ADVERTISEMENT

ಈಜು ಚಾಂಪಿಯನ್‌ಷಿಪ್‌: ಆತಿಥೇಯ ಬಿಎಸಿ ತಂಡಕ್ಕೆ ಸಮಗ್ರ ಪ್ರಶಸ್ತಿ

ರಾಜ್ಯ ಸಬ್ ಜೂನಿಯರ್ ಮತ್ತು ಜೂನಿಯರ್

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 16:29 IST
Last Updated 11 ಜುಲೈ 2024, 16:29 IST
ಎನ್‌ಆರ್‌ಜೆ ರಾಜ್ಯ ಸಬ್ ಜೂನಿಯರ್ ಮತ್ತು ಜೂನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಪಡೆದ ಆತಿಥೇಯ ಬಸವನಗುಡಿ ಈಜು ಕೇಂದ್ರದ ತಂಡ –ಪ್ರಜಾವಾಣಿ ಚಿತ್ರ/ ಪುಷ್ಕರ್‌ ವಿ.
ಎನ್‌ಆರ್‌ಜೆ ರಾಜ್ಯ ಸಬ್ ಜೂನಿಯರ್ ಮತ್ತು ಜೂನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಪಡೆದ ಆತಿಥೇಯ ಬಸವನಗುಡಿ ಈಜು ಕೇಂದ್ರದ ತಂಡ –ಪ್ರಜಾವಾಣಿ ಚಿತ್ರ/ ಪುಷ್ಕರ್‌ ವಿ.   

ಬೆಂಗಳೂರು: ಆತಿಥೇಯ ಬಸವನಗುಡಿ ಈಜುಕೇಂದ್ರವು ಗುರುವಾರ ಮುಕ್ತಾಯವಾದ ಎನ್‌ಆರ್‌ಜೆ ರಾಜ್ಯ ಸಬ್ ಜೂನಿಯರ್ ಮತ್ತು ಜೂನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು 1683 ಪಾಯಿಂಟ್ಸ್‌ಗಳೊಂದಿಗೆ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತು. ಡಾಲ್ಫಿನ್ ಅಕ್ವಾಟಿಕ್ಸ್ (1023 ಅಂಕ) ರನ್ನರ್ ಅಪ್ ಸ್ಥಾನ ಪಡೆಯಿತು.

ಗುಂಪು 1 ಮತ್ತು 2ರಲ್ಲಿ ಬಿಎಸಿ ಬಾಲಕರ ಮತ್ತು ಬಾಲಕಿಯರ ತಂಡಗಳು ಸಮಗ್ರ ಪ್ರಶಸ್ತಿ ಗೆದ್ದರೆ, ಗುಂಪು 3ರಲ್ಲಿ ಡಾಲ್ಫಿನ್ ಬಾಲಕರ ಮತ್ತು ಬಾಲಕಿಯರ ತಂಡಗಳು ಅಗ್ರಸ್ಥಾನ ಪಡೆದವು.

ಎಂಎಸ್‌ಸಿಯ ಚಿಂತನ್ ಎಸ್. ಶೆಟ್ಟಿ ಮತ್ತು ಬಿಎಸಿಯ ಎಸ್. ದರ್ಶನ್ ಅವರು ತಲಾ 30 ಅಂಕಗಳೊಂದಿಗೆ ಬಾಲಕರ (ಗುಂಪು 1ಎ) ವೈಯಕ್ತಿಕ ಚಾಂಪಿಯನ್‌ಷಿಪ್ ಹಂಚಿಕೊಂಡರು. ಡಾಲ್ಫಿನ್ ಅಕ್ವಾಟಿಕ್ಸ್‌ನ ಮಾನವಿ ವರ್ಮಾ 36 ಅಂಕಗಳೊಂದಿಗೆ ಬಾಲಕಿಯರ ವೈಯಕ್ತಿಕ ಪ್ರಶಸ್ತಿ ಜಯಿಸಿದರು.

