ಕೋಲಾರ: ಬೆಳಗಾವಿ ಬಾಲಕರು ಬುಧವಾರ ಇಲ್ಲಿ ನಡೆದ ರಾಜ್ಯಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 14ರ ವಯೋಮಿತಿಯ ಜುಡೊ ಚಾಂಪಿಯನ್‌ಷಿಪ್‌ನಲ್ಲಿ ಮೇಲುಗೈ ಸಾಧಿಸಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಆಶ್ರಯದಲ್ಲಿ ನಡೆದ ಚಾಂಪಿಯನ್‌ಷಿಪ್‌ನ 7 ವಿಭಾಗಗಳಲ್ಲಿ 6ರಲ್ಲಿ ಅಗ್ರಸ್ಥಾನ ಸಂಪಾದಿಸಿದರು.
ವಿವಿಧ ವಿಭಾಗಗಳಲ್ಲಿ ಈ ಜಿಲ್ಲೆಯ ಆಕಾಶ್, ಧೀರಜ್ ಹವಾಲ್ದಾರ್, ಸಂದೀಪ್ ಕೆ.ನಾಯಕ್, ಶಿವ ಯೋಗಿ ಸಂಗಮೇಶ್, ರಿಯಾಜ್ ಮೊದಲ ಸ್ಥಾನ ಗಿಟ್ಟಿಸಿದರು. ಪ್ರೌಢಶಾಲಾ ವಿಭಾಗದ 17 ವರ್ಷದೊಳಗಿನವರ ಬಾಲಕಿಯರ ವಿಭಾಗದಲ್ಲಿ ಉತ್ತಮ ಪೈಪೋಟಿ ಮೂಡಿಬಂತು. ಎರಡು ದಿನ ನಡೆದ ಚಾಂಪಿಯನ್‌ಷಿಪ್‌ನಲ್ಲಿ 15 ಜಿಲ್ಲೆಗಳಿಂದ ಸುಮಾರು 600 ಮಕ್ಕಳು ಪೈಪೋಟಿ ನಡೆಸಿದರು.
ಫಲಿತಾಂಶ ಇಂತಿವೆ: 14 ವರ್ಷ ಬಾಲಕರು (25 ಕೆ.ಜಿ ಒಳಗೆ): ಆಕಾಶ್ (ಬೆಳಗಾವಿ)–1, ಮಂಜುನಾಥ್ (ದಾವ ಣಗೆರೆ)–2, ಅರ್ಹನ್ (ಬಾಗಲಕೋಟೆ), ಅಕ್ಷಯ್ ಕುಮಾರ್ ( ಮಂಡ್ಯ)–3.
30 ಕೆ.ಜಿ ಒಳಗೆ: ಧೀರಜ್ ಹವಾಲ್ದಾರ್ (ಬೆಳಗಾವಿ)–1, ವಿ.ನಾಗಚರಣ್ (ಬೆಂಗಳೂರು ಉತ್ತರ)–2, ಪಿ.ಪ್ರಜ್ವಲ್ (ಶಿವಮೊಗ್ಗ), ರಿತಿವಂತ್ (ವಿಜಯಪುರ)–3.
35 ಕೆ.ಜಿ ಒಳಗೆ: ಸಂದೀಪ್ ಕೆ.ನಾಯಕ್ (ಬೆಳಗಾವಿ)–1, ಬಿಮಲ್ ಪಾರ್ಕಿ (ಬೆಂಗಳೂರು ಉತ್ತರ)–2, ಪ್ರದೀಪ್ (ಬಾಗಲಕೋಟೆ), ಮಾದೇಶ್ (ಬೆಂಗಳೂರು ದಕ್ಷಿಣ)–3.
40 ಕೆ.ಜಿ ಒಳಗೆ: ಶಿವ ಯೋಗಿ (ಬೆಳಗಾವಿ)–1. ಗಾಯ್‌ಬುಂಗ್ ರಿಯಾಮ್ (ಬೆಂಗಳೂರು ದಕ್ಷಿಣ)–2, ಸರ್ಪರಾಜ್ (ಬಾಗಲಕೋಟೆ), ಸಾಗರ್ (ಶಿವಮೊಗ್ಗ)–3.
45 ಕೆ.ಜಿ ಒಳಗೆ: ಸಂಗಮೇಶ್ (ಬೆಳಗಾವಿ)–1, ಪಾಕಂಗ್ ಲುಂಗ್ಬೆ ರಿಯಾಮ್ (ಬೆಂಗಳೂರು ದಕ್ಷಿಣ)–2, ಬಿ.ಎನ್.ರುದ್ರೇಶ್ (ದಾವಣಗೆರೆ), ಪವನ್ (ಬೆಂಗಳೂರು)–3.
50 ಕೆ.ಜಿ ಒಳಗೆ: ರಿಯಾಜ್ (ಬೆಳಗಾವಿ)–1, ಯುವರಾಜ್ (ಚಿಕ್ಕಮಗಳೂರು)–2, ಸಾಯಿಶ್ಯಾಮ್ (ಕಲಬುರಗಿ), ದಿಲ್ಶಾನ್ (ಬೆಂಗಳೂರು ಉತ್ತರ)–3.
