ADVERTISEMENT

ಸೂಪರ್‌ಬೆಟ್‌ ಚೆಸ್‌ ಕ್ಲಾಸಿಕ್‌ ಟೂರ್ನಿ: ಡ್ರಾ ಪಂದ್ಯದಲ್ಲಿ ಗುಕೇಶ್, ಪ್ರಜ್ಞಾನಂದ

​ಪ್ರಜಾವಾಣಿ ವಾರ್ತೆ
Published 28 ಜೂನ್ 2024, 13:09 IST
Last Updated 28 ಜೂನ್ 2024, 13:09 IST
<div class="paragraphs"><p>ಗುಕೇಶ್ </p></div>

ಗುಕೇಶ್

   

(ಪಿಟಿಐ ಚಿತ್ರ)

ಬುಕಾರೆಸ್ಟ್‌ (ರುಮೇನಿಯಾ),: ವಿಶ್ವ ಚಾಂಪಿಯನ್ ಚಾಲೆಂಜರ್ ಡಿ.ಗುಕೇಶ್‌, ಸೂಪರ್‌ಬೆಟ್‌ ಚೆಸ್‌ ಕ್ಲಾಸಿಕ್ ಟೂರ್ನಿಯ ಎರಡನೇ ಸುತ್ತಿನಲ್ಲಿ ರಷ್ಯಾದ ಇಯಾನ್ ನಿಪೊಮ್‌ನಿಷಿ ಜೊತೆ ಹೋರಾಡಿ ‘ಡ್ರಾ’ ಮಾಡಿಕೊಂಡರು. ಭಾರತದ ಇನ್ನೊಬ್ಬ ಆಟಗಾರ ಆರ್‌.ಪ್ರಜ್ಞಾನಂದ, ಫ್ರಾನ್ಸ್‌ನ ಮ್ಯಾಕ್ಸಿಮ್ ವೇಷಿಯರ್ ಲಗ್ರಾವ್ ಅವರ ಜೊತೆ ಪಾಯಿಂಟ್‌ ಹಂಚಿಕೊಂಡರು.

ADVERTISEMENT

10 ಆಟಗಾರರು ಭಾಗವಹಿಸುತ್ತಿರುವ ಈ ಟೂರ್ನಿಯು ಗ್ರ್ಯಾಂಡ್‌ ಚೆಸ್‌ ಟೂರ್‌ನ ಭಾಗವಾಗಿದೆ. ಎರಡನೇ ದಿನವಾದ ಗುರುವಾರ, ಅಗ್ರ ಶ್ರೇಯಾಂಕದ ಫ್ಯಾಬಿಯಾನೊ ಕರುವಾನಾ (ಅಮೆರಿಕ) ಅವರು ಅಪರೂಪಕ್ಕೆ ಲೋಪ ಎಸಗಿ, ಸ್ವದೇಶದ ವೆಸ್ಲಿ ಸೊ ಎದುರು ‘ಡ್ರಾ’ ಮಾಡಿಕೊಳ್ಳಬೇಕಾಯಿತು.

ಫ್ರಾನ್ಸ್‌ನ ಇನ್ನೊಬ್ಬ ಆಟಗಾರ ಅಲಿರೇಝಾ ಫಿರೋಜಾ ಇನ್ನೊಂದು ಪಂದ್ಯದಲ್ಲಿ ಉಜ್ಬೇಕಿಸ್ತಾನದ ಆಟಗಾರ ನಾಡಿರ್ಬೆಕ್‌ ಅಬ್ದುಸತ್ತಾರೋವ್‌ ಅವರ ಮೇಲೆ ಜಯಗಳಿಸಿದರು.

ಸುಮಾರು ಮೂರು ಕೋಟಿ ಬಹುಮಾನ ಮೊತ್ತ ಹೊಂದಿರುವ ಈ ಟೂರ್ನಿಯ ಇನ್ನೊಂದು ಪಂದ್ಯ ಡ್ರಾ ಆಯಿತು. ಹಾಲೆಂಡ್‌ನ ಅನಿಶ್‌ ಗಿರಿ, ಟೂರ್ನಿಯಲ್ಲಿ ಅತಿ ಕಡಿಮೆ ರ್‍ಯಾಂಕಿಂಗ್ ಹೊಂದಿರುವ ಡೇಕ್ ಬೊಗ್ದಾನ್ ಡೇನಿಯಲ್ (ರುಮೇನಿಯಾ) ಜೊತೆ ಪಾಯಿಂಟ್‌ಗ ಹಂಚಿಕೊಂಡರು.

ರೌಂಡ್‌ರಾಬಿನ್ ಟೂರ್ನಿಯಲ್ಲಿ ಈಗ ಏಳು ಸುತ್ತುಗಳ ಆಟ ಉಳಿದಿದ್ದು, ಗುಕೇಶ್‌, ಕರುವಾನ ತಲಾ ಒಂದೂವರೆ ಪಾಯಿಂಟ್ಸ್‌ ಗಳಿಸಿ ಮುನ್ನಡೆಯಲ್ಲಿದ್ದಾರೆ. ಅಲಿರೇಜಾ, ಪ್ರಜ್ಞಾನಂದ, ಅನಿಶ್ ಗಿರಿ, ವೆಸ್ಲಿ ಸೊ, ವೇಷಿಯಲ್ ಲಗ್ರಾವ್‌ ಮತ್ತು ನಿಪೊಮ್‌ನಿಷಿ ತಲಾ ಒಂದು ಪಾಯಿಂಟ್ಸ್‌ ಸಂಗ್ರಹಿಸಿದ್ದಾರೆ. ಅಬ್ದುಸತ್ತಾರೋವ್ ಮತ್ತು ಡೇಕ್ ಬೊಗ್ದಾನ್ ಅರ್ಧ ಪಾಯಿಂಟ್ಸ್‌ ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.