ADVERTISEMENT

ವಿಶ್ವ ಟೆನ್‌ಕೆ ಓಟ: ವೆಲೇರಿ ಆ್ಯಡಮ್ಸ್ ರಾಯಭಾರಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2024, 4:47 IST
Last Updated 6 ಏಪ್ರಿಲ್ 2024, 4:47 IST
<div class="paragraphs"><p>ವೆಲೇರಿ ಆ್ಯಡಮ್ಸ್</p></div>

ವೆಲೇರಿ ಆ್ಯಡಮ್ಸ್

   

ಬೆಂಗಳೂರು: ನ್ಯೂಜಿಲೆಂಡ್‌ನ ವಿಶ್ವಖ್ಯಾತ ಶಾಟ್‌ಪಟ್‌ ಥ್ರೊ ಸ್ಪರ್ಧಿ ವೆಲೇರಿ ಆ್ಯಡಮ್ಸ್ ಅವರನ್ನು 16ನೇ ಟಿಸಿಎಸ್‌ ವಿಶ್ವ 10ಕೆ ಬೆಂಗಳೂರು ಓಟದ ಪ್ರಚಾರ ರಾಯಭಾರಿಯಾಗಿ ನೇಮಕ ಮಾಡಲಾಗಿದೆ.

ಆ್ಯಡಮ್ಸ್‌ ಅವರು 2008 (ಬೀಜಿಂಗ್) ಮತ್ತು 2012ರ (ಲಂಡನ್) ಒಲಿಂಪಿಕ್ಸ್‌ನಲ್ಲಿ ಮಹಿಳಾ ವಿಭಾಗದಲ್ಲಿ ಶಾಟ್‌ಪಟ್‌ ಚಿನ್ನ ಗೆದ್ದಿದ್ದರು. ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಹಾಗೂ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಬಳಿಕ ನಿವೃತ್ತಿ ಪಡೆದಿದ್ದರು.

ADVERTISEMENT

‘ಓಟದ ಬಗ್ಗೆ ಭಾರತದಲ್ಲಿ ಹೆಚ್ಚುತ್ತಿರುವ ಉತ್ಸಾಹವು ಪ್ರೇರಣಾದಾಯಿಯಾಗಿದೆ’ ಎಂದು 39 ವರ್ಷದ ಆ್ಯಡಮ್ಸ್‌ ಈ ಸಂಬಂಧ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅವರು ನಾಲ್ಕು ಬಾರಿ ವಿಶ್ವ ಚಾಂಪಿಯನ್ ಕೂಡ ಆಗಿದ್ದಾರೆ.

ವೆಲೇರಿ ಅವರು ಪ್ರಸ್ತುತ ವಿಶ್ವ ಅಥ್ಲೆಟಿಕ್‌ ಕಮಿಷನ್‌ನಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ವಿಶ್ವದಾದ್ಯಂತ ಅಥ್ಲೀಟುಗಳ ಹಕ್ಕುಗಳ ಪರ ಅವರು ಹೋರಾಟ ನಡೆಸುತ್ತಿದ್ದಾರೆ. ವಿಶ್ವ ಯುವ, ಜೂನಿಯರ್ ಮತ್ತು ಸೀನಿಯರ್ ಮಟ್ಟದಲ್ಲಿ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದ ಮೂರನೇ ಮಹಿಳೆ ಎನ್ನು ಹಿರಿಮೆಯೂ ಅವರದು. 2014ರಲ್ಲಿ ಅಂತರರಾಷ್ಟ್ರೀಯ ಅಮೆಚೂರ್ ಅಥ್ಲೆಟಿಕ್ ಫೆಡರೇಷನ್‌ ಅವರಿಗೆ ‘ವಿಶ್ವದ ವರ್ಷದ ಅಥ್ಲೀಟ್‌’ ಗೌರವ ಪ್ರದಾನ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.