ADVERTISEMENT

ಬ್ಯಾಡ್ಮಿಂಟನ್: ಅನಿರುದ್ಧ್‌ ಸ್ವರೂಪ್‌ಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 20 ಮೇ 2024, 22:30 IST
Last Updated 20 ಮೇ 2024, 22:30 IST
<div class="paragraphs"><p>ತೇಜರಾಜ್‌ ಕಿತ್ತೂರು ಎದುರಿನ ಪಂದ್ಯದಲ್ಲಿ ಗೆದ್ದ ಬೆಂಗಳೂರಿನ ಸಾಕೇತ್ ಸಿ, ಷಟಲ್‌ ಹಿಂತಿರುಗಿಸಿದರು </p></div>

ತೇಜರಾಜ್‌ ಕಿತ್ತೂರು ಎದುರಿನ ಪಂದ್ಯದಲ್ಲಿ ಗೆದ್ದ ಬೆಂಗಳೂರಿನ ಸಾಕೇತ್ ಸಿ, ಷಟಲ್‌ ಹಿಂತಿರುಗಿಸಿದರು

   

–ಪ್ರಜಾವಾಣಿ ಚಿತ್ರ/ಸತೀಶ್‌ ಬಡಿಗೇರ್

ದಾವಣಗೆರೆ: ಬೆಂಗಳೂರಿನ ಅನಿರುದ್ಧ್‌ ಕಶ್ಯಪ್‌ ಹಾಗೂ ಸ್ವರೂಪ್‌ ಪಾಲಾಕ್ಷಯ್ಯ ಅವರು ರಾಜ್ಯ ರ‍್ಯಾಂಕಿಂಗ್‌ ಸಬ್‌ ಜೂನಿಯರ್‌ ಬ್ಯಾಡ್ಮಿಂಟನ್‌ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಗೆದ್ದಿದ್ದಾರೆ.

ADVERTISEMENT

ಇಲ್ಲಿನ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ನಡೆದ 17 ವರ್ಷದೊಳಗಿನ ಬಾಲಕರ ವಿಭಾಗದ ಪಂದ್ಯದಲ್ಲಿ ಅನಿರುದ್ಧ್‌ 18-20, 15-9, 15-13 ರಿಂದ  ನಕುಲನ್‌ ಹರಿ ಎನ್‌.ಡಿ ಎದುರು ಜಯಿಸಿದರು.

ಇನ್ನೊಂದು ಪಂದ್ಯದಲ್ಲಿ ಸ್ವರೂಪ್‌ 15-10, 15-13 ರಿಂದ 12ನೇ ಶ್ರೇಯಾಂಕದ ಇಂದ್ರಾಜ್‌ ವಿನೋದ್‌ ವಿರುದ್ಧ ಗೆದ್ದರು.

ಇತರ ಪ್ರಮುಖ ಪಂದ್ಯಗಳಲ್ಲಿ ಬೆಂಗಳೂರಿನ ಪರಿಣ್‌ ಅರೋರಾ 15-10, 11-15, 15-12 ರಿಂದ ಮುರಳಿ ಕೃಷ್ಣ ಎದುರು, ಶಿವಮೊಗ್ಗದ ಅಭಿರಾಮ್‌ ಗಜಾನನ ಐತಾಳ್‌ 17-19, 15-13, 15-9 ರಿಂದ ದಿಯಾನ್‌ ಹಿತೇನ್‌ ಶಾ ವಿರುದ್ಧ, ರಾಯಚೂರಿನ ಕರಜಗಿ ವಿಷ್ಣು 14-16, 15-12, 15-6 ರಿಂದ ಶಶಾಂಕ್‌ ಬಿ.ವಿ ಎದುರು, ಕೊಡಗಿನ ವಿಶಾಲ್‌ ಡಿ.ಆನಂದ್‌ 9-15, 15-13, 15-12 ರಿಂದ ಹರ್ಷಿತ್‌ ಎಸ್‌.ಗೌಡ ವಿರುದ್ಧ ಹಾಗೂ ಚಾಮರಾಜನಗರದ ನೀಲೇಶ್‌ ಜಯರಾಜ್‌ 15-10, 9-15, 17-15 ರಿಂದ ಸತ್ಯಶಿಶ್‌ ಶರ್ಮಾ ಎದುರು, ಬೆಂಗಳೂರಿನ ಸಾಕೇತ್‌ ಸಿ. 15-9, 15-5 ರಿಂದ ತೇಜರಾಜ್‌ ಕಿತ್ತೂರು ವಿರುದ್ಧ ಜಯಿಸಿದರು.  

ದಿಯಾಗೆ ಜಯ: 17 ವರ್ಷದೊಳಗಿನ ಬಾಲಕಿಯ ವಿಭಾಗದ ಪಂದ್ಯದಲ್ಲಿ ಅಗ್ರಶ್ರೇಯಾಂಕಿತೆ, ಮೈಸೂರಿನ ದಿಯಾ ಭೀಮಯ್ಯ 15-7, 15-1ರಿಂದ ಹಂಸಾ ಮುರಳೀಧರ ಅವರನ್ನು ಮಣಿಸಿದರು.

ಇತರ ಪ್ರಮುಖ ಪಂದ್ಯಗಳಲ್ಲಿ ಬೆಂಗಳೂರಿನ ಸಮೀಕ್ಷಾ ಎಚ್‌.ಎನ್‌. 15-12 15-9 ರಿಂದ ದೇವಾಂಶಿ ಭಾಟಿಯಾ ಎದುರು, ಧಾರವಾಡದ ಅಭಿಶ್ರೀ 15-5, 15-6 ರಿಂದ ಜಾಹ್ನವಿ ಡಿ.ರಾಜು ಎದುರು, ಬೆಂಗಳೂರಿನ ಸೆಲ್ವಸಮೃದ್ಧಿ ಸೆಲ್ವಪ್ರಭು 15-7, 15-13ರಿಂದ ನಯೋನಿಕಾ ಪ್ರಶಾಂತ್‌ ವಿರುದ್ಧ, ಬೆಂಗಳೂರಿನ ನೇಹಾ ಕೃಪೇಶ್‌ 15-8, 15-6 ರಿಂದ ಜೊಹಾನಾ ಅಹಿಲಾನ್‌ ಎದುರು ಹಾಗೂ ಬೆಂಗಳೂರಿನ ಗೌರಿ ಭಟ್‌ 15-2, 15-2ರಿಂದ ತಿಯಾರಾ ಮುರಳೀಧ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.