ADVERTISEMENT

ಕಂಚಿನ ಪದಕ ಗೆದ್ದ ದೀಪ್ತಿ ಜೀವಾಂಜಿಗೆ ₹1 ಕೋಟಿ ಬಹುಮಾನ ಘೋಷಿಸಿದ ತೆಲಂಗಾಣ ಸಿಎಂ

ಪಿಟಿಐ
Published 8 ಸೆಪ್ಟೆಂಬರ್ 2024, 5:28 IST
Last Updated 8 ಸೆಪ್ಟೆಂಬರ್ 2024, 5:28 IST
ದೀಪ್ತಿ ಜೀವಾಂಜಿ
ದೀಪ್ತಿ ಜೀವಾಂಜಿ   

ಹೈದರಾಬಾದ್: ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವ ದೀಪ್ತಿ ಜೀವಾಂಜಿ ಅವರಿಗೆ ₹1 ಕೋಟಿ ನಗದು, ವಾರಂಗಲ್‌ನಲ್ಲಿ 500 ಚದರ ಅಡಿ ಭೂಮಿ ಮತ್ತು ಗ್ರೂಪ್‌–II ಸೇವೆಯಲ್ಲಿ ಸೂಕ್ತ ಹುದ್ದೆಯನ್ನು ನೀಡುವುದಾಗಿ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್‌ ರೆಡ್ಡಿ ಘೋಷಿಸಿದ್ದಾರೆ.

ಜೀವಾಂಜಿ ಅವರ ಕೋಚ್‌ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತರಾದ ಎನ್‌. ರಮೇಶ್‌ ಅವರಿಗೂ ₹10 ಲಕ್ಷ ಬಹುಮಾನವನ್ನು ಸಿಎಂ ಘೋಷಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ವಿಶ್ವ ಚಾಂಪಿಯನ್‌ ದೀಪ್ತಿ ಜೀವಾಂಜಿ ಅವರು ಪ್ಯಾರಾಲಿಂಪಿಕ್ಸ್‌ನ ಮಹಿಳೆಯರ 400 ಮೀಟರ್‌ ಓಟದ ಟಿ20 ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

ADVERTISEMENT

ತೆಲಂಗಾಣದ ವಾರಂಗಲ್ ಜಿಲ್ಲೆಯ ಕಲ್ಲೆಡಾ ಗ್ರಾಮದ ಕೂಲಿ ಕಾರ್ಮಿಕ ಕುಟುಂಬದ ದೀಪ್ತಿ, ಏಷ್ಯನ್ ಪ್ಯಾರಾ ಕ್ರೀಡಾಕೂಟದ 400 ಮೀಟರ್ ಓಟದಲ್ಲೂ ಚಿನ್ನ ಗೆದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.