ADVERTISEMENT

ಸಬ್‌ ಜೂನಿಯರ್‌ ಬ್ಯಾಡ್ಮಿಂಟನ್‌ ಟೂರ್ನಿ: ಪ್ರೀ ಕ್ವಾರ್ಟರ್‌ ಫೈನಲ್‌ಗೆ ಪ್ರಾಪ್ತಿ

​ಪ್ರಜಾವಾಣಿ ವಾರ್ತೆ
Published 22 ಮೇ 2024, 23:30 IST
Last Updated 22 ಮೇ 2024, 23:30 IST
ಬಾಲಕಿಯರ ಡಬಲ್ಸ್‌ ವಿಭಾಗದ ಪಂದ್ಯದಲ್ಲಿ ಗೆದ್ದ ಬಿ.ಇಶಿಕಾ ಮತ್ತು ಲಕ್ಷ್ಯ ರಾಜೇಶ್‌ ಅವರ ಆಟದ ವೈಖರಿ –ಪ್ರಜಾವಾಣಿ ಚಿತ್ರ/ಸತೀಶ್‌ ಬಡಿಗೇರ್‌ 
ಬಾಲಕಿಯರ ಡಬಲ್ಸ್‌ ವಿಭಾಗದ ಪಂದ್ಯದಲ್ಲಿ ಗೆದ್ದ ಬಿ.ಇಶಿಕಾ ಮತ್ತು ಲಕ್ಷ್ಯ ರಾಜೇಶ್‌ ಅವರ ಆಟದ ವೈಖರಿ –ಪ್ರಜಾವಾಣಿ ಚಿತ್ರ/ಸತೀಶ್‌ ಬಡಿಗೇರ್‌    

ದಾವಣಗೆರೆ: ಉಡುಪಿಯ ಪ್ರಾಪ್ತಿ ಕುಮಾರ್‌, ಇಲ್ಲಿ ನಡೆಯುತ್ತಿರುವ ರಾಜ್ಯ ರ‍್ಯಾಂಕಿಂಗ್‌ ಸಬ್‌ ಜೂನಿಯರ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.  

ಬುಧವಾರ ನಡೆದ 17 ವರ್ಷದೊಳಗಿನ ಬಾಲಕಿಯರ ವಿಭಾಗದ ಪಂದ್ಯದಲ್ಲಿ ಪ್ರಾಪ್ತಿ 21-15, 17-21, 21-8 ರಿಂದ ಮೂರನೇ ಶ್ರೇಯಾಂಕದ ಗೌರಿ ಭಟ್‌ ಅವರನ್ನು ಸೋಲಿಸಿದರು. 

ಇನ್ನೊಂದು ಪಂದ್ಯದಲ್ಲಿ ಬೆಂಗಳೂರಿನ ಲಕ್ಷ್ಯ ರಾಜೇಶ್‌ 21-16, 21-8 ರಿಂದ 10ನೇ ಶ್ರೇಯಾಂಕದ ಖುಷಿ ಶಾ ಎದುರು ಗೆದ್ದರು.  

ADVERTISEMENT

ಇತರ ಪಂದ್ಯಗಳಲ್ಲಿ ಧಾರವಾಡದ ಅಭಿಶ್ರೀ 21-7, 16-21, 21-19 ರಿಂದ ದಿಯಾ ಶಿವರಾಜ್‌ ವಿರುದ್ಧ, ಬೆಂಗಳೂರಿನ ನೇಹಾ ಕೃಪೇಶ್‌ 21-15, 21-8 ರಿಂದ ಅನ್ವಿ ಬೋರಾ ಎದುರು ವಿಜಯಿಯಾದರು.  

17 ವರ್ಷದೊಳಗಿನ ಬಾಲಕರ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಬೆಂಗಳೂರಿನ ರೆಹಾನ್‌ ಆರಿಜ್‌ 16-21, 21-18, 22-20 ರಿಂದ 16ನೇ ಶ್ರೇಯಾಂಕದ ಹರ್ಷದ್‌ ಶಾದಿಶ್‌ ಅವರನ್ನು ಮಣಿಸಿದರು.  

ಇತರ ಪಂದ್ಯಗಳಲ್ಲಿ ಚಾಮರಾಜನಗರದ ನೀಲೇಶ್‌ ಜಯರಾಜ್‌ 21-15, 21-18 ರಿಂದ ಪಿಯೂಷ್‌ ತ್ರಿಪಾಠಿ ಎದುರು, ಮೈಸೂರಿನ ಗೌರವ್‌ ಆರ್‌. 21-10, 21-15 ರಿಂದ ಆಡ್ರಿಯನ್‌ ಎಡ್ವರ್ಡ್‌ ವಿರುದ್ಧ ಜಯಿಸಿದರು.   

17 ವರ್ಷದೊಳಗಿನ ಬಾಲಕಿಯರ ಡಬಲ್ಸ್‌ನ ಎರಡನೇ ಸುತ್ತಿನ ಪೈಪೋಟಿಯಲ್ಲಿ ಬೆಂಗಳೂರಿನ ಬಿ.ಇಶಿಕಾ ಮತ್ತು ಲಕ್ಷ್ಯ ರಾಜೇಶ್‌ 21-7, 21-7 ರಿಂದ ಪಲ್ಲವಿ ಫುಕಾನ್‌ ಮತ್ತು ವಾನಶಿ ಚೌಹಾಣ್‌ ಎದುರು, ಮೈಸೂರಿನ ಮೌಲ್ಯ ಎಂ.ಎನ್‌ ಮತ್ತು ರಿಯಾ ಪಟೇಲ್‌ 21-15, 21-18 ರಿಂದ ದೀಕ್ಷಾ ಕೆ.ಎಚ್‌ ಮತ್ತು ನಮ್ರತಾ ಎನ್‌.ರಾಜು ವಿರುದ್ಧ ಗೆದ್ದರು. 

17 ವರ್ಷದೊಳಗಿನ ಬಾಲಕರ ಡಬಲ್ಸ್‌ನ ಮೊದಲ ಸುತ್ತಿನ ಹೋರಾಟಗಳಲ್ಲಿ ಬೆಂಗಳೂರಿನ ಇವಾನ್‌ ಫರ್ನಾಂಡೀಸ್‌ ಮತ್ತು ವಿಹಾನ್‌ ಅರೋರಾ 21-12, 21-17 ರಿಂದ ಅಭಯ್‌ ಸೂರ್ಯವಂಶಿ ಮತ್ತು ಅಯಾನ್‌ ಖಾನ್‌ ಎದುರು, ಮೈಸೂರಿನ ಅಮಿತ್‌ ರಾಜ್‌ ಮತ್ತು ಹಾರ್ದಿಕ್‌ ದಿವ್ಯಾಂಶ್‌ 21-9, 21-12 ರಿಂದ ಆಯುಷ್‌ ಸಿಂಗ್‌ ಮತ್ತು ಸಾಯಿ ಶ್ರವಣ್‌ ವಿರುದ್ಧ ಗೆಲುವು ಕಂಡರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.