ADVERTISEMENT

ಹಾಕಿ: ಭಾರತ ಓಟಕ್ಕೆ ಆಸ್ಟ್ರೇಲಿಯಾ ತಡೆ

ಪಿಟಿಐ
Published 23 ಅಕ್ಟೋಬರ್ 2024, 16:03 IST
Last Updated 23 ಅಕ್ಟೋಬರ್ 2024, 16:03 IST
<div class="paragraphs"><p> ಹಾಕಿ </p></div>

ಹಾಕಿ

   

ಪ್ರಾತಿನಿಧಿಕ ಚಿತ್ರ

ಜೊಹೊರ್ ಬಾರು, ಮಲೇಷ್ಯಾ: ಆಸ್ಟ್ರೇಲಿಯಾ ತಂಡವು ಸುಲ್ತಾನ್ ಆಫ್ ಜೊಹೊರ್ ಕಪ್ ಜೂನಿಯರ್ ಹಾಕಿ ಟೂರ್ನಿಯಲ್ಲಿ ಭಾರತದ ಗೆಲುವಿನ ಓಟಕ್ಕೆ ತಡೆಯೊಡ್ಡಿತು. 

ADVERTISEMENT

ಬುಧವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 4–0ಯಿಂದ ಭಾರತ ತಂಡವನ್ನು ಮಣಿಸಿತು. 

ಭಾರತ ತಂಡದ ಫಾರ್ವರ್ಡ್ ಆಟಗಾರರು ಆಸ್ಟ್ರೇಲಿಯಾದ ರಕ್ಷಣಾ ಕೋಟೆಯನ್ನು ದಾಟಲು ವಿಫಲವಾಯಿತು. ಡೇಕಿನ್ ಸ್ಟೇಂಜರ್ (33ನಿ, 39ನಿ ಮತ್ತು 53ನಿ) ಗೋಲುಗಳ ಹ್ಯಾಟ್ರಿಕ್ ಸಾಧನೆ ಮಾಡಿದರು. ಪ್ಯಾಟ್ರಿಕ್ ಆ್ಯಂಡ್ರ್ಯೂ (29ನೇ ನಿ) ಒಂದು ಗೋಲು ಗಳಿಸಿದರು. 

ಈ ಸೋಲಿನ ನಂತರವೂ ಭಾರತ ತಂಡವು (9 ಅಂಕ) ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿಯಿತು. ಆಸ್ಟ್ರೇಲಿಯಾ (7 ಅಂಕ) ತಂಡವು 3ನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ (8) ಎರಡನೇ ಸ್ಥಾನದಲ್ಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.