ADVERTISEMENT

ರಾಜ್ಯ ಅಥ್ಲೆಟಿಕ್ ಕೂಟ: ಸಾದತ್‌, ದಾನೇಶ್ವರಿ ವೇಗದ ಅಥ್ಲೀಟ್ಸ್‌

ಉಡುಪಿಯ ಸವಿನ್‌, ಸ್ತುತಿಗೆ 100 ಮೀಟರ್ಸ್‌ ಓಟದಲ್ಲಿ ಚಿನ್ನದ ಪದಕ

​ಪ್ರಜಾವಾಣಿ ವಾರ್ತೆ
Published 8 ಜೂನ್ 2024, 0:28 IST
Last Updated 8 ಜೂನ್ 2024, 0:28 IST
ಸ್ತುತಿ ಶೆಟ್ಟಿ
ಸ್ತುತಿ ಶೆಟ್ಟಿ   

ಉಡುಪಿ: ಮಿಂಚಿನ ಓಟ ಪ್ರದರ್ಶಿಸಿದ ತುಮಕೂರಿನ ಮೊಹಮ್ಮದ್ ಸಾದತ್ ಮತ್ತು ಬೆಳಗಾವಿಯ ದಾನೇಶ್ವರಿ ಎ.ಟಿ, ಶುಕ್ರವಾರ ಮುಕ್ತಾಯಗೊಂಡ ರಾಜ್ಯ ಅಥ್ಲೆಟಿಕ್ ಕೂಟದಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದ ವೇಗದ ಅಥ್ಲೀಟ್ಸ್‌ ಎನಿಸಿಕೊಂಡರು.

ಕರ್ನಾಟಕ ಅಥ್ಲೆಟಿಕ್‌ ಸಂಸ್ಥೆ (ಕೆಎಎ) ಮತ್ತು ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯ ಆಶ್ರಯದಲ್ಲಿ ಅಜ್ಜರಕಾಡು ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನಡೆದ ಕೂಟದ ಪುರುಷರ 100 ಮೀಟರ್ಸ್ ಓಟದಲ್ಲಿ ಸಾದತ್ 10.44 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರೆ ದಾನೇಶ್ವರಿ ಗುರಿ ತಲುಪಲು 11.80 ಸೆಕೆಂಡು ತೆಗೆದುಕೊಂಡರು.

ಯೂತ್ ಬಾಲಕ ಮತ್ತು ಬಾಲಕಿಯರ ವಿಭಾಗದ 100 ಮೀಟರ್ಸ್ ಓಟದ ಚಿನ್ನ ಉಡುಪಿ ಜಿಲ್ಲೆಯ ಅಥ್ಲೀಟ್‌ಗಳ ಪಾಲಾಯಿತು. ಬಾಲಕರ ವಿಭಾಗದಲ್ಲಿ ಸವಿನ್ ತಿಂಗಳಾಯ, ಬಾಲಕಿಯರ ವಿಭಾಗದಲ್ಲಿ ಸ್ತುತಿ ಪಿ.ಶೆಟ್ಟಿ ಮೊದಲಿಗರಾದರು. ಪುರುಷರ ವಿಭಾಗದಲ್ಲಿ ಉಡುಪಿಯ ಅಭಿನ್ ದೇವಾಡಿಗ, ಮಹಿಳೆಯರ ವಿಭಾಗದಲ್ಲಿ ಬೆಂಗಳೂರಿನ ವಿಜಯಕುಮಾರಿ ಜಿ.ಕೆ, ಬಾಲಕರ ವಿಭಾಗದಲ್ಲಿ ದಕ್ಷಿಣ ಕನ್ನಡದ ಹಶ್ಮಿತ್ ಸಾಲಿಯಾನ್ ಮತ್ತು ಬಾಲಕಿಯರ ವಿಭಾಗಲ್ಲಿ ಉಡುಪಿಯ ಸ್ತುತಿ ಪಿ.ಶೆಟ್ಟಿ ಉತ್ತಮ ಅಥ್ಲೀಟ್‌ಗಳಾಗಿ ಹೊರಹೊಮ್ಮಿದರು.

ಎರಡನೇ ದಿನದ ಫಲಿತಾಂಶಗಳು (ಚಿನ್ನ ಮಾತ್ರ): ಪುರುಷರು: 100 ಮೀಟರ್ಸ್ ಓಟ: ಮೊಹಮ್ಮದ್ ಸಾದತ್ (ತುಮಕೂರು) ಕಾಲ: 10.44ಸೆ, 400 ಮೀ: ಬಾಲಕೃಷ್ಣ (ಹಾಸನ) ಕಾಲ: 48.62ಸೆ, 1500 ಮೀ: ವೈಭವ್ ಮಾರುತಿ ಪಾಟೀಲ (ಬೆಳಗಾವಿ) ಕಾಲ: 3ನಿ, 59.6 ಸೆ, 10000 ಮೀ:ಎ.ಆರ್‌.ರೋಹಿತ್‌ (ಬೆಳಗಾವಿ) ಕಾಲ: 32ನಿ, 35.1ಸೆ, 400 ಮೀ ಹರ್ಡಲ್ಸ್‌: ಪ್ರಣಾಮ್ ದೇವೇಂದ್ರ ಶೆಟ್ಟಿ (ಉಡುಪಿ) ಕಾಲ: 54.2 ಸೆ,3000 ಮೀ ಸ್ಟೀಪಲ್ ಚೇಸ್‌: ನಾಗರಾಜ ವೆಂಟಕೇಶ ದಿವಟೆ (ಧಾರವಾಡ) ಕಾಲ: 8ನಿ 59.71 ಸೆ, ಟ್ರಿಪಲ್ ಜಂಪ್‌: ರಾಧಾಕೃಷ್ಣ ಆರ್‌ (ಬೆಂಗಳೂರು) ಅಂತರ: 14.87ಮೀ, ಜಾವೆಲಿನ್ ಥ್ರೋ: ಶಾರೂಖ್‌ ತಾರಿಹಾಳ (ಬೆಂಗಳೂರು) ದೂರ: 66.83 ಮೀ, ಡಿಸ್ಕಸ್‌ ಥ್ರೋ: ನಾಗೇಂದ್ರ ಅಣ್ಣಪ್ಪ ನಾಯಕ್‌ (ಉತ್ತರ ಕನ್ನಡ) ದೂರ: 51.22ಮೀ, ಪೋಲ್ ವಾಲ್ಟ್‌: ಯದುಕೃಷ್ಣನ್‌ (ಯಾದಗಿರಿ) ಎತ್ತರ: 4.30ಮೀ. ಡೆಕಾಥ್ಲಾನ್‌: ಲೋಕೇಶ್ ರಾಥೋಡ್‌ (ಯಾದಗಿರಿ) ಪಾಯಿಂಟ್ಸ್‌: 5775.

ಮಹಿಳೆಯರು: 100 ಮೀ: ದಾನೇಶ್ವರಿ ಎ.ಟಿ (ಬೆಳಗಾವಿ) ಕಾಲ: 11.80ಸೆ, 400 ಮೀ: ವಿಜಯಕುಮಾರಿ ಜಿ.ಕೆ (ಬೆಂಗಳೂರು) ಕಾಲ: 54.54ಸೆ, 1500 ಮೀ: ಪ್ರಿಯಾಂಕಾ ಸಿ (ಬೆಂಗಳೂರು) ಕಾಲ: 4 ನಿ 52.7 ಸೆ, 10000 ಮೀ: ಕೆ.ಎಂ.ಲಕ್ಷ್ಮಿ (ದಕ್ಷಿಣ ಕನ್ನಡ) ಕಾಲ: 39ನಿ 34.5 ಸೆ, 400 ಮೀ ಹರ್ಡಲ್ಸ್‌: ಪ್ರಜ್ಞಾ ಕೆ (ಉಡುಪಿ) ಕಾಲ: 58.9ಸೆ, 3000 ಮೀ ಸ್ಟೀಪಲ್ ಚೇಸ್‌: ಶ್ರೀರಕ್ಷಾ (ಶಿವಮೊಗ್ಗ) ಕಾಲ: 11:40.12ಸೆ, ಟ್ರಿಪಲ್ ಜಂಪ್‌: ಪವಿತ್ರಾ ಜಿ (ಉಡುಪಿ) ಅಂತರ: 13.9 ಮೀ, ಡಿಸ್ಕಸ್ ಥ್ರೋ: ಸುಷ್ಮಾ ಬಿ (ದಕ್ಷಿಣ ಕನ್ನಡ) ದೂರ: 39.20 ಮೀ, ಪೋಲ್‌ವಾಲ್ಟ್‌: ಭವಿತಾ ಶೆಟ್ಟಿ (ದಕ್ಷಿಣ ಕನ್ನಡ) ಎತ್ತರ: 2.90ಮೀ, ಡೆಕಾಥ್ಲಾನ್‌: ಚಂದ್ರಿಕಾ (ಉಡುಪಿ) ಪಾಯಿಂಟ್ಸ್‌: 4285.

ಯೂತ್‌ ಬಾಲಕರು: 100ಮೀ: ಸವಿನ್ ತಿಂಗಳಾಯ (ಉಡುಪಿ) ಕಾಲ: 11ಸೆ, 400ಮೀ: ದಯಾನಂದ ದುಂಪಣ್ಣವರ (ದಕ್ಷಿಣ ಕನ್ನಡ) ಕಾಲ: 49.62ಸೆ, 5 ಕಿಮೀ ವೇಗನಡಿಗೆ: ವಿನಾಯಕ ಗುರುಸಿದ್ಧಪ್ಪ ಕುಬಿಹಾಳ (ದಕ್ಷಿಣ ಕನ್ನಡ) ಕಾಲ: 27ನಿ 4.02ಸೆ, ಡಿಸ್ಕಸ್ ಥ್ರೋ: ಅವಿನಾಶ್ ತಲಕೇರಿ (ಚಾಮರಾಜನಗರ) ದೂರ: 43.90 ಮೀ, ಜಾವೆಲಿನ್ ಥ್ರೋ: ಪುಷ್ಪಕ್‌ ನೆಲವಡೆ (ಬೀದರ್‌) ದೂರ: 63.55ಮೀ, ಹೆಪ್ಟಾಥ್ಲಾನ್‌: ಚಿನ್ಮಯ್‌ ಕೆ (ಚಾಮರಾಜನಗರ) ಪಾಯಿಂಟ್ಸ್‌: 3318.

ಯೂತ್‌ ಬಾಲಕಿಯರು: 100ಮೀ: ಸ್ತುತಿ ಪಿ.ಶೆಟ್ಟಿ (ಉಡುಪಿ) ಕಾಲ: 12.30 ಸೆ, 400 ಮೀ: ರೀತುಶ್ರೀ (ದಕ್ಷಿಣ ಕನ್ನಡ) ಕಾಲ: 58.38 ಸೆ, ಡಿಸ್ಕಸ್ ಥ್ರೋ: ತೇಜಸ್ವಿನಿ ಸಿ (ಮೈಸೂರು) ದೂರ: 36.61 ಮೀ, ಜಾವೆಲಿನ್ ಥ್ರೋ: ದಿಶಾ ನೆಲವಡೆ (ಬೀದರ್‌) ದೂರ: 38.71 ಮೀ, 3000 ಮೀ ವೇಗ ನಡಿಗೆ: ಅಂಬಿಕಾ ಕೋಳಿ (ದಕ್ಷಿಣ ಕನ್ನಡ) ಕಾಲ: 17ನಿ 12.30ಸೆ.

ವಿಜಯಕುಮಾರಿ
ಸವಿನ್ ತಿಂಗಳಾಯ (ಸಂಗ್ರಹ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.