ಬೆಂಗಳೂರು: ಆಕಾಶ್ ಕೆ.ಜೆ ಮತ್ತು ಖುಷಿ ವಿ. ಅವರು ಭಾನುವಾರ ಡಾ.ಎಂ.ಎಸ್.ರಾಮಯ್ಯ ಸ್ಮಾರಕ ಕರ್ನಾಟಕ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದರು.
ದೊಡ್ಡಬಳ್ಳಾಪುರದ ಹಿಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆದ ಟೂರ್ನಿಯಲ್ಲಿ ಆಕಾಶ್ 4–0 (12–10, 11-5, 11-8, 11-4)ಯಿಂದ ಅಭಿನವ್ ಕೆ. ಮೂರ್ತಿ ಅವರನ್ನು ನೇರ ಗೇಮ್‌ಗಳಿಂದ ಮಣಿಸಿ ಕಿರೀಟ ಮುಡಿಗೇರಿಸಿಕೊಂಡರು.
ಸೆಮಿಫೈನಲ್‌ನಲ್ಲಿ ಅಕಾಶ್ 4–1 (11-6, 11-8, 11-7, 8-11, 11-3)ರಿಂದ ಅನಿರ್ಬನ್ ರಾಯ್ ಚೌಧರಿ ವಿರುದ್ಧ; ಅಭಿನವ್ 4–3 (11-4, 8-11, 11-5, 1-11, 11-3, 9-11, 11-9)ರಿಂದ ಸಂಜಯ್ ಮಾಧವನ್ ಅವರನ್ನು ಸೋಲಿಸಿದ್ದರು.
ಮಹಿಳೆಯರ ಸಿಂಗಲ್ಸ್‌ನ ಫೈನಲ್‌ನಲ್ಲಿ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ಖುಷಿ 4–2 (8-11, 5-11, 11-5, 11-7, 11-8, 12-10)ರಿಂದ ವೇದಾಲಕ್ಷ್ಮಿ ಡಿ.ಕೆ. ಅವರನ್ನು ಸೋಲಿಸಿದರು.
ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಖುಷಿ 4–2 ( 11-8, 8-11, 6-11, 14-12, 13-11, 11-6) ರಿಂದ ತೃಪ್ತಿ ಪುರೋಹಿತ್ ಎದುರು; ವೇದಾಲಕ್ಷ್ಮಿ 4–1 (10-12, 11-6, 11-7, 8-11, 11-9, 12–10)ರಿಂದ ಸಹನಾ ಎಚ್. ಮೂರ್ತಿ ಎದುರು ಜಯ ಸಾಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.