ಬೆಂಗಳೂರು: ತಮೋಘ್ನ ಎಂ. ಮತ್ತು ತನಿಷ್ಕಾ ಕಪಿಲ್ ಕಾಲಭೈರವ ಅವರು ಮಲ್ಲೇಶ್ವರಂ ಅಸೋಸಿಯೇಷನ್ನಲ್ಲಿ ನಡೆಯುತ್ತಿರುವ 25ನೇ ವರ್ಷದ ಎಂ.ಎಸ್.ರಾಮಯ್ಯ ಸ್ಮಾರಕ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ 13 ವರ್ಷದೊಳಗಿನ ಬಾಲಕರ ಮತ್ತು ಬಾಲಕಿಯರ ವಿಭಾಗದ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು.
ಬುಧವಾರ ನಡೆದ ಫೈನಲ್ನಲ್ಲಿ ತಮೋಘ್ನ 15–13, 11–7, 6–11, 11–8 ರಿಂದ ರೆಯಾನ್ಶ್ ಜಲನ್ ಅವರನ್ನು ಸೋಲಿಸಿದ. ಸೆಮಿಫೈನಲ್ನಲ್ಲಿ ರೆಯಾನ್ಶ್ 11–6, 11–3, 11–7 ರಿಂದ ವೇದಾಂತ್ ವಶಿಷ್ಟ ವಿರುದ್ಧ, ತಮೋಘ್ನ 11–5, 6–11, 11–3, 11–8 ರಿಂದ ಅಭಿನವ್ ಪ್ರಸನ್ನ ವಿರುದ್ಧ ಜಯಗಳಿಸಿದರು.
ಬಾಲಕಿಯರ ವಿಭಾಗದ ಫೈನಲ್ನಲ್ಲಿ ತನಿಷ್ಕಾ 11–1, 11–9, 11–6 ರಿಂದ ಅನೆಟ್ಟೆ ಮರಿಯಾನಾ ವಿರುದ್ಧ ಜಯಗಳಿಸಿದಳು.
ಸೆಮಿಫೈನಲ್ ಪಂದ್ಯದಲ್ಲಿ ತನಿಷ್ಕಾ 11–4, 11–1, 11–3 ರಿಂದ ಐರೀನ್ ಅನ್ನಾ ಸುಭಾಷ್ ವಿರುದ್ಧ ಜಯ ಸಾಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.