ಮಂಗಳೂರು: ಅಗ್ರ ಶ್ರೇಯಾಂಕಿತ ಸ್ಪೇನ್ ಪೆಡ್ಲರ್‌ಗಳಾದ ಫರ್ನಾಂಡೊ ಪೆರೆಜ್ ಮತ್ತು ಎಸ್ಪೆನಾನ್ಜ ಬರೆರಾಸ್ ಇಲ್ಲಿ ಭಾನುವಾರ ಮುಕ್ತಾಯಗೊಂಡ ಅಂತರರಾಷ್ಟ್ರೀಯ ಸ್ಟ್ಯಾಂಡ್ ಅಪ್ ಪೆಡಲಿಂಗ್ ಚಾಂಪಿಯನ್‌ಷಿಪ್‌ನ ಸ್ಪ್ರಿಂಟ್ ವಿಭಾಗದಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳಾ ವಿಭಾಗದ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡರು.
ಅಸೋಸಿಯೇಷನ್ ಆಪ್ ಪೆಡಲ್ ಸರ್ಫ್ ಪ‍್ರೊಫೆಷನಲ್ಸ್ (ಎಪಿಪಿ) ವಿಶ್ವ ಟೂರ್‌ನ ಅಂಗವಾಗಿ ಸಸಿಹಿತ್ಲು ಕಡಲ ಕಿನಾರೆಯಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಪೂಜಾರ ಸಹೋದರರಾದ ರಾಜು ಮತ್ತು ಆಕಾಶ್ ಮಿಂಚು ಹರಿಸಿ ಕ್ರಮವಾಗಿ ಮೊದಲ ಎರಡು ಪ್ರಶಸ್ತಿಗಳನ್ನು ಗೆದ್ದುಕೊಂಡರು.
ಪುರುಷರ 200 ಮೀಟರ್ ರೇಸ್‌ನಲ್ಲಿ ಪೆರೆಜ್ 2 ನಿಮಿಷ 37 ಸೆಕೆಂಡುಗಳ ಸಾಧನೆಯೊಂದಿಗೆ ಮೊದಲಿಗರಾದರು. ಸ್ಪೇನ್‌ನ ಕ್ರಿಶ್ಚಿಯನ್ ಆ್ಯಂಡೆರ್ಸನ್ (2 ನಿ53 ಸೆ) ರನ್ನರ್ ಅಪ್ ಆದರೆ ಹಂಗರಿಯ ಡ್ಯಾನಿಯಲ್ ಹಸ್ಯುಲೊ (2ನಿ 54) ಮೂರನೇ ಸ್ಥಾನ ಗಳಿಸಿದರು. ಮಹಿಳೆಯರ 200 ಮೀಟರ್ಸ್ ರೇಸ್‌ನಲ್ಲಿ ಗುರಿ ಮುಟ್ಟಲು ಬರೆರಾಸ್ 2ನಿಮಿಷ 55 ಸೆಕೆಂಡು ತೆಗೆದುಕೊಂಡರು. ರನ್ನರ್ ಅಪ್ ಇಟಲಿಯ ಬಿಯಾಂಕ ಟೊನ್ಸೆಲಿ 3 ನಿಮಿಷ 38 ಸೆಕೆಂಡುಗಳಲ್ಲಿ ಗುರಿ ತಲುಪಿದರೆ ಥಾಯ್ಲೆಂಟ್‌ನ ಐರಿನ್ ಎನ್ 3 ನಿಮಿಷ 54 ಸೆಕೆಂಡುಗಳಲ್ಲಿ ರೇಸ್ ಪೂರ್ತಿಗೊಳಿಸಿ ಮೂರನೇ ಸ್ಥಾನ ಗಳಿಸಿದರು.
ಜೂನಿಯರ್ ವಿಭಾಗದಲ್ಲಿ ರಾಜು ಪೂಜಾರ (4ನಿ 35ಸೆ) ಮೊದಲಿಗರಾದರೆ ಆಕಾಶ್ ಪೂಜಾರ (5ನಿ 35ಸೆ) ರನ್ನರ್ ಅಪ್ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಪ್ರವೀಣ್ ಪೂಜಾರ (5 ನಿ 39ಸೆ) ಮೂರನೇ ಸ್ಥಾನ ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.