ADVERTISEMENT

ಈಜು ಚಾಂಪಿಯನ್‌ಷಿಪ್‌: ಪವನ್‌, ರುತ್ವಾ ವೈಯಕ್ತಿಕ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 3:21 IST
Last Updated 8 ಜುಲೈ 2024, 3:21 IST

ಪ್ರಶಸ್ತಿ ಪಡೆದ ಜಿಐಆರ್‌ಎಸ್‌ನ ಅಮಿತ್‌ ಪವನ್‌ ಎಚ್‌.

ಪ್ರಶಸ್ತಿ ಪಡೆದ ಜಿಐಆರ್‌ಎಸ್‌ನ ಅಮಿತ್‌ ಪವನ್‌ ಎಚ್‌.

ಬೆಂಗಳೂರು: ಜಿಐಆರ್‌ಎಸ್‌ನ ಅಮಿತ್‌ ಪವನ್‌ ಎಚ್‌. ಮತ್ತು ಡಾಲ್ಫಿನ್‌ನ ರುತ್ವಾ ಎಸ್‌. ಅವರು ಬಸವನಗುಡಿ ಅಕ್ವಾಟಿಕ್ ಸೆಂಟರ್‌ನಲ್ಲಿ ಭಾನುವಾರ ಮುಕ್ತಾಯವಾದ ಎನ್‌ಆರ್‌ಜೆ ರಾಜ್ಯ ಸಬ್‌ ಜೂನಿಯರ್‌ ಮತ್ತು ಜೂನಿಯರ್‌ ಈಜು ಚಾಂಪಿಯನ್‌ ಷಿಪ್‌ನಲ್ಲಿ ಕ್ರಮವಾಗಿ ಬಾಲಕರ 3ಎ ಮತ್ತು 3ಬಿ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್‌ಗಳಾಗಿ ಹೊರಹೊಮ್ಮಿದರು.

ADVERTISEMENT

ಡಾಲ್ಫಿನ್‌ನ ಶ್ವಿತಿ ದಿವಾಕರ್ ಸುವರ್ಣ ಮತ್ತು ಬಿಎಸಿಯ ಸ್ಮೃತಿ ಮಹೇಶ್ ಅವರು ಬಾಲಕಿಯರ ಗುಂಪಿನ 3ಎ ಮತ್ತು 3ಬಿ ಗುಂಪಿನಲ್ಲಿ ಕ್ರಮವಾಗಿ ವೈಯಕ್ತಿಕ ಪ್ರಶಸ್ತಿ ಗೆದ್ದರು.

ರುತುಜಾ ದಾಖಲೆ: ರುತುಜಾ ಎಸ್‌. ಅವರು ಬಾಲಕಿಯರ 1ಎ ಗುಂಪಿನ 50 ಮೀ ಫ್ರೀಸ್ಟೈಲ್‌ ವಿಭಾಗದಲ್ಲಿ 27.23 ಸೆಕೆಂಡ್‌ನಲ್ಲಿ ಗುರಿ ತಲುಪಿ ದಾಖಲೆ ಬರೆದರು.

ಫಲಿತಾಂಶಗಳು:  15ರಿಂದ 17 ವರ್ಷದೊಳಗಿನ ಬಾಲಕರು:  4x200 ಮೀ ಫ್ರೀಸ್ಟೈಲ್‌: ಡಾಲ್ಫಿನ್‌ ಅಕ್ವಾಟಿಕ್ಸ್‌ (8:17.31). 1ಎ ಗುಂಪು: 200 ಮೀ ಮೆಡ್ಲೆ: ನವನೀತ್‌ ಆರ್‌.ಗೌಡ (ಡಾಲ್ಪಿನ್‌; 2ನಿ 17.05ಸೆ), 200 ಮೀ ಬ್ರೆಸ್ಟ್‌ಸ್ಟ್ರೋಕ್‌: ಕ್ರಿಶ್‌ ಸುಕುಮಾರ್‌ (ಡಾಲ್ಫಿನ್‌; 2 ನಿ 30.97 ಸೆ), 100 ಮೀ ಬಟರ್‌ಫ್ಲೈ: ಚಿಂತನ್‌ ಎಸ್‌.ಶೆಟ್ಟಿ (ಮಂಗಲಾ; 57.02 ಸೆ), 200 ಮೀ. ಬ್ಯಾಕ್‌ಸ್ಟ್ರೋಕ್‌: ಅಮಾನ್‌ ಅಭಿಜಿತ್‌ ಸುಣಗಾರ್‌ (ಡಾಲ್ಫಿನ್‌; 2ನಿ 13.06 ಸೆ). 1ಬಿ ಗುಂಪು: 200 ಮೀ ಮೆಡ್ಲೆ: ಪೃಥ್ವಿರಾಜ್‌ ಮೆನನ್‌ (ಬಿಸಿಎ; 2ನಿ 18.83‌ ಸೆ), 100 ಮೀ ಬಟರ್‌ಫ್ಲೈ: ಹರಿಕಾರ್ತಿಕ್‌ ವೇಲು (ಗೋಲ್ಡನ್‌; 59.45), 200 ಮೀ ಬ್ರೆಸ್ಟ್‌ಸ್ಟ್ರೋಕ್‌: ಡ್ಯಾನಿಯಲ್‌ ಪೌಲ್‌ (ಬಿಎಸಿ; 2ನಿ 30.57 ಸೆ), 200 ಮೀ ಬ್ಯಾಕ್‌ಸ್ಟ್ರೋಕ್‌: ವೇದಾಂತ್‌ ವಿ.ಎಂ (ಬಿಎಸಿ; 2ನಿ 09.31ಸೆ). 3ಎ ಗುಂಪು: 200 ಮೀ ಮೆಡ್ಲೆ: ಲೋಹಿತಾಶ್ವ ನಾಗೇಶ್‌.ಎಸ್‌ (ಗ್ಲೋಬಲ್‌; 2ನಿ 47.47ಸೆ), 100 ಮೀ ಬಟರ್‌ಫ್ಲೈ: ಅಮಿತ್‌ ಪವನ್‌ ಎಚ್‌ (ಜಿಐಎಸ್‌ಆರ್‌; 1ನಿ 09.04 ಸೆ), 50 ಮೀ ಫ್ರೀಸ್ಟೈಲ್‌: ರಕ್ಷಿತ್‌ ಎ.ಕೋರೆ (ಎನ್‌ಎಸಿ: 31.28 ಸೆ). 3ಬಿ ಗುಂಪು: 200 ಮೀ ಮೆಡ್ಲೆ: ಸ್ನಿತಿಕ್‌ ಎನ್‌. (ಡಾಲ್ಫಿನ್‌; ನಿ 03.89 ಸೆ), 100 ಮೀ ಬಟರ್‌ಫ್ಲೈ: ರುತ್ವಾ ಎಸ್‌. (ಡಾಲ್ಫಿನ್‌; 1ನಿ 16.74ಸೆ), 50 ಮೀಟರ್‌ ಫ್ರೀಸ್ಟೈಲ್‌: ರುತ್ವಾ ಎಸ್‌. (ಡಾಲ್ಫಿನ್‌; 32.83 ಸೆ)

ಬಾಲಕರ ವೈಯಕ್ತಿಕ ಚಾಂಪಿಯನ್‌: 3ಎ ಅಮಿತ್‌ ಪವನ್‌ ಎಚ್‌ (ಜಿಐಆರ್‌ಎಸ್‌, 33 ಅಂಕ); ರುತ್ವ ಎಸ್‌. (ಡಾಲ್ಫಿನ್‌, 35 ಅಂಕ)

15ರಿಂದ 17 ವರ್ಷದೊಳಗಿನ ಬಾಲಕಿಯರು:4x200 ಮೀ ಫ್ರೀಸ್ಟೈಲ್‌: ಬಿಎಸಿ ‘ಟೀಮ್‌ ಎ’ (9ನಿ 11.97 ಸೆ). 1ಎ ಗುಂಪು: 200 ಮೀ ಬ್ಯಾಕ್‌ಸ್ಟ್ರೋಕ್‌: ಸುನಿಧಿ ಹಾಲ್ಕೆರೆ (ಎಸ್‌ಬಿಸಿ; 2ನಿ 29.43ಸೆ), 50 ಮೀ ಫ್ರೀಸ್ಟೈಲ್‌: ರುಜುಜಾ ಎಸ್‌. (ಡಾಲ್ಪಿನ್‌; 27.23ಸೆ), 200 ಮೀ ಮಿಡ್ಲೆ: ಮಾನವಿ ವರ್ಮಾ (ಡಾಲ್ಫಿನ್‌; 2ನಿ 27.93ಸೆ), 200 ಮೀ ಬ್ರೆಸ್ಟ್‌ಸ್ಟ್ರೋಕ್‌: ಲಿನೆಯ್‌ಶಾ ಎ.ಕೆ. (ಗ್ಲೋಬಲ್‌; 2ನಿ 51.47 ಸೆ), 100 ಮೀ ಬಟರ್‌ಫ್ಲೈ: ರುತ್ವಿಕಾ ಬಿ.ಎಂ. (ಮತ್ಸ್ಯ; 1ನಿ 06.38ಸೆ). 1ಬಿ ಗುಂಪು: 200 ಮೀ ಬ್ಯಾಕ್‌ಸ್ಟೋಕ್‌: ಮೀನಾಕ್ಷಿ ಮೆನನ್‌ (ಬಿಎಸಿ; 2ನಿ 29.28ಸೆ), 200 ಮೀ ಮೆಡ್ಲೆ: ತಾನ್ಯಾ ಎಸ್‌. (ಜಿಐಆರ್‌ಎಸ್‌; 2ನಿ 28.26ಸೆ), 50 ಮೀ ಫ್ರೀಸ್ಟೈಲ್‌: ಮೊನ್ಯಾ ಕೌಸುಮಿ ಕೆ. (ಪುತ್ತೂರು; 29.67ಸೆ), 200 ಮೀ ಬ್ರೆಸ್ಟ್‌ಸ್ಟ್ರೋಕ್‌: ತಾನ್ಯಾ ಎಸ್‌. (ಜಿಐಆರ್‌ಎಸ್‌; 2ನಿ 43.62ಸೆ), 100 ಮೀ ಬಟರ್‌ಫ್ಲೈ: ಸುಹಾಸಿನಿ ಘೋಷ್‌ (ಡಾಲ್ಫಿನ್‌; 1ನಿ 05.94ಸೆ). 3ಎ ಗುಂಪು: 50 ಮೀ ಫ್ರೀಸ್ಟೈಲ್‌: ಶ್ವಿತಿ ದಿವಾಕರ್‌ ಸುವರ್ಣ (ಡಾಲ್ಫಿನ್‌; 31.45ಸೆ), 200 ಮೆಡ್ಲೆ: ಶ್ರೇಯಾ ಸುರೇಶ್‌ ಪೂಜಾರ್‌ (ಬಿಎಸ್‌ಎ; 2ನಿ 54.10ಸೆ). 3ಬಿ ಗುಂಪು: 50 ಮೀ ಫ್ರೀಸ್ಟೈಲ್‌: ಸ್ಮೃತಿ ಮಹೇಶ್‌ (ಬಿಎಸಿ; 34.13ಸೆ), 200 ಮೀ ಮೆಡ್ಲೆ: ಝಾರನಾ ಸಿಸೋಡಿಯಾ (ಏಕಲವ್ಯ; 3ನಿ 06.12ಸೆ),

ಬಾಲಕಿಯರ ವೈಯಕ್ತಿಕ ಚಾಂಪಿಯನ್‌: 3ಎ ಗುಂಪು: ಶ್ವಿತಿ ದಿವಾಕರ್‌ ಸುವರ್ಣ (ಡಾಲ್ಫಿನ್‌, 33 ಅಂಕ); 3ಬಿ ಗುಂಪು: ಸ್ಮೃತಿ ಮಹೇಶ್‌ (ಬಿಎಸಿ, 32 ಅಂಕ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.