ಕ್ಲೆವ್‌ಲ್ಯಾಂಡ್, ಅಮೆರಿಕ: ಭಾರತದ ಜೋಷ್ನಾ ಚಿನ್ನಪ್ಪ ಅವರು ಕ್ಲೆವ್‌ಲ್ಯಾಂಡ್ ಕ್ಲಾಸಿಕ್ ಸ್ಕ್ವಾಷ್ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗಯಿಟ್ಟಿದ್ದಾರೆ. ಶನಿವಾರ ರಾತ್ರಿ ನಡೆದ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಅವರು3–6, 11–6, 6–11, 11–8, 11–6ರಿಂದ ಹಾಂಗ್‌ಕಾಂಗ್‌ನ ಆ್ಯನ್ನಿ ವು ಅವರನ್ನು ಸೋಲಿಸಿದರು.
ಟೂರ್ನಿಯಲ್ಲಿ ಐದನೇ ಶ್ರೇಯಾಂಕ ಪಡೆದಿರುವ ಭಾರತದ ಆಟಗಾರ್ತಿಗೆ ಗೆಲುವು ಸುಲಭ ತುತ್ತಾಗಲಿಲ್ಲ. ಕನಿಷ್ಠ ಒಂದು ತಾಸು ನಡೆದ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಎದುರಾಳಿಯನ್ನು ಸದೆಬಡಿಯುವಲ್ಲಿ ಜೋಷ್ನಾ ಯಶಸ್ವಿಯಾದರು.
ಜೋಷ್ನಾ ಅವರಿಗೆ ಮೊದಲ ಸುತ್ತಿನಲ್ಲಿ ಬೈ ಲಭಿಸಿತ್ತು. ಎರಡನೇ ಸುತ್ತಿನ ಹಣಾಹಣಿಯಲ್ಲಿ ಅವರು ಈಜಿಪ್ಟ್‌ನ ಮೆನ್ನಾ ನಾಸರ್ ಎದುರು ಸುಲಭವಾಗಿ ಗೆದ್ದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.