ಬೆಂಗಳೂರು: ಎಚ್‌ಬಿಆರ್ ಮತ್ತು ನ್ಯಾಷನಲ್ಸ್ ಬಿ.ಸಿ. ಮೈಸೂರು ತಂಡಗಳು ಇಲ್ಲಿ ನಡೆಯುತ್ತಿರುವ ರಾಜ್ಯ ಸಬ್‌ಜೂನಿಯರ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗದ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿವೆ.
ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ಎಂಟರಘಟ್ಟದ ಪಂದ್ಯದಲ್ಲಿ ಶನಿವಾರ ಎಚ್‌ಬಿಆರ್ ಬಿ.ಸಿ 47–8ರಿಂದ ಪ್ರೊಟೆಕ್ ಚಾಲೆಂಜರ್ಸ್ ಮೈಸೂರು ವಿರುದ್ಧ ಗೆದ್ದಿತು. ವಿಜೇತ ತಂಡದ ಸಂವೇಗ್ 18 ಪಾಯಿಂಟ್ಸ್ ಗಳಿಸಿದರು.
ಬಾಲಕರ ವಿಭಾಗದ ಇನ್ನುಳಿದ ಕ್ವಾರ್ಟರ್‌ಫೈನಲ್ ಪಂದ್ಯಗಳಲ್ಲು ಬೆಂಗಳೂರು ಸ್ಪೋರ್ಟಿಂಗ್ 57–32ರಿಂದ ಅಪ್ಪಯ್ಯ ಬಿ.ಸಿ. ವಿರುದ್ಧ, ಎಂ.ಎನ್.ಕೆ.ರಾವ್ ಪಾರ್ಕ್ 43–36ರಿಂದ ಕೋರಮಂಗಲ ಎಸ್‌ಸಿ ವಿರುದ್ಧ, ಭಾರತ್ ಎಸ್‌ಯು 38–36ರಿಂದ ಪಿ.ಪಿ.ಸಿ ತಂಡದ ಎದುರು ಜಯಿಸಿದವು.
ಬಾಲಕಿಯರ ವಿಭಾಗದ ಎಂಟರಘಟ್ಟದ ಪಂದ್ಯದಲ್ಲಿ ನ್ಯಾಷನಲ್ಸ್ ಬಿ.ಸಿ. ಮೈಸೂರು 45–12ರಿಂದ ಬೀಗಲ್ಸ್ ಬಿ.ಸಿ. ಎದುರು ಗೆದ್ದಿತು. ನ್ಯಾಷನಲ್ಸ್ ತಂಡಕ್ಕಾಗಿ ನಮಿತಾ 12 ಪಾಯಿಂಟ್ಸ್ ಗಳಿಸಿದರು. ಇನ್ನುಳಿದ ಪಂದ್ಯಗಳಲ್ಲಿ ಎಂಸಿಎಚ್ಎಸ್ 56–11ರಿಂದ ಮಲ್ಲಸಜ್ಜನ ಬಿ.ಸಿ. ಧಾರವಾಡ ಎದುರು, ಅಪ್ಪಯ್ಯ ಬಿ.ಸಿ. 38– 33ರಿಂದ ಡಿವೈಇಎಸ್ ಮಂಡ್ಯ ಎದುರು, ಕೋರಮಂಗಲ ಎಸ್‌ಸಿ 32–5ರಿಂದ ಪಿ.ಪಿ.ಸಿ ಎದುರು ಜಯ ಸಾಧಿಸಿದವು.
ಬಾಲಕರ ಸೆಮಿಫೈನಲ್ ಪಂದ್ಯಗಳಲ್ಲಿಭಾನುವಾರ ಬೆಂಗಳೂರು ಸ್ಪೋರ್ಟಿಂಗ್– ಎಚ್‌ಬಿಆರ್ ಬಿ.ಸಿ. ಮತ್ತು ಎಂ.ಎನ್.ಕೆ.ರಾವ್– ಭರತ್ ಎಸ್.ಯು. ಮುಖಾಮುಖಿಯಾಗಲಿವೆ.
ಬಾಲಕಿಯರ ವಿಭಾಗದ ನಾಲ್ಕರ ಘಟ್ಟದ ಪಂದ್ಯಗಳಲ್ಲಿ ಎಂಸಿಎಚ್‌ಎಸ್–ಅಪ್ಪಯ್ಯ ಬಿ.ಸಿ ಮತ್ತು ನ್ಯಾಷನಲ್ಸ್ ಮೈಸೂರು– ಕೋರಮಂಗಲ ಬಿಸಿ ಸೆಣಸಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.