ಬೆಂಗಳೂರು: ಸುದರ್ಶನ್ ಎ. ರಾಜ್ ಮತ್ತು ಯುಕ್ತಾ ಹರ್ಷ ಅವರು ಮಲ್ಲೇಶ್ವರದ ಕೆನರಾ ಯೂನಿಯನ್ ಆಶ್ರಯದಲ್ಲಿ ಶುಕ್ರವಾರ ಆರಂಭಗೊಂಡ ರಾಜ್ಯ ರ್‍ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ 11 ವರ್ಷದೊಳಗಿನವರ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಬಾಲಕರ ವಿಭಾಗದ ಫೈನಲ್ ಪಂದ್ಯದಲ್ಲಿ ಸುದರ್ಶನ್ ಎ. ರಾಜ್ 11-9, 5-11, 11-7, 11-5 ರಿಂದ ಅಂಕುಶ್ ಬಾಳಿಗ ಅವರನ್ನು ಪರಾಭವಗೊಳಿಸಿದರು. ಸೆಮಿಫೈನಲ್‌ನಲ್ಲಿ ಸುದರ್ಶನ್ ಅವರು ಎಂ.ಸಿದ್ಧಾಂತ್ ಅವರನ್ನು, ಅಂಕುಶ್ ಬಾಳಿಗ ಅವರು ಎಂ.ಸಾತ್ವಿಕ್ ಅವರನ್ನು ಸೋಲಿಸಿದ್ದರು.
ಬಾಲಕಿಯರ ವಿಭಾಗದ ಫೈನಲ್ ಪಂದ್ಯದಲ್ಲಿ ಯುಕ್ತಾ ಹರ್ಷ 11- 6, 11- 3, 11- 6 ರಿಂದ ಕ್ರಿಶಾ ಪಿ. ಕರ್ಕೇರ ಅವರನ್ನು ಮಣಿಸಿದರು. ಸೆಮಿಫೈನಲ್‌ನಲ್ಲಿ ಯುಕ್ತಾ ಅವರು ರಚಿತಾ ಅವರನ್ನು, ಕ್ರಿಶಾ ಅವರು ಸಾಕ್ಷ್ಯಾ ಸಂತೋಷ್ ಅವರನ್ನು ಸೋಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.