ADVERTISEMENT

ಟೆನಿಸ್‌: ಆರಾಧ್ಯಗೆ ಕಿರೀಟ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2024, 23:39 IST
Last Updated 5 ಅಕ್ಟೋಬರ್ 2024, 23:39 IST
<div class="paragraphs"><p>ಆರಾಧ್ಯ ಕ್ಷಿತಿಜ್</p></div>

ಆರಾಧ್ಯ ಕ್ಷಿತಿಜ್

   

ಬೆಂಗಳೂರು: ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ಕರ್ನಾಟಕದ ಆರಾಧ್ಯ ಕ್ಷಿತಿಜ್, ನವದೆಹಲಿಯ ಡಿಎಲ್‌ಟಿಎ ಕಾಂಪ್ಲೆಕ್ಸ್‌ನಲ್ಲಿ ನಡೆದ 29ನೇ ಫೆನೆಸ್ಟಾ ಓಪನ್ ರಾಷ್ಟ್ರೀಯ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ 18 ವರ್ಷ ದೊಳಗಿನವರ ಬಾಲಕರ ವಿಭಾಗದ ಪ್ರಶಸ್ತಿ ಗೆದ್ದರು.

ಶನಿವಾರ ನಡೆದ ಫೈನಲ್‌ ಹಣಾಹಣಿಯಲ್ಲಿ ಆರಾಧ್ಯ 5-7, 7-5, 6-4 ರಿಂದ ಮಣಿಪುರದ ಶಂಕರ್ ಹೈಸ್ನಾಮ್ ಅವರನ್ನು ಸೋಲಿಸಿದರು. ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದ್ದ ಕರ್ನಾಟಕದ ಆಟಗಾರ ನಂತರದ ಸೆಟ್‌ಗಳಲ್ಲಿ ಲಯ ಕಂಡುಕೊಂಡು ಗೆಲುವು ಸಾಧಿಸಿದರು.

ADVERTISEMENT

18 ವರ್ಷದೊಳಗಿನ ಬಾಲಕಿಯರ ಪ್ರಶಸ್ತಿ ಯನ್ನು ಮಹಾರಾಷ್ಟ್ರದ ಪ್ರಿಶಾ ಶಿಂಧೆ ಗೆದ್ದರು. ಅವರು ಫೈನಲ್‌ನಲ್ಲಿ 1-6, 7-6, 6-2ರಿಂದ ತಮಿಳುನಾಡಿನ ದಿಯಾ ರಮೇಶ್ ಅವರನ್ನು ಸೋಲಿಸಿದರು.

ಶ್ರೇಯಾಂಕ ರಹಿತ ತಮಿಳುನಾಡಿನ ರೆತಿನ್ ಪ್ರಣವ್ ಆರ್‌.ಎಸ್ ಮತ್ತು ಅಗ್ರ ಶ್ರೇಯಾಂಕದ ಗುಜರಾತ್‌ನ ವೈದೇಹಿ ಚೌಧರಿ ಕ್ರಮವಾಗಿ ಪುರುಷ ಮತ್ತು ಮಹಿಳೆಯರ ಓಪನ್‌ ವಿಭಾಗದ ಪ್ರಶಸ್ತಿಗಳನ್ನು ಗೆದ್ದುಕೊಂಡರು.

ಸ್ನೂಕರ್‌: ಸಮೀಕ್ಷಾಗೆ ಪ್ರಶಸ್ತಿ

ಬೆಂಗಳೂರು: ಸಮೀಕ್ಷಾ ದೇವನ್ ರಾಜ್ಯ ರ‍್ಯಾಂಕಿಂಗ್‌ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಟೂರ್ನಿಯ ಜೂನಿಯರ್ ಬಾಲಕಿಯರ ಸ್ನೂಕರ್ ಫೈನಲ್‌ನಲ್ಲಿ 2–1ರಿಂದ ಹರ್ಷಿತಾ ಭಾವಿ ಅವರನ್ನು ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಕರ್ನಾಟಕ ರಾಜ್ಯ ಬಿಲಿಯರ್ಡ್ಸ್ ಸಂಸ್ಥೆ ಯಲ್ಲಿ ಶನಿವಾರ ನಡೆದ ಪಂದ್ಯದ ಮೊದಲ ಸುತ್ತಿನಲ್ಲಿ ಸಮೀಕ್ಷಾ 54-33ರಿಂದ ಮೇಲುಗೈ ಸಾಧಿಸಿದರು. ಆದರೆ, ಎರಡನೇ ಸುತ್ತನ್ನು ಹರ್ಷಿತಾ 43-35ರಿಂದ ವಶಮಾಡಿಕೊಂಡರು. ಆದರೆ, ನಿರ್ಣಾಯಕ ಸುತ್ತಿನಲ್ಲಿ ಮತ್ತೆ ಸಮೀಕ್ಷಾ ಮೇಲುಗೈ ಸಾಧಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.