ಮಂಗಳೂರು: ಅರವತ್ತರ ದಶಕದ ಮಹಿಳಾ ಹಾಕಿಯ ಚಾಂಪಿಯನ್ ಆಟಗಾರ್ತಿ ಮತ್ತು ಆಡಳಿತಗಾರ್ತಿ ಎಲ್ವಿರಾ ಬ್ರಿಟ್ಟೊ ಅವರಿಗೆ ಭಾರತೀಯ ಅಂಚೆ ಇಲಾಖೆ ಗೌರವ ಸಲ್ಲಿಸಿದೆ. ಅವರ ಹೆಸರಿನಲ್ಲಿ ಸಿದ್ಧಗೊಂಡಿರುವ ವಿಶೇಷ ಪೋಸ್ಟಲ್ ಕವರ್ ಇದೇ 29ರಂದು, ಕ್ರೀಡಾ ದಿನಾಚರಣೆಯಲ್ಲಿ ಬಿಡುಗಡೆಯಾಗಲಿದೆ.
ಬೆಂಗಳೂರು ಜಿಪಿಒದ ಮೇಘದೂತ ಸಭಾಂಗಣದಲ್ಲಿ ಅಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾರತ ಹಾಕಿ ತಂಡದ ಮಾಜಿ ನಾಯಕ ಎಂ.ಪಿ.ಗಣೇಶ್ ಅವರು
ಕವರ್ ಬಿಡುಗಡೆ ಮಾಡುವರು. ಎಲ್ವಿರಾ ಅವರ ಸಹೋದರಿಯರೂ ಭಾರತ ಮಹಿಳಾ ತಂಡದ ಮಾಜಿ ಆಟಗಾರ್ತಿಯರೂ ಆದ
ಮೇ ಬ್ರಿಟ್ಟೊ ಮತ್ತು ರೀಟಾ ಬ್ರಿಟ್ಟೊ
ಅವರು ಪಾಲ್ಗೊಳ್ಳುವರು.
ಭಾರತ ತಂಡದಲ್ಲಿ ಆಡಿದ್ದ ಎಲ್ವಿರಾ, ಮೇ ಮತ್ತು ರೀಟಾ ‘ಬ್ರಿಟ್ಟೊ ಸಹೋದರಿಯರು’ ಎಂದೇ ಹಾಕಿ ಲೋಕದಲ್ಲಿ ಚಿರಪರಿಚಿತರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.