ADVERTISEMENT

55ರ ಹರೆಯದಲ್ಲಿ 10ನೇ ಒಲಿಂಪಿಕ್ಸ್: ತಂದೆಯ ಆಸೆ ಪೂರೈಸಿದ ಜಾರ್ಜಿಯಾ ಶೂಟರ್

ಪಿಟಿಐ
Published 31 ಜುಲೈ 2024, 11:42 IST
Last Updated 31 ಜುಲೈ 2024, 11:42 IST
<div class="paragraphs"><p>ನಿನೊ&nbsp;ಸಲುಕ್‌ವಾಡ್ಜೆ</p></div>

ನಿನೊ ಸಲುಕ್‌ವಾಡ್ಜೆ

   

ಪ್ಯಾರಿಸ್‌: ಜಾರ್ಜಿಯಾದ ಶೂಟರ್‌ ನಿನೊ ಸಲುಕ್‌ವಾಡ್ಜೆ 10 ಒಲಿಂಪಿಕ್ಸ್‌ ಟೂರ್ನಿಗಳಲ್ಲಿ ಭಾಗವಹಿಸುವ ಮೂಲಕ ದಾಖಲೆ ಬರೆಯುವುದರ ಜೊತೆ ತಮ್ಮ ತಂದೆಯ ಆಸೆಯನ್ನು ಪೂರೈಸಿದ್ದಾರೆ.

55 ವರ್ಷದ ನಿನೊ ಸಲುಕ್‌ವಾಡ್ಜೆ ಅವರು ದಕ್ಷಿಣ ಕೊರಿಯಾದಲ್ಲಿ 1988ರಲ್ಲಿ ನಡೆದ ಒಲಿಂಪಿಕ್ಸ್‌ ಟೂರ್ನಿಯಲ್ಲಿ 10 ಮೀಟರ್‌ ಹಾಗೂ 25 ಮೀಟರ್‌ ಶೂಟಿಂಗ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗೆದಿದ್ದರು. ಇದಾಗಿ 20 ವರ್ಷಗಳ ನಂತರ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಪಡೆದಿದ್ದರು. 

ADVERTISEMENT

ಈ ಸಲದ ಒಲಿಂಪಿಕ್ಸ್‌ನಲ್ಲಿ 25 ಮೀಟರ್‌ ಶೂಟಿಂಗ್‌ನಲ್ಲಿ ಸ್ಪರ್ಧಿಸಿದ್ದ ಅವರು ಫೈನಲ್‌ ತಲುಪುವಲ್ಲಿ ವಿಫಲರಾದರು. ಕಳೆದ ಸಲ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಅವರು ಪದಕ ಗೆಲ್ಲಲು ಸಾಧ್ಯವಾಗಿರಲಿಲ್ಲ.

ಟೋಕಿಯೊ ಒಲಿಂಪಿಕ್ಸ್‌ ನನ್ನ ಕೊನೆಯದು ಎಂದು ನಿರ್ಧರಿಸಿದ್ದೆ. ಆದರೆ ನನ್ನ ತಂದೆ ನಿಧನರಾಗುವುದಕ್ಕೂ ಮುನ್ನ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಆಡುವಂತೆ ಪ್ರೇರಿಪಿಸಿದ್ದರು. ಇದು ಅವರ ಕೊನೆಯ ಆಸೆಯಾಗಿತ್ತು. ಈ ಟೂರ್ನಿಯಲ್ಲಿ ಭಾಗವಹಿಸುವ ಮೂಲಕ ಅವರ ಆಸೆಯನ್ನು ಪೂರೈಸಿದೆ ಎಂದು ನಿನೊ ಸಲುಕ್‌ವಾಡ್ಜೆ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

1988ರಲ್ಲಿ ಅವರು ಯುಎಸ್‌ಎಸ್‌ಆರ್‌ (ರಷ್ಯಾ ಒಕ್ಕೂಟ) ಪ್ರತಿನಿಧಿಸಿದ್ದರು. ನಂತರ ಜಾರ್ಜಿಯಾ ದೇಶವನ್ನು ಪ್ರತಿನಿಧಿಸಿದರು. ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಅವರು ಕಂಚು ಗೆದ್ದು ಜಾರ್ಜಿಯಾಗೆ ಅರ್ಪಿಸಿದ್ದರು. 

ನಿನೊ ಸಲುಕ್‌ವಾಡ್ಜೆ ಅವರ ತಂದೆಯೇ ಇವರಿಗೆ ಕೋಚ್‌ ಆಗಿದ್ದರು. ಈಕ್ವೆಸ್ಟೀಯನ್‌ ಕ್ರೀಡೆ ಪ್ರತಿನಿಧಿಸುತ್ತಿದ್ದ ಇಯಾನ್‌ ಮಿಲ್ಲರ್‌ ಕೂಡ 10 ಒಲಿಂಪಿಕ್ಸ್‌ ಟೂರ್ನಿಗಳಲ್ಲಿ ಭಾಗವಹಿಸಿದ್ದಾರೆ. ಇವರ ದಾಖಲೆಯನ್ನು ನಿನೊ ಸಲುಕ್‌ವಾಡ್ಜೆ ಸರಿಗಟ್ಟುವ ಮೂಲಕ ಮೊದಲ ಮಹಿಳಾ ಕ್ರೀಡಾಪಟುವಾಗಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.