ಬೆಂಗಳೂರು: ಕರ್ನಾಟಕದ ತನಿಷ್ಕಾ ಕಾಲಭೈರವ ಅವರು ಗೋವಾದಲ್ಲಿ ನಡೆದ ರಾಷ್ಟ್ರೀಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯ 13 ವರ್ಷದೊಳಗಿನವರ ಬಾಲಕಿಯರ ಸಿಂಗಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ತನಿಷ್ಕಾ ಫೈನಲ್ ಪಂದ್ಯದಲ್ಲಿ 11-6, 11-9, 11-1ರಿಂದ ಪಶ್ಚಿಮ ಬಂಗಾಳದ ಆಯುಷಿ ಹಜ್ರಾ ಅವರನ್ನು ಸೋಲಿಸಿದರು.
ಅದಕ್ಕೂ ಮೊದಲು ಸೆಮಿಫೈನಲ್‌ನಲ್ಲಿ ಅವರು 11-6, 17-15, 11-6ರಿಂದ ಗುಜರಾತ್‌ನ ದಾನಿಯಾ ಗೋಡಿಲ್ ಅವರನ್ನು ಮಣಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.