ಬೆಂಗಳೂರು: ಕರ್ನಾಟಕದ ತನಿಷ್ಕಾ ಕಪಿಲ್ ಕಾಳಭೈರವ್ ಅವರು ಇಂದೋರ್ನಲ್ಲಿ ನಡೆಯುತ್ತಿರುವ ಕೆಡೆಟ್ ಮತ್ತು ಸಬ್ಜೂನಿಯರ್ ರಾಷ್ಟ್ರೀಯ ಟೇಬಲ್ ಟೆನಿಸ್ ಟೂರ್ನಿಯ11 ವರ್ಷದೊಳಗಿನ ಬಾಲಕಿಯರ ವಿಭಾಗದ ಬೆಳ್ಳಿ ಪದಕ ಗಳಿಸಿದರು.
ಅಭಯ್ ಪ್ರಶಾಲ್ ಕ್ರೀಡಾಂಗಣಲ್ಲಿ ಶನಿವಾರ ನಡೆದ ಫೈನಲ್ ಹಣಾಹಣಿಯಲ್ಲಿ ತನಿಷ್ಕಾ 10-12, 5-11, 4-11ರಲ್ಲಿ ಅಂಕೋಲಿಕಾ ಚಕ್ರವರ್ತಿ ವಿರುದ್ಧ ಸೋತರು. ಸೆಮಿಫೈನಲ್ನಲ್ಲಿ ಸಹಾ ರಂಜಿನಿ ವಿರುದ್ಧ 7-11, 12-10, 11-13, 11-4, 11-8ರಲ್ಲಿ ಗೆದ್ದಿದ್ದ ಅವರು ಫೈನಲ್ನ ಮೊದಲ ಗೇಮ್ನಲ್ಲಿ ಮಾತ್ರ ಸ್ವಲ್ಪ ಪ್ರತಿರೋಧ ಒಡ್ಡಿದರು.
ಕ್ವಾರ್ಟರ್ ಫೈನಲ್ನಲ್ಲಿ ತನಿಷ್ಕಾ 10-12, 11-7, 11-8, 11-7ರಲ್ಲಿ ಪರ್ಣವಿ ಸೇಥ್ ವಿರುದ್ಧ ಜಯ ಗಳಿಸಿದರು. ಅರ್ಹತಾ ಸುತ್ತಿನ ಎರಡು ಪಂದ್ಯಗಳನ್ನು ಆಡಿ ಬಂದಿದ್ದ ಅವರು ಮೊದಲ ಸುತ್ತಿನಲ್ಲಿ ಶಾರಿಕಾ ಶಾಹಿದ್ ಮತ್ತು ಮಾಯಾ ಅಶ್ವತ್ಥ್ ವಿರುದ್ಧ ಗೆದ್ದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.