ADVERTISEMENT

ಜೊಹೊರ್ ಕಪ್ ಹಾಕಿ: ಭಾರತ ಅಜೇಯ ಓಟ

ಪಿಟಿಐ
Published 22 ಅಕ್ಟೋಬರ್ 2024, 16:09 IST
Last Updated 22 ಅಕ್ಟೋಬರ್ 2024, 16:09 IST
<div class="paragraphs"><p>ಭಾರತ ಹಾಕಿ ತಂಡ</p></div>

ಭಾರತ ಹಾಕಿ ತಂಡ

   

ಪಿಟಿಐ ಚಿತ್ರ

ಜೊಹೊರ್ ಬಾರು,ಮಲೇಷ್ಯಾ: ಭಾರತ ತಂಡವು ಸುಲ್ತಾನ್ ಆಫ್ ಜೊಹೊರ್ ಕಪ್ ಜೂನಿಯರ್ ಪುರುಷರ ಹಾಕಿ ಟೂರ್ನಿಯಲ್ಲಿ ಅಜೇಯ ಓಟ ಮುಂದುವರಿಸಿತು. 

ADVERTISEMENT

3 ಬಾರಿಯ ಚಾಂಪಿಯನ್ ಭಾರತ ತಂಡವು ಮಂಗಳವಾರ ನಡೆದ ಪಂದ್ಯದಲ್ಲಿ 4–2ರಿಂದ ಆತಿಥೇಯ ಮಲೇಷ್ಯಾ ವಿರುದ್ಧ ಗೆದ್ದಿತು. ಈ ಜಯದೊಂದಿಗೆ ಭಾರತ ತಂಡವು 9 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದೆ. 

5 ಅಂಕ ಪಡೆದಿರುವ ನ್ಯೂಜಿಲೆಂಡ್ ಎರಡನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ (4) ಮೂರನೇ ಸ್ಥಾನದಲ್ಲಿದೆ.

ಮಲೇಷ್ಯಾ ಎದುರಿನ ಪಂದ್ಯದಲ್ಲಿ ಭಾರತದ ಶ್ರದ್ಧಾನಂದ ತಿವಾರಿ (11ನೇ ನಿಮಿಷ), ಅರ್ಷದೀಪ್ ಸಿಂಗ್ (13ನಿ), ತಲೆಂ ಪ್ರಿಯೊಬ್ರಥ್ (39ನಿ) ಮತ್ತು ರೋಹಿತ್ (40ನಿ) ತಲಾ ಒಂದು ಗೋಲು ಹೊಡೆದರು. 

ಮಲೇಷ್ಯಾದ ಮೊಹಮ್ಮದ್ ದಾನೀಶ್ ಐಮನ್ (8ನಿ) ಮತ್ತು ಹ್ಯಾರಿಸ್ ಒಸ್ಮಾನ್ (9ನೇ ನಿ) ಅವರೂ ತಲಾ ಒಂದು ಗೋಲು ಹೊಡೆದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.