ಬೆಂಗಳೂರು: ಸುಮನ್ ಮತ್ತು ರೋನಕ್ ಅವರ ಆಟದ ಬಲದಿಂದ ನ್ಯಾಷನಲ್ ಮೈಸೂರು ತಂಡವು ಕರ್ನಾಟಕ ರಾಜ್ಯ ಬ್ಯಾಸ್ಕೆಟ್‌ಬಾಲ್ ಸಂಸ್ಥೆಯ ಆಶ್ರಯದಲ್ಲಿ ಶುಕ್ರವಾರ ಆರಂಭಗೊಂಡ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 59–58ರಿಂದ ಇನ್‌ಸ್ಪೈರ್ ಧಾರವಾಡ ತಂಡದ ವಿರುದ್ಧ ರೋಚಕ ಗೆಲುವು ಸಾಧಿಸಿತು.
ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 1 ಪಾಯಿಂಟ್ ಅಂತರದಿಂದ ನ್ಯಾಷನಲ್ ತಂಡ ಜಯ ಗಳಿಸಿತು. ಸುಮನ್ (29), ರೋನಕ್ (24) ಮಿಂಚಿದರು. ಮಧ್ಯಂತರದ ವೇಳೆ 22–28ರಿಂದ ಮುನ್ನಡೆಯಲ್ಲಿದ್ದ ಇನ್‌ಸ್ಪೈರ್ ತಂಡ ನಂತರ ಮುಗ್ಗರಿಸಿತು.
ಅಭಿಷೇಕ್ (11), ನಿತೀಶ್ (10) ಅವರ ಆಟದ ನೆರವಿನಿಂದ ಬೆಳಗಾವಿ ಬಿ.ಸಿ ತಂಡವು 61–60ರಿಂದ ಚಿಕ್ಕಮಗಳೂರು ಬಿ.ಸಿ ತಂಡವನ್ನು ಮಣಿಸಿತು. ತಂಡ ಸೋತರೂ ನಿತಿನ್ (24), ಅಖಿಲ್ (20) ಆಟ ಗಮನ ಸೆಳೆಯಿತು.
ಇತರ ಪಂದ್ಯಗಳಲ್ಲಿ ಕೆಜಿಎಫ್‌ಬಿಸಿ ತಂಡ 55–35ರಿಂದ ಬೆಂಗಳೂರು ಸ್ಪೋರ್ಟಿಂಗ್ ತಂಡವನ್ನು; ಕನಕ ಕೋಲಾರ ತಂಡ 68–48ರಿಂದ ಸಿಜೆಸಿ ತಂಡವನ್ನು; ವ್ಯಾನ್ಗಾರ್ಡ್ಸ್ ತಂಡ 65–59ರಿಂದ ಡಿಆರ್‌ಡಿಒ ತಂಡವನ್ನು; ಜಿಎಸ್‌ಟಿ ಅಂಡ್ ಕಸ್ಟಮ್ಸ್ ತಂಡ 108–58ರಿಂದ ಹಲಸೂರು ಎಸ್.ಯು. ತಂಡವನ್ನು; ಸಹಕಾರನಗರ ತಂಡ 79–55ರಿಂದ ಬಿಸಿವೈಎ ತಂಡವನ್ನು; ಹೆಬ್ಬಾಳ ತಂಡ 72–58ರಿಂದ ಕೋರಮಂಗಲ ತಂಡವನ್ನು; ಬಿಎಸ್‌ಎನ್‌ಎಲ್ ತಂಡ 78–52ರಿಂದ ರಾಜ್‌ಮಹಲ್ ತಂಡವನ್ನು; ವಿಮಾನಪುರ ತಂಡ 68–56ರಿಂದ ಎಂಸಿಎಚ್‌ಎಸ್ ತಂಡವನ್ನು; ಆರ್ಯನ್ಸ್ ಮೈಸೂರು ತಂಡ 63–51ರಿಂದ ಮೌಂಟ್ಸ್ ಬಿಬಿಸಿ ತಂಡವನ್ನು; ನಾಲ್ವಡಿ ಸಿ.ಆರ್.ನಗರ ತಂಡ 63–40ರಿಂದ ಎಸ್‌ಬಿಐ ತಂಡವನ್ನು ಮಣಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.