ADVERTISEMENT

ಫಲಿತಾಂಶ: ಬಾಲಕರು: 12-14 ವರ್ಷ: 4x200 ಮೀ. ಫ್ರೀಸ್ಟೈಲ್ ರಿಲೆ: ಬಿಎಸಿ ತಂಡ ‘ಎ’ (8ನಿ. 51.72ಸೆ). 2ಎ: 400 ಮೀ. ಫ್ರೀಸ್ಟೈಲ್: ರಿಷಿತ್ ರಂಗನ್ (ಬಿಎಸಿ, 4ನಿ. 23.19ಸೆ). 2ಬಿ: 400 ಮೀ. ಫ್ರೀಸ್ಟೈಲ್: ಶರಣ್ ಎಸ್. (ಮತ್ಸ್ಯ, 4ನಿ.24.16ಸೆ). 2ಸಿ: 400 ಮೀ. ಫ್ರೀಸ್ಟೈಲ್: ಜಸ್ ಸಿಂಗ್ (ಎಸಿಇ, 4ನಿ.48.24ಸೆ). 2ಎ: 200 ಮೀ. ಬ್ರೆಸ್ಟ್ ಸ್ಟ್ರೋಕ್: ಯಶ್ ಎಚ್. ಪಾಲ್ (ಬಿಎಸಿ, 2 ನಿ. 38.89ಸೆ). 2ಬಿ: 200 ಮೀ. ಬ್ರೆಸ್ಟ್ ಸ್ಟ್ರೋಕ್: ಆರವ್ ಜೆ. (ಬಿಎಸಿ, 2ನಿ. 47.81ಸೆ). 2ಸಿ: 200ಮೀ ಬ್ರೆಸ್ಟ್ ಸ್ಟ್ರೋಕ್: ಚೇತನ್ ನಾಗರಾಜ ಗಣಪ (ಎನ್‌ಎಸಿ, 2 ನಿ. 49.86ಸೆ). 2ಎ: 100 ಮೀ. ಬಟರ್‌ಫ್ಲೈ: ಸಮರ್ಥ್ ಗೌಡ ಬಿ.ಎಸ್. (ಬಿಎಸಿ, 59.63ಸೆ). 2ಬಿ:100 ಮೀ. ಬಟರ್‌ಫೈ: ಸುಬ್ರಹ್ಮಣ್ಯ ಜೀವಾಂಶ್ ಎಂ. (ಡಾಲ್ಫಿನ್‌, 1 ನಿ.04.74ಸೆ). 2ಸಿ: 100 ಮೀ. ಬಟರ್‌ಫೈ: ವೇದಾಂತ್ ಮಿಸಾಲೆ (ಎಸ್‌ಸಿಬಿ, 1ನಿ.08.20ಸೆ). 2ಎ: 200 ಮೀ. ಬ್ಯಾಕ್‌ಸ್ಟ್ರೋಕ್‌: ಸಮರ್ಥ್‌ ಗೌಡ ಬಿ.ಎಸ್‌. (ಬಿಎಸಿ, 2ನಿ. 13.59ಸೆ). 2ಬಿ: 200 ಮೀ.ಬ್ಯಾಕ್‌ಸ್ಟ್ರೋಕ್‌: ಅದ್ವೈತ ವಿ.ಎಂ. (ಬಿಎಸಿ, 2ನಿ.22.37ಸೆ). 2ಸಿ: 200 ಮೀ. ಬ್ಯಾಕ್‌ಸ್ಟ್ರೋಕ್‌: ಕ್ರಿಶ್ ಎಸ್‌. (ಬಿಎಸಿ, 2ನಿ.37.32ಸೆ). 2ಎ: 50 ಮೀ. ಫ್ರೀಸ್ಟೈಲ್‌: ವೇದಾಂತ್‌ ಮೆಹ್ರಾ (ಡಾಲ್ಫಿನ್‌, 26.63ಸೆ). 2ಬಿ: 50 ಮೀ. ಫ್ರೀಸ್ಟೈಲ್‌: ಗರಪತಿ ಭಾರದ್ವಾಜ್‌ (ಗೋಲ್ಡನ್‌, 27.83ಸೆ). 2ಸಿ: 50 ಮೀ. ಫ್ರೀಸ್ಟೈಲ್‌: ನಿಖಿಲ್‌ ತೇಜ್‌ ರೆಡ್ಡಿ (ಬಿಎಸಿ, 29.30ಸೆ).
 
ಬಾಲಕಿಯರು: 12-14 ವರ್ಷ: 4x200 ಮೀ. ಫ್ರೀಸ್ಟೈಲ್ ರಿಲೆ: ಬಿಎಸಿ ತಂಡ ‘ಎ’ (9ನಿ.36.71ಸೆ). 2ಎ: 400 ಮೀ. ಫ್ರೀಸ್ಟೈಲ್‌: ನೈಶಾ (ಬಿಎಸಿ, 4 ನಿ.43.52ಸೆ). 2ಬಿ: 400 ಮೀ. ಫ್ರೀಸ್ಟೈಲ್‌: ಮೀರಾ ನಂಬಿಯಾರ್ (ಡಾಲ್ಫಿನ್‌ (5ನಿ. 05.16ಸೆ). 2ಸಿ: 400 ಮೀ. ಫ್ರೀಸ್ಟೈಲ್‌: ಸುಮನ್ವಿ ವಿ. (ಡಿಕೆವಿ, 5ನಿ.01.29ಸೆ). 2ಎ: 200 ಮೀ. ಬ್ರೆಸ್ಟ್ ಸ್ಟ್ರೋಕ್: ಟಿಸ್ಯಾ ಸೋನಾರ್ (ಮತ್ಸ್ಯ, 2ನಿ.56.22ಸೆ). 2ಬಿ: 200 ಮೀ. ಬ್ರೆಸ್ಟ್ ಸ್ಟ್ರೋಕ್: ಸ್ಪರ್ಶಾ ಎಸ್. ಹರೀಶ (ಮತ್ಸ್ಯ, 3ನಿ.08.12ಸೆ). 2ಸಿ: 200 ಮೀ. ಬ್ರೆಸ್ಟ್ ಸ್ಟ್ರೋಕ್: ಮಾನ್ಯಾ ಆರ್‌. ವಾಧ್ವಾ (ಪಿಎಂಎಸ್‌ಸಿ, 3ನಿ.05.06ಸೆ). 2ಎ: 100 ಮೀ. ಬಟರ್‌ಫೈ: ಟಿಸ್ಯಾ ಸೋನಾರ್ (ಮತ್ಸ್ಯ;1ನಿ.11.03ಸೆ). 
2ಬಿ: 100 ಮೀ. ಬಟರ್‌ಫೈ: ತ್ರಿಷಾ ಸಿಂಧು (ಗ್ಲೋಬಲ್‌, 1ನಿ.08.98ಸೆ). 2ಸಿ: 100 ಮೀ. ಬಟರ್‌ಫೈ: ಮಾನ್ಯಾ ಆರ್‌. ವಾಧ್ವಾ (ಪಿಎಂಎಸ್‌ಸಿ, 1ನಿ.13.01ಸೆ). 2ಎ: 200 ಮೀ.ಬ್ಯಾಕ್‌ಸ್ಟ್ರೋಕ್‌: ನೈಶಾ (ಬಿಎಸಿ, 2 ನಿ.26.06ಸೆ). 2ಬಿ: 200 ಮೀ.ಬ್ಯಾಕ್‌ಸ್ಟ್ರೋಕ್‌: ಮೀರಾ ನಂಬಿಯಾರ್ (ಡಾಲ್ಫಿನ್‌ (2ನಿ.38.47ಸೆ). 2ಸಿ: 200 ಮೀ.ಬ್ಯಾಕ್‌ಸ್ಟ್ರೋಕ್‌: ಸುಮೇಧಾ ವಿ. (ಡಿಕೆವಿ, 2ನಿ.40.14ಸೆ). 2ಎ: 50 ಮೀ.‍ಫ್ರೀಸ್ಟೈಲ್‌: ಫಣೀಂದ್ರನಾಥ ಚರಿತಾ (ಎಲೀಟ್‌, 28.03ಸೆ). 2ಬಿ: 50 ಮೀ.‍ಫ್ರೀಸ್ಟೈಲ್‌: ತ್ರಿಷಾ ಸಿಂಧು (ಗ್ಲೋಬಲ್‌, 29.10ಸೆ). 2ಸಿ: 50 ಮೀ.‍ಫ್ರೀಸ್ಟೈಲ್‌: ಔನಾ ಪಿ. ಆಳ್ವ (ಬಿಎಸ್‌ಎ, 30.57ಸೆ).

ವೈಯಕ್ತಿಕ ಚಾಂಪಿಯನ್‌ಷಿಪ್: ಬಾಲಕರು: ಗುಂಪು 1ಎ: ಚಿಂತನ್ ಎಸ್. ಶೆಟ್ಟಿ (ಎಂಎಸ್‌ಸಿ, 30 ಅಂಕ), ಎಸ್. ದರ್ಶನ್ (ಬಿಎಸಿ, 30). ಗುಂಪು 1ಬಿ: ಮೊನೀಶ್ ಪಿ.ವಿ. (ಬಿಎಸಿ, 35). 2ಎ: ಸಮರ್ಥ್ ಗೌಡ (ಬಿಎಸಿ, 50). 2ಬಿ: ಶರಣ್ ಎಸ್. (ಮತ್ಸ್ಯ, 35), 2ಸಿ: ಜಸ್ ಸಿಂಗ್ (ಎಸಿಇ, 35).

ಬಾಲಕಿಯರು: ಗುಂಪು 1ಎ: ಮಾನವಿ ವರ್ಮಾ (ಡಾಲ್ಫಿನ್, 36). 1ಬಿ: ಶ್ರೀ ಚರಣಿ ತುಮು (ಗ್ಲೋಬಲ್‌, 40). 2ಎ: ನೈಶಾ (ಎನ್‌ಎಸಿ, 40). 2ಬಿ: ತ್ರಿಶಾ ಸಿಂಧು (ಗ್ಲೋಬಲ್‌, 35). ಮಾನ್ಯಾ ಆರ್. ವಾಧ್ವಾ (ಪಿಎಂಎಸ್‌ಸಿ, 33).

ತಂಡ ಚಾಂಪಿಯನ್‌ಷಿಪ್: ಬಾಲಕರು: ಗುಂಪು 1: ಬಿಎಸಿ (411). ಗುಂಪು 2: ಬಿಎಸಿ (232). ಗುಂಪು 3: ಡಾಲ್ಫಿನ್ (106). ಬಾಲಕಿಯರು: ಗುಂಪು 1: ಬಿಎಸಿ (389). ಗುಂಪು 2: ಬಿಎಸಿ (465). ಗುಂಪು 3: ಡಾಲ್ಫಿನ್ (125).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.