ; 32.97ಸೆ.)–3.

200 ಮೀ.ಬ್ರೆಸ್ಟ್‌ಸ್ಟ್ರೋಕ್: ರಚನಾ ಎಸ್‌.ಆರ್‌.ರಾವ್‌ (2:54.59ಸೆ.)–1, ಆರುಷಿ ಮಂಜುನಾಥ್‌ (3:00.42ಸೆ.)–2 (ಇಬ್ಬರೂ ಕರ್ನಾಟಕ).

4X100 ಮೀ. ಫ್ರೀಸ್ಟೈಲ್‌: ಕರ್ನಾಟಕ–1 (4:23.57ಸೆ.)–1.

200 ಮೀ.ಬಟರ್‌ಫ್ಲೈ: ಶಕ್ತಿ ರಾಜೇಶ್‌ (2:37.94ಸೆ.)–1, ಎ.ಜೆದಿದಾ (2:46.25ಸೆ.)–2 (ಇಬ್ಬರೂ ಕರ್ನಾಟಕ).

200 ಮೀ.ಬ್ಯಾಕ್‌ಸ್ಟ್ರೋಕ್‌: ನೀನಾ ವೆಂಕಟೇಶ್‌ (2:33.52ಸೆ.)–1, ಸಾಕ್ಷಿ ವಿಜಯ್‌ (2:39.51ಸೆ.)–3 (ಇಬ್ಬರೂ ಕರ್ನಾಟಕ).

200 ಮೀ.ಫ್ರೀಸ್ಟೈಲ್‌: ದಿವ್ಯಾ ಘೋಷ್‌ (2:17.33ಸೆ.)–2, ಸಮನ್ವಿತಾ ರವಿಕುಮಾರ್‌ (2:20.68ಸೆ.)–3 (ಇಬ್ಬರೂ ಕರ್ನಾಟಕ).

ಗುಂಪು–3: 50 ಮೀ.ಬ್ರೆಸ್ಟ್‌ಸ್ಟ್ರೋಕ್‌: ಶ್ರಿಯಾ ಈಶ್ವರ್‌ ಪ್ರಸಾದ್‌ (ತಮಿಳುನಾಡು; 37.81ಸೆ.)–1, ವಿ.ಹಿತೈಶಿ (38.53ಸೆ.)–2, ಅನ್ಸು ದೇಶಪಾಂಡೆ (38.92ಸೆ.)–3 (ಇಬ್ಬರೂ ಕರ್ನಾಟಕ).

100 ಮೀ.ಬಟರ್‌ಫ್ಲೈ: ರಿಷಿಕಾ ಯು. ಮಂಗಳೆ (1:11.67ಸೆ.)–1, ಅನ್ಸು ದೇಶಪಾಂಡೆ (1:13.93ಸೆ.)–2 (ಇಬ್ಬರೂ ಕರ್ನಾಟಕ), ಶ್ರೇಯಾ ಮೇರಿ ಕಮಲ್‌ (ಕೇರಳ; 1:15.22ಸೆ.)–3.

50 ಮೀ.ಬ್ಯಾಕ್‌ಸ್ಟ್ರೋಕ್‌: ರಿಧಿಮಾ ವೀರೇಂದ್ರ ಕುಮಾರ್‌ (32.65ಸೆ.)–1, ಆಸ್ನಾ ಅಶ್ವಿನಿ ಮತ್ತೂರ್‌ (34.98ಸೆ.)–2 (ಇಬ್ಬರೂ ಕರ್ನಾಟಕ).

4X50 ಮೀ. ಮೆಡ್ಲೆ: ಕರ್ನಾಟಕ (2:13.92ಸೆ.)–1.

ಗುಂಪು–4: 50 ಮೀ. ಬ್ರೆಸ್ಟ್‌ಸ್ಟ್ರೋಕ್‌: ವಿಹಿತಾ ನಯನ (ಕರ್ನಾಟಕ; 40.17ಸೆ.)–1, ವೇದಿಕಾ ಶ್ರೀರಾಮ್‌ (ತಮಿಳುನಾಡು; 40.66ಸೆ.)–2, ಮಾನವಿ ವರ್ಮಾ (ಕರ್ನಾಟಕ; 40.99ಸೆ.)–3.

50 ಮೀ.ಫ್ರೀಸ್ಟೈಲ್‌: ಮಾನವಿ ವರ್ಮಾ (32.08ಸೆ.)–1, ವಿಹಿತಾ ನಯನ (32.10ಸೆ.)–2 (ಇಬ್ಬರೂ ಕರ್ನಾಟಕ).

4X50 ಮೀ. ಮೆಡ್ಲೆ: ಕರ್ನಾಟಕ (2:26.48ಸೆ.)–1.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.