50 ಕೆ.ಜಿ ಮೇಲೆ: ಹ್ಯಾಪಿ ರಾಜ್ (ಕಲಬುರಗಿ)–1, ಪವನ್ ನಾಯಕ್ (ದಾವಣಗೆರೆ)–2, ವೇದಾಂತ್ (ಚಿಕ್ಕೋಡಿ), ಗುರುಪ್ರಸಾದ್ ಟಿ.ಎನ್ (ಕೋಲಾರ)–3.
ಬಾಲಕಿಯರು: 17 ವರ್ಷ: 36 ಕೆ.ಜಿ ಒಳಗೆ: ಎಂ.ಬಿ.ಭಾಗ್ಯಾ (ಧಾರವಾಡ)–1, ಟಿ.ವಿ.ಅನು (ಕೋಲಾರ)–2, ಗಂಗಾ ಸಾರ್ಕಿ (ಬೆಂಗಳೂರು ಉತ್ತರ), ಅನುರಾಧಾ (ಚಿಕ್ಕೋಡಿ)–3.
40 ಕೆ.ಜಿ ಒಳಗೆ: ಅಮೃತಾ ಅಶೋಕ್ ನಾಯಕ್ (ಬೆಳಗಾವಿ)–1, ವರಲಕ್ಷ್ಮಿ (ಬೆಂಗಳೂರು ದಕ್ಷಿಣ)–2, ಕಾವ್ಯಾ (ಕೋಲಾರ), ಕೆ.ವೈ.ಸ್ಪಂದನಾ (ದಾವಣಗೆರೆ)–3.
44 ಕೆ.ಜಿ. ಒಳಗೆ: ದಾನೇಶ್ವರಿ (ಕೋಲಾರ)–1, ಜೆ.ದೀಪಿಕಾ (ಬೆಂ. ಉತ್ತರ)–2, ಎಸ್.ಚೈತ್ರಶ್ರೀ (ಮಂಡ್ಯ), ಶಾಂಭವಿ ಎಸ್.ಬಿರಾದಾರ್ (ವಿಜಯಪುರ)–3. 48 ಕೆ.ಜಿ ಒಳಗೆ: ಎಂ.ಕವನಾ (ದಾವಣಗೆರೆ)–1, ಮೀನಾಕ್ಷಿ (ಬೆಂ.ಗ್ರಾಮಾಂತರ)–2, ವರ್ಷಾ (ಶಿವಮೊಗ್ಗ), ತೃಪ್ತಿ (ಬೆಂ. ಉತ್ತರ)–3.
52 ಕೆ.ಜಿ ಒಳಗೆ: ಆರತಿ (ವಿಜಯಪುರ)–1, ಜಿ.ಕಾವ್ಯಾ (ಬೆಳಗಾವಿ)–2, ಕೀರ್ತಿ ಬಾಯಿ (ಶಿವಮೊಗ್ಗ), ಪ್ರೀತಿ (ಚಿಕ್ಕೋಡಿ)–3.
57 ಕೆ.ಜಿ.ಒಳಗೆ: ಸಂಜನಾ (ಶಿವಮೊಗ್ಗ)–1, ಆಫ್ರೀನ್ ಬಾನು (ಬೆಳಗಾವಿ)–2, ಐಶ್ವರ್ಯಾ (ಮಂಡ್ಯ), ಕೆ.ಪೂಜಾ (ದಾವಣಗೆರೆ)–3.
63 ಕೆ.ಜಿ ಒಳಗೆ: ತನುಶ್ರೀ (ವಿಜಯಪುರ)–1, ಕೆ.ಶ್ರೇಯಾ (ಬೆಂ. ಗ್ರಾಮಾಂತರ)–2, ಎಸ್.ಶ್ರೇಯಾ (ಬೆಂಗಳೂರು ಉತ್ತರ), ಆರ್.ಹಂಸಾ (ದಾವಣಗೆರೆ)–3. 70 ಕೆ.ಜಿ ಒಳಗೆ: ಎಂ.ಚಂದನಾ (ಬೆಂ. ಗ್ರಾಮಾಂತರ)–1, ಪ್ರೀತಿ (ಮಂಡ್ಯ)–2, ಬಿ.ಎಂ.ಲಕ್ಷ್ಮಿ (ದಾವಣಗೆರೆ), ಎಂ.ಸಿಂಧು (ಕೋಲಾರ)–3. 70 ಕೆ.ಜಿ ಮೇಲೆ: ಐಶ್ವರ್ಯಾ (ಬೆಳಗಾವಿ)–1, ತಿಪ್ಪವ್ವ (ಬಾಗಲಕೋಟೆ)–2, ಪುಷ್ಟಿ (ಮಂಡ್ಯ), ಕೆ.ಆರ್.ತೇಜಸ್ವಿನಿ (ಬೆಂ. ಉತ್ತರ)–3.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.