ಬೆಂಗಳೂರು: ರಾಜ್ಯ ಅಮೆಚೂರ್ ಸೈಕ್ಲಿಂಗ್ ಸಂಸ್ಥೆ ಆಯೋಜಿಸಿರುವ ರಾಜ್ಯ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್‌ಷಿಪ್ ಇದೇ 25 ಮತ್ತು 26ರಂದು ಬಾಗಲಕೋಟೆ ಜಿಲ್ಲೆಯ ಬೀಳಗಿಯಲ್ಲಿ ನಡೆಯಲಿದೆ.
ಬಾಗಲಕೋಟೆ ಜಿಲ್ಲಾ ಸೈಕ್ಲಿಂಗ ಸಂಸ್ಥೆಯ ಸಹಯೋಗದಲ್ಲಿ ನಡೆಯಲಿರುವ ಚಾಂಪಿಯನ್‌ಷಿಪ್‌ನಲ್ಲಿ 14, 16 ಮತ್ತು 18 ವರ್ಷದೊಳಗಿನ ಬಾಲಕರು ಹಾಗೂ ಬಾಲಕಿಯರು, 23 ವರ್ಷದೊಳಗಿನ ಪುರುಷರ ಸ್ಪರ್ಧೆಗಳು ನಡೆಯಲಿವೆ. ಪುರುಷ ಮತ್ತು ಮಹಿಳೆಯರ ಮುಕ್ತ ಸ್ಪರ್ಧೆಗಳೂ ಇರುತ್ತವೆ.
ಎಲ್ಲ ವಿಭಾಗಗಳಲ್ಲೂ ಟೈಂ ಟ್ರಯಲ್ ಮತ್ತು ಮಾಸ್ಡ್ ಸ್ಟಾರ್ಟ್ ಸ್ಪರ್ಧೆಗಳು ಜರುಗಲಿವೆ. ಚಾಂಪಿಯನ್‍ಷಿಪ್‌ನಲ್ಲಿ ಪಾಲ್ಗೊಳ್ಳುವವರು ಎರಡು ಬ್ರೇಕ್ ಹೊಂದಿರುವ ಎಂ.ಟಿ.ಬಿ. ಸೈಕಲ್ ಹೊಂದಿರಬೇಕು. ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಮಹಾರಾಷ್ಟ್ರದಲ್ಲಿ ಅಕ್ಟೋಬರ್‌ನಲ್ಲಿ ಜರುಗಲಿರುವ ರಾಷ್ಟ್ರೀಯ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್‍ಷಿಪ್‌ಗಾಗಿ ರಾಜ್ಯ ತಂಡದ ಆಯ್ಕೆಯೂ ಈ ಸಂದರ್ಭದಲ್ಲಿ ನಡೆಯಲಿದೆ.
ಆಸಕ್ತರು ರಾಜ್ಯ ಸೈಕ್ಲಿಂಗ್ ಸಂಸ್ಥೆಯಲ್ಲಿ ನೋಂದಾಯಿತ ಜಿಲ್ಲಾ ಸೈಕ್ಲಿಂಗ್ ಸಂಸ್ಥೆಯ ಅಥವಾ ಸೈಕ್ಲಿಂಗ್ ಕ್ರೀಡಾ ಶಾಲೆ ಇಲ್ಲವೇ ಕ್ರೀಡಾನಿಲಯಗಳ ಮೂಲಕ ಪ್ರವೇಶ ಪತ್ರ ಕಳುಹಿಸಬೇಕು. ಮಾಹಿತಿಗೆ ರಾಜ್ಯ ಸೈಕ್ಲಿಂಗ್ ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀಶೈಲ ಎಂ. ಕುರಣಿ (9008377875) ಅವರನ್ನು ಸಂಪರ್ಕಿಸಲು ತಿಳಿಸಲಾಗಿದೆ.
ಬೆಂಗಳೂರು ಜಿಲ್ಲಾ ಸ್ಪರ್ಧೆ 19ರಂದು
ಬೆಂಗಳೂರು ಜಿಲ್ಲಾ ಅಮೆಚೂರ್ ಸೈಕ್ಲಿಂಗ್ ಸಂಸ್ಥೆ ಆಯೋಜಿಸಿರುವ ಜಿಲ್ಲಾ ಮಟ್ಟದ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್‌ಷಿಪ್ ಕಂಬಳಗೋಡಿನಲ್ಲಿರುವ ಡಾನ್ ಬೋಸ್ಕೊ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಇದೇ 19ರಂದು ನಡೆಯಲಿದೆ.
ಬೀಳಗಿಯಲ್ಲಿ ಆಯೋಜಿಸಿರುವ ಸ್ಪರ್ಧೆಗೆ ಆಯ್ಕೆಯೂ ಇಲ್ಲಿ ನಡೆಯಲಿರುವುದರಿಂದ ಆ ಸ್ಪರ್ಧೆಯ ಎಲ್ಲ ನಿಯಮಗಳೂ ಅನ್ವಯವಾಗಲಿವೆ. ಮಾಹಿತಿಗೆ ಜಿಲ್ಲಾ ಸಂಸ್ಥೆಯ ಗೌರವ ಕಾರ್ಯದರ್ಶಿ ಚಿಕ್ಕರಂಗಸ್ವಾಮಿ (9844385510) ಅವರನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.