ಬರ್ಲಿನ್: ಅಗ್ರ ಶ್ರೇಯಾಂಕದ ಅಲೆಕ್ಸಾಂಡರ್ ಜ್ವರೇವ್, ಸ್ಟಟ್‌ಗರ್ಟ್ ಓಪನ್ ಟೆನಿಸ್ ಟೂರ್ನಿಯ ಎರಡನೇ ಸುತ್ತಿನಲ್ಲೇ ಹೊರಬಿದ್ದರು. ವಿಶ್ವಕ್ರಮಾಂಕದಲ್ಲಿ 170ನೇ ಸ್ಥಾನದಲ್ಲಿರುವ ಡಸ್ಟಿನ್ ಬ್ರೌನ್ 6–4, 6–7 (3), 6–3 ರಿಂದ ಜ್ವರೇವ್ ಅವರನ್ನು ಸೋಲಿಸಿದರು.
ವಿಶ್ವ ಕ್ರಮಾಂಕದಲ್ಲಿ ಐದನೇ ಸ್ಥಾನದಲ್ಲಿರುವ ಜರ್ಮನಿಯ ಜ್ವರೇವ್ ಗುರುವಾರ ನಡೆದ ಪಂದ್ಯದಲ್ಲಿಸ್ವದೇಶದ ಆಟಗಾರ ಚುರುಕಿನ ಆಟದ ಮುಂದೆ ಪರದಾಡಿದರು. ಜ್ವರೇವ್ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದರು. ಇದು ಈ ತಿಂಗಳ ಕೊನೆಯಲ್ಲಿ ನಡೆಯುವ ವಿಂಬಲ್ಡನ್‌ಗೆ ಮೊದಲು ನಡೆಯುತ್ತಿರುವ ಹುಲ್ಲಿನಂಕಣದ ಟೂರ್ನಿಯಾಗಿದೆ.
ಇಟಲಿಯ ಮಾಟೆಯೊ ಬರ್ರೆಟಿನಿ, ಇದಕ್ಕೆ ಮೊದಲು ಟೂರ್ನಿಯ ಮೊದಲ ಅನಿರೀಕ್ಷಿತ ಫಲಿತಾಂಶದಲ್ಲಿ ರಷ್ಯದ ಕರೆನ್ ಕಚನೋವ್ ಅವರನ್ನು 6–4, 6–2ರಿಂದ ಹಿಮ್ಮೆಟ್ಟಿಸಿದ್ದರು. ಕಚನೋವ್ ಕೂಡ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಎಂಟರ ಘಟ್ಟದಲ್ಲಿ ಆಡಿದ್ದರು. ಬರ್ರೆಟಿನಿ ಮುಂದಿನ ಪಂದ್ಯದಲ್ಲಿ ಅಮೆರಿಕದ ಡೆನಿಸ್ ಕುಡ್ಲ ವಿರುದ್ಧ ಆಡಲಿದ್ದಾರೆ. ಡೆನಿಸ್ ಇನ್ನೊಂದು ಪಂದ್ಯದಲ್ಲಿ 7–5, 6–7 (3), 7–6 (3) ರಿಂದ ವಿಶ್ವದ 16ನೇ ಕ್ರಮಾಂಕದ ಗೇಲ್ ಮೊನ್‌ಫಿಲ್ಸ್ ಅವರನ್ನು ಸೋಲಿಸಿ ವೃತ್ತಿಜೀವನದ ಮಹತ್ವದ ಗೆಲುವನ್ನು ದಾಖಲಿಸಿದದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.