ಬೆಂಗಳೂರು: ಕರ್ನಾಟಕದ ಸಾಕ್ಷ್ಯಾ ಸಂತೋಷ್ ಅವರು ಹರಿಯಾಣದ ಪಂಚಕುಲದಲ್ಲಿ ನಡೆದ ರಾಷ್ಟ್ರೀಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ 11 ವರ್ಷದೊಳಗಿನವರ ಬಾಲಕಿಯರ ಸಿಂಗಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಫೈನಲ್ ಪಂದ್ಯದಲ್ಲಿ ಸಾಕ್ಷ್ಯಾ ಅವರು ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡು 3–1 (5-11, 11-6, 11-5, 11-7)ರಿಂದ ಹರಿಯಾಣದ ಅವ್ಯಣ್ಣ ಫಲಸ್ವಾಲ್ ಅವರನ್ನು ಮಣಿಸಿದರು.
ಸೆಮಿಫೈನಲ್ನಲ್ಲಿ ಕರ್ನಾಟಕದ ಆಟಗಾರ್ತಿ 3–2 (11-7, 7-11, 11-9, 3-11, 11-6) ರಿಂದ ಇಶಾನಿ ಗೊಗೊಯ್ (ಅಸ್ಸಾಂ) ಅವರನ್ನು ಸೋಲಿಸಿದರು. ಕ್ವಾರ್ಟರ್ ಫೈನಲ್ನಲ್ಲಿ ಅವರು 3–1 (11-4, 9-11, 11-7, 11-5)ರಿಂದ ಪಶ್ಚಿಮ ಬಂಗಾಳದ ಅಕ್ಷಿತಾ ಮಹಾತೊ ಅವರನ್ನು ಹಿಮ್ಮೆಟ್ಟಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.