ಭೋಪಾಲ್: ಕರ್ನಾಟಕದ ಶ್ರೀಹರಿ ನಟರಾಜ್ ಮತ್ತೊಮ್ಮೆ ಮಿಂಚಿದರು. ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನ ನಾಲ್ಕನೇ ದಿನವಾದ ಮಂಗಳವಾರವೂ ಎರಡು ಚಿನ್ನ ಗೆದ್ದರು. ಒಂದು ದಾಖಲೆಯನ್ನೂ ಬರೆದರು. ಮಹಿಳೆಯರ 4x200 ಮೀಟರ್ಸ್ ಫ್ರೀಸ್ಟೈಲ್ ತಂಡವೂ ಚಿನ್ನ ಗಳಿಸಿತು. ಮೂರನೇ ದಿನವಾದ ಸೋಮವಾರ ಪುರುಷರ 4x100 ಮೀಟರ್ಸ್ ಮೆಡ್ಲೆಯಲ್ಲಿ ಕರ್ನಾಟಕ ತಂಡ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದಿತ್ತು.
50 ಮೀಟರ್ಸ್ ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಯಲ್ಲಿ ಶ್ರೀಹರಿ ನಟರಾಜ್ 25:58 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಹೊಸ ದಾಖಲೆ ಬರೆದರು. 100 ಮೀಟರ್ಸ್ ಫ್ರೀಸ್ಟೈಲ್‌ನಲ್ಲಿ 50:59 ಸೆಕೆಂಡುಗಳ ಸಾಧನೆಯೊಂದಿಗೆ ಚಿನ್ನ ಗಳಿಸಿದರು. ಮಹಿಳೆಯರ 4x200 ಮೀಟರ್ಸ್ ಫ್ರೀಸ್ಟೈಲ್‌ನಲ್ಲಿ ದಾಮಿನಿ ಡಿ.ಗೌಡ, ಸುವನಾ ಭಾಸ್ಕರ್, ಸ್ಮೃತಿ ಮಹಾಲಿಂಗಂ ಮತ್ತು ಖುಷಿ ದಿನೇಶ್ ಅವರನ್ನು ಒಳಗೊಂಡ ತಂಡ 9 ನಿಮಿಷ 4:86 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಚಿನ್ನ ಗೆದ್ದುಕೊಂಡಿತು.
4ನೇ ದಿನದ ಫಲಿತಾಂಶಗಳು: 50 ಮೀ ಬ್ಯಾಕ್‌ಸ್ಟ್ರೋಕ್: ಶ್ರೀಹರಿ ನಟರಾಜ್ (ಕರ್ನಾಟಕ)–1. ಕಾಲ: 25.58ಸೆ (ಕೂಟ ದಾಖಲೆ), ರಕ್ಷಿತ್ ಯು.ಶೆಟ್ಟಿ (ಕರ್ನಾಟಕ)–2, ಮಧು ಪಿ.ಎಸ್ (ಎಸ್‌ಎಸ್‌ಪಿಬಿ)–3; 100 ಮೀ ಫ್ರೀಸ್ಟೈಲ್: ಶ್ರೀಹರಿ ನಟರಾಜ್–1. ಕಾಲ: 50.59 ಸೆ, ಆನಂದ್ –2, ವಿನಯ್ ಶರಣ್–3 (ಇಬ್ಬರೂ ಎಸ್‌ಎಸ್‌ಸಿಬಿ); ಪುರುಷರ 100 ಮೀಟರ್ಸ್ ಬಟರ್‌ಫ್ಲೈ: ಸಾಜನ್ ಪ್ರಕಾಶ್ (ಪೊಲೀಸ್)–1. ಕಾಲ: 54.25ಸೆ, ಮಿಹಿರ್ ಆಂಬ್ರೆ (ಮಹಾರಾಷ್ಟ್ರ)–2, ಸುಪ್ರಿಯಾ ಮೊಂಡಲ್ (ಆರ್‌ಎಸ್‌ಪಿಬಿ)–3; ಪುರುಷರ 800 ಮೀಟರ್ಸ್ ಫ್ರೀಸ್ಟೈಲ್: ಕುಶಾಗ್ರ ರಾವತ್ (ದೆಹಲಿ)–1. ಕಾಲ: 8 ನಿಮಿಷ 9.47 ಸೆ (ಕೂಟ ದಾಖಲೆ), ಸೌಮ್ಯಜಿತ್ ಸಹಾ–2, ಸುಶ್ರುತ್ ಕಾಪಸೆ–3 (ಇಬ್ಬರೂ ಆರ್‌ಎಸ್‌ಪಿಬಿ).
ಮಹಿಳೆಯರ ವಿಭಾಗ: 50 ಮೀ ಬ್ಯಾಕ್‌ಸ್ಟ್ರೋಕ್: ಮಾನಾ ಪಟೇಲ್ (ಗುಜರಾತ್)–1. ಕಾಲ: 30.39 ಸೆ, ಜ್ಯೋತ್ಸ್ನಾ (ಮಹಾರಾಷ್ಟ್ರ)–2, ರಿಧಿಮಾ ಕುಮಾರ್ (ಕರ್ನಾಟಕ)–3; 100 ಮೀ ಬಟರ್‌ಫ್ಲೈ: ದಿವ್ಯಾ ಸಾತಿಜಾ (ಹರಿಯಾಣ)–1. ಕಾಲ: 1ನಿ 4.38ಸೆ, ಅಪೇಕ್ಷಾ ಫರ್ನಾಂಡಿಸ್ (ಮಹಾರಾಷ್ಟ್ರ)–2, ನೀನಾ ವೆಂಕಟೇಶ್ (ಕರ್ನಾಟಕ)–3; 200 ಮೀ ಫ್ರೀಸ್ಟೈಲ್: ಶಿವಾನಿ ಕಟಾರಿಯಾ (ಹರಿಯಾಣ)–1. ಕಾಲ: 2 ನಿ 5.80 ಸೆ (ಕೂಟ ದಾಖಲೆ), ಕೆನಿಶಾ ಗುಪ್ತಾ (ಮಹಾರಾಷ್ಟ್ರ)–2, ಖುಷಿ ದಿನೇಶ್ (ಕರ್ನಾಟಕ)–3; 4x200 ಫ್ರೀಸ್ಟೈಲ್: ಕರ್ನಾಟಕ (ದಾಮಿನಿ ಗೌಡ, ಸುವನಾ ಭಾಸ್ಕರ್, ಸ್ಮೃತಿ, ಖುಷಿ)–1. ಕಾಲ: 9 ನಿ 4.86 ಸೆ, ಮಹಾರಾಷ್ಟ್ರ–2, ತಮಿಳುನಾಡು–3. 4x50 ಮೀ ಮಿಶ್ರ ಫ್ರೀಸ್ಟೈಲ್: ಮಹಾರಾಷ್ಟ್ರ–1. ಕಾಲ:1ನಿ 39.69ಸೆ, ಆರ್‌ಎಸ್‌ಪಿಬಿ–2, ಕರ್ನಾಟಕ (ಲಿಖಿತ್, ದೀಕ್ಷಾ ರಮೇಶ್,ಸ್ಮೃತಿ, ಶ್ರೀಹರಿ)–3.
ಮೂರನೇ ದಿನದ ಫಲಿತಾಂಶಗಳು: ಪುರುಷರು: 400 ಮೀ ಮೆಡ್ಲೆ: ಶಿವ ಎಸ್. (ಕರ್ನಾಟಕ)–1. ಕಾಲ: 4 ನಿ 33.01 ಸೆಕೆಂಡು, ಎಮಿಲ್ ರಾಬಿನ್ ಸಿಂಗ್ (ಆರ್‌ಎಸ್‌ಪಿಬಿ)–2, ಜಯಂತ್ ಎಂ. (ಸರ್ವಿಸಸ್)–3; 200 ಮೀ ಬ್ರೆಸ್ಟ್‌ಸ್ಟ್ರೋಕ್: ಲಿಖಿತ್ ಎಸ್.ಪಿ. (ಕರ್ನಾಟಕ)–1. ಕಾಲ:2 ನಿ 18.61 ಸೆ, ಧನುಷ್ ಎಸ್. (ತಮಿಳುನಾಡು)–2, ಎಂ.ಲೋಹಿತ್ (ಆರ್‌ಎಸ್‌ಪಿಬಿ)–3; 50 ಮೀ. ಬಟರ್‌ಫ್ಲೈ: ವೀರ್ ಧವಳ್ ಖಾಡೆ (ಮಹಾರಾಷ್ಟ್ರ)–1. ಕಾಲ 24.19 ಸೆ (ಕೂಟ ದಾಖಲೆ), ಸುಪ್ರಿಯಾ ಮೊಂಡಲ್ (ಆರ್‌ಎಸ್‌ಪಿಬಿ)–2; ಮಿಹಿರ್ ಆಂಬ್ರೆ (ಮಹಾರಾಷ್ಟ್ರ)–3; 400x100 ಮೀ ಮೆಡ್ಲೆ ರಿಲೆ: ಕರ್ನಾಟಕ–1, ಕಾಲ:3 ನಿ 48.83 ಸೆ (ಕೂಟ ದಾಖಲೆ), ಎಸ್‌ಎಸ್‌ಸಿಬಿ–2, ಆರ್‌ಎಸ್‌ಪಿಬಿ–3.
ಮಹಿಳೆಯರು: 1500 ಮೀ ಫ್ರೀಸ್ಟೈಲ್: ರಿಚಾ ಮಿಶ್ರಾ (ಪೊಲೀಸ್)–1. ಕಾಲ: 17 ನಿ 55.55 ಸೆ, ಭವಿಕಾ ದುಗಾರ್ (ತಮಿಳುನಾಡು)–2; ಖುಷಿ ದಿನೇಶ್ (ಕರ್ನಾಟಕ)–3; 200 ಮೀ ಬ್ರೆಸ್ಟ್‌ಸ್ಟ್ರೋಕ್: ಅಪೇಕ್ಷಾ ಫರ್ನಾಂಡಿಸ್ (ಮಹಾರಾಷ್ಟ್ರ)–1. ಕಾಲ: 2 ನಿ 41.89 ಸೆ, ಸಲೋನಿ ದಲಾಲ್ (ಕರ್ನಾಟಕ)–2; ಜ್ಯೋತಿ ಪಾಟೀಲ (ಮಹಾರಾಷ್ಟ್ರ)–3; 50 ಮೀ ಬಟರ್‌ಫ್ಲೈ: ದಿವ್ಯಾ ಸಾತಿಜಾ (ಹರಿಯಾಣ)–1. ಕಾಲ: 28.33 ಸೆ (ರಾಷ್ಟ್ರೀಯ ದಾಖಲೆ), ನೀನಾ ವೆಂಕಟೇಶ್ (ಕರ್ನಾಟಕ)–2, ಜ್ಯೋತ್ಸ್ನಾ (ಮಹಾರಾಷ್ಟ್ರ)–3; 400x100 ಮೀ ಮೆಡ್ಲೆ: ಮಹಾರಾಷ್ಟ್ರ-1 ಕಾಲ: 4 ನಿ 33.10 ಸೆ, ಕರ್ನಾಟಕ–2, ತಮಿಳುನಾಡು–3.